11 ಬಾರಿ ಕೋವಿಡ್ ಲಸಿಕೆ ಪಡೆದ ವ್ಯಕ್ತಿಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ!
ತಾನು ಕೋವಿಡ್ 19 ಲಸಿಕೆಯ 11 ಡೋಸ್ಗಳನ್ನು ಪಡೆದುಕೊಂಡಿರುವುದಾಗಿ ಹೇಳಿಕೊಂಡಿರುವ ಬಿಹಾರದ 84 ವರ್ಷದ ವ್ಯಕ್ತಿ, ತನ್ನ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬುಧವಾರ ಬೆದರಿಕೆ ಹಾಕಿದ್ದಾರೆ.
Published: 12th January 2022 08:29 PM | Last Updated: 13th January 2022 01:43 PM | A+A A-

ಬ್ರಹ್ಮದೇವ ಮಂಡಲ್
ಪಾಟ್ನಾ: ತಾನು ಕೋವಿಡ್ 19 ಲಸಿಕೆಯ 11 ಡೋಸ್ಗಳನ್ನು ಪಡೆದುಕೊಂಡಿರುವುದಾಗಿ ಹೇಳಿಕೊಂಡಿರುವ ಬಿಹಾರದ 84 ವರ್ಷದ ವ್ಯಕ್ತಿ, ತನ್ನ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬುಧವಾರ ಬೆದರಿಕೆ ಹಾಕಿದ್ದಾರೆ.
11 ಬಾರಿ ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ಬ್ರಹ್ಮದೇವ ಮಂಡಲ್ ಅವರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದು, ಇದರಿಂದ ಹತಾಶನಾಗಿದ್ದಂತೆ ತೋರುತ್ತಿದೆ.
ಪ್ರಮುಖ ರಾಷ್ಟ್ರೀಯ ದಿನಪತ್ರಿಕೆಯೊಂದರ ವರದಿಯ ಪ್ರಕಾರ, ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ತಮ್ಮ ವಿರುದ್ಧ ಹೊರಿಸಲಾದ ಆರೋಪಗಳಿಂದ ಮುಕ್ತಗೊಳಿಸುವಂತೆ ಮಂಡಲ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ. ಅಲ್ಲದೆ ಪೊಲೀಸರು ತನ್ನ ವಿರುದ್ಧ ಕಾನೂನು ಕ್ರಮ ಕೈಗೊಂಡರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಇದನ್ನು ಓದಿ: ಬಿಹಾರ: 11 ಬಾರಿ ಲಸಿಕೆ ಪಡೆದ 84ರ ಅಜ್ಜ; 12ನೇ ಬಾರಿ ಪಡೆಯುವಾಗ ಸಿಕ್ಕಿಬಿದ್ದ ಭೂಪ!
ಬಿಹಾರದ ಮಾಧೆಪುರ ಜಿಲ್ಲೆಯ ಪುರೈನಿ ಪೊಲೀಸ್ ಠಾಣೆ ವ್ಯಾಪ್ತಿಯ ಓರಾಯ್ ಗ್ರಾಮದ ವೃದ್ಧ ಬ್ರಹ್ಮದೇವ್ ಮಂಡಲ್ ಎಂಬುವವರು ತಾವು ಈವರೆಗೂ 11 ಡೋಸ್ ಕೋವಿಡ್ ಲಸಿಕೆ ಪಡೆದಿಕೊಂಡಿರುವುದಾಗಿ ತಿಳಿಸಿದ್ದರು. ಅಲ್ಲದೆ, ಹಲವು ಡೋಸ್ಗಳನ್ನು ಪಡೆದುಕೊಂಡ ಬಳಿಕ ತಮ್ಮ ವಿವಿಧ ಆರೋಗ್ಯ ಸಮಸ್ಯೆಗಳು ಸುಧಾರಿಸಿರುವುದಾಗಿ ತಿಳಿಸಿದ್ದರು.
ಈ ಸಂಬಂಧ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಕೀಯ(ಪ್ರಭಾರ) ಅಧಿಕಾರಿ ಡಾ ವಿನಯ್ ಕೃಷ್ಣ ಪ್ರಸಾದ್ ಅವರು ನೀಡಿದ ದೂರಿನ ಆಧಾರದ ಮೇಲೆ ಪುರೈನಿ ಪೊಲೀಸರು ಜಾಮೀನು ರಹಿತ ಸೆಕ್ಷನ್ಗಳ ಅಡಿಯಲ್ಲಿ ಮಂಡಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.