ಸ್ವಾಮಿ ವಿವೇಕಾನಂದ ಜಯಂತಿ: ರಾಷ್ಟ್ರೀಯ ಯುವ ದಿನ ಆಚರಣೆ, ಪ್ರಧಾನಿ ಸೇರಿ ಗಣ್ಯರಿಂದ ಸ್ಮರಣೆ
18ನೇ ಶತಮಾನದಲ್ಲಿ ಭಾರತ ದೇಶ ಕಂಡ ಶ್ರೇಷ್ಠ ಧರ್ಮಗುರು, ತತ್ವಜ್ಞಾನಿ, ಸಮಾಜ ಸುಧಾರಕ, ಹಿಂದೂ ಧರ್ಮ ಪ್ರತಿಪಾದಕ ಸ್ವಾಮಿ ವಿವೇಕಾನಂದ. ಇಂದು ಜನವರಿ 12, ಅವರ 159ನೇ ಜನ್ಮಜಯಂತಿ. ಈ ದಿನವನ್ನು ಇಂದು ನಾವು ರಾಷ್ಟ್ರೀಯ ಯುವ ದಿನ ಎಂದು ಆಚರಿಸುತ್ತೇವೆ.
Published: 12th January 2022 10:36 AM | Last Updated: 12th January 2022 10:36 AM | A+A A-

ಸ್ವಾಮಿ ವಿವೇಕಾನಂದ
ನವದೆಹಲಿ: 18ನೇ ಶತಮಾನದಲ್ಲಿ ಭಾರತ ದೇಶ ಕಂಡ ಶ್ರೇಷ್ಠ ಧರ್ಮಗುರು, ತತ್ವಜ್ಞಾನಿ, ಸಮಾಜ ಸುಧಾರಕ, ಹಿಂದೂ ಧರ್ಮ ಪ್ರತಿಪಾದಕ ಸ್ವಾಮಿ ವಿವೇಕಾನಂದ. ಇಂದು ಜನವರಿ 12, ಅವರ 159ನೇ ಜನ್ಮಜಯಂತಿ. ಈ ದಿನವನ್ನು ಇಂದು ನಾವು ರಾಷ್ಟ್ರೀಯ ಯುವ ದಿನ ಎಂದು ಆಚರಿಸುತ್ತೇವೆ.
ಇಂದಿನ ಕೋಲ್ಕತ್ತಾದಲ್ಲಿ ಬಂಗಾಳಿ ಮನೆತನದಲ್ಲಿ 1863ರ ಜನವರಿ 12ರಂದು ಜನಿಸಿದ ಸ್ವಾಮಿ ವಿವೇಕಾನಂದರು ಸಮೃದ್ಧ ಚಿಂತಕರಾಗಿದ್ದರು, ಶ್ರೇಷ್ಠ ವಾಗ್ಮಿ ಮತ್ತು ಪರಮ ದೇಶಭಕ್ತ ಎನಿಸಿದ್ದರು.
ರಾಷ್ಟ್ರೀಯ ಯುವ ದಿನ ಆಚರಣೆ ಏಕೆ?: ವಿವೇಕಾನಂದರ ಬೋಧನೆಗಳು ಬಹಳಷ್ಟು ಯುವ ಭಾರತೀಯರಿಗೆ ಸ್ಫೂರ್ತಿ ನೀಡಿತು. 19 ನೇ ಶತಮಾನದಲ್ಲಿ ಆಧ್ಯಾತ್ಮಿಕ ಜಾಗೃತಿಯನ್ನು ತಂದಿತು. ಆದ್ದರಿಂದ ಅವರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ. ಅತೀಂದ್ರಿಯ ಮತ್ತು ಯೋಗಿ ರಾಮಕೃಷ್ಣ ಪರಮಹಂಸರ ಮಾರ್ಗದರ್ಶನದಲ್ಲಿ ಪುರಾತನ ಹಿಂದೂ ಧರ್ಮಗ್ರಂಥಗಳ ಮೂಲಕ ಭಾರತೀಯ ತತ್ವಶಾಸ್ತ್ರವನ್ನು ಮರುಶೋಧಿಸಿದ ಮತ್ತು ಅದನ್ನು ಮುಖ್ಯವಾಹಿನಿಯ ಭಾರತೀಯ ಚಿಂತನೆಗೆ ತಂದ ಭಾರತದ ಪ್ರಮುಖ ಚಿಂತಕರಲ್ಲಿ ಒಬ್ಬರು.
ಸ್ವಾಮಿ ವಿವೇಕಾನಂದರು 1893 ರಲ್ಲಿ ವಿಶ್ವ ಧರ್ಮಗಳ ಸಂಸತ್ತಿನಲ್ಲಿ ಭಾರತ ಮತ್ತು ಹಿಂದೂ ಧರ್ಮವನ್ನು ಪ್ರತಿನಿಧಿಸಿದ್ದರು. ಸ್ವಾಮಿ ವಿವೇಕಾನಂದರ ಜೀವನ ಮತ್ತು ಕಾರ್ಯ ಹಲವಾರು ವರ್ಷಗಳಿಂದ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದೆ. 1985ರಿಂದ ಭಾರತ ಸರ್ಕಾರವು ವಿವೇಕಾನಂದರ ವಿಚಾರಧಾರೆಗಳು ವಿಶೇಷವಾಗಿ ಯುವಕರನ್ನು ಪ್ರೇರೇಪಿಸುತ್ತದೆ ಮತ್ತು ಅವರ ಜೀವನವನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ಹೇಳಿ ರಾಷ್ಟ್ರೀಯ ಯುವ ದಿನ ಆಚರಿಸಲು ಪ್ರಾರಂಭಿಸಿತು.
ರಾಷ್ಟ್ರೀಯ ಯುವ ದಿನದ ಆಚರಣೆ
ಪ್ರತಿ ವರ್ಷ ರಾಷ್ಟ್ರೀಯ ಯುವ ದಿನವು ಶಾಲೆಗಳು ಮತ್ತು ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳು, ಸಮ್ಮೇಳನಗಳು, ಭಾಷಣಗಳು ಮತ್ತು ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಭಾರತದ ಯುವಕರಲ್ಲಿರುವ ಪ್ರತಿಭೆಯನ್ನು ಬಳಸಿಕೊಳ್ಳಲು ಸಹಾಯ ಮಾಡುವುದು ಮತ್ತು ವಿವಿಧ ಸಮಸ್ಯೆಗಳ ಬಗ್ಗೆ ಅವರು ಹೇಗೆ ಭಾವಿಸುತ್ತಾರೆ ಎಂಬುದನ್ನು ವ್ಯಕ್ತಪಡಿಸಲು ವೇದಿಕೆಯನ್ನು ನೀಡುವುದು ಇದರ ಉದ್ದೇಶವಾಗಿದೆ. ರಾಷ್ಟ್ರೀಯ ಯುವ ದಿನದ ಆಚರಣೆಯು ಭಾರತದ ಯುವಜನರು ಭಾಗವಹಿಸುವ, ಹಂಚಿಕೊಳ್ಳುವ ಮತ್ತು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವ ಮತ್ತು ಸ್ವಾಮಿ ವಿವೇಕಾನಂದರ ಜೀವನ ಮತ್ತು ಕಾರ್ಯಗಳನ್ನು ಆಚರಿಸುವ ವಿವಿಧ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.
ರಾಷ್ಟ್ರೀಯ ಯುವ ದಿನ 2022 ರಾಷ್ಟ್ರೀಯ ಯುವ ಉತ್ಸವ 2022 ರ ಉದ್ಘಾಟನೆಯೊಂದಿಗೆ ಪ್ರಾರಂಭವಾಗುತ್ತದೆ. ಆರಂಭದಲ್ಲಿ ಪುದುಚೇರಿಯಲ್ಲಿ ಆನ್-ಗ್ರೌಂಡ್ ಈವೆಂಟ್ ಎಂದು ಯೋಜಿಸಲಾಗಿತ್ತು, ಭಾರತದಲ್ಲಿ ಕೊವಿಡ್ ಮೂರನೇ ಅಲೆಯ ಆತಂಕವಿರುವ ಕಾರಣ ಆ ಬಾರಿ ಆಚರಣೆಯು ವರ್ಚುವಲ್ ಆಗಿರುತ್ತದೆ.
ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಸ್ಮರಣೆ: ಸ್ವಾಮಿ ವಿವೇಕಾನಂದರ ಜಯಂತಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅವರದು ರಾಷ್ಟ್ರೀಯ ಪುನರುತ್ಥಾನಕ್ಕೆ ಮೀಸಲಾದ ಜೀವನ. ಅವರು ಅನೇಕ ಯುವಕರನ್ನು ರಾಷ್ಟ್ರ ನಿರ್ಮಾಣಕ್ಕಾಗಿ ಕೆಲಸ ಮಾಡಲು ಪ್ರೇರೇಪಿಸಿದ್ದಾರೆ. ನಮ್ಮ ರಾಷ್ಟ್ರಕ್ಕಾಗಿ ಅವರು ಕಂಡ ಕನಸುಗಳನ್ನು ಈಡೇರಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಆಶಿಸಿದ್ದಾರೆ.
I pay tributes to the great Swami Vivekananda on his Jayanti. His was a life devoted to national regeneration. He has motivated many youngsters to work towards nation building. Let us keep working together to fulfil the dreams he had for our nation.
— Narendra Modi (@narendramodi) January 12, 2022
ಇನ್ನು ರಾಜ್ಯ, ರಾಷ್ಟ್ರ ನಾಯಕರು, ಗಣ್ಯರು, ದೇಶಪ್ರೇಮಿಗಳು ಇಂದು ಸ್ವಾಮಿ ವಿವೇಕಾನಂದರನ್ನು ಸ್ಮರಿಸಿಕೊಂಡಿದ್ದಾರೆ.
हर भारतीय के प्रेरणास्रोत युगप्रवर्तक स्वामी विवेकानंद जी ने पूरे विश्व को भारतीय संस्कृति के मूल्यों से पल्लवित किया व अपने प्रेरक विचारों से युवाओं में राष्ट्र निर्माण हेतु नई चेतना जागृत की।
— Amit Shah (@AmitShah) January 12, 2022
ऐसे महामानव की जयंती पर उन्हें कोटिशः नमन व सभी को राष्ट्रीय युवा दिवस की शुभकामनाएं। pic.twitter.com/CLLJfoxxqi