ಭಾರತಕ್ಕೆ ಹೊರಟ್ಟಿದ್ದ ವಿಮಾನಗಳ ನಡುವೆ ತಪ್ಪಿದ ಮುಖಾಮುಖಿ ಡಿಕ್ಕಿ: ನೂರಾರು ಪ್ರಯಾಣಿಕರು ಪಾರು
ದುಬೈನ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ವೇಳೆಯಲ್ಲಿ ಭಾರತಕ್ಕೆ ತೆರಳುತ್ತಿದ್ದ ಎರಡು ಎಮಿರೇಟ್ಸ್ ವಿಮಾನಗಳ ನಡುವೆ ಸಂಭವಿಸಬಹುದಾದ ಮುಖಾಮುಖಿ ಡಿಕ್ಕಿ ತಪ್ಪಿದ್ದು, ನೂರಾರು ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.
Published: 14th January 2022 07:13 PM | Last Updated: 14th January 2022 07:24 PM | A+A A-

ದುಬೈ ವಿಮಾನ ನಿಲ್ದಾಣ
ನವದೆಹಲಿ: ದುಬೈನ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ವೇಳೆಯಲ್ಲಿ ಭಾರತಕ್ಕೆ ತೆರಳುತ್ತಿದ್ದ ಎರಡು ಎಮಿರೇಟ್ಸ್ ವಿಮಾನಗಳ ನಡುವೆ ಸಂಭವಿಸಬಹುದಾದ ಮುಖಾಮುಖಿ ಡಿಕ್ಕಿ ತಪ್ಪಿದ್ದು, ನೂರಾರು ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ದುಬೈಯಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಎಕೆ-524 ವಿಮಾನ ರಾತ್ರಿ 9-45ಕ್ಕೆ ಟೇಕ್ ಆಫ್ ಆಗಬೇಕಿತ್ತು. ಮತ್ತು ಬೆಂಗಳೂರಿಗೆ ಹೊರಟ್ಟಿದ್ದ ಇಕೆ-568 ವಿಮಾನ ಕೂಡಾ ತನ್ನ ನಿಗದಿತ ವೇಳೆಯಲ್ಲಿ ಟೇಕ್ -ಆಫ್ ಆಗಿದೆ. ದುರಾದೃಷ್ಟವಶಾತ್, ಎರಡು ವಿಮಾನಗಳು ರನ್ ವೇ ಮೇಲೆ ಬಂದಿದ್ದರಿಂದ ಎದುರಾಗಿದ್ದ ಭಾರೀ ಅನಾಹುತ ತಪ್ಪಿದೆ.
ಎಮಿರೇಟ್ಸ್ ವಿಮಾನ ವೇಳಾಪಟ್ಟಿ ಪ್ರಕಾರ, ಎರಡು ವಿಮಾನಗಳ ನಿರ್ಗಮನ ಸಮಯದ ನಡುವೆ ಐದು ನಿಮಿಷಗಳ ಅಂತರವಿರುತ್ತದೆ. ದುಬೈನಿಂದ ಹೈದರಾಬಾದ್ ಗೆ ಬರುತ್ತಿದ್ದ ಇಕೆ -524 ವಿಮಾನ 30 ಆರ್ ನಿಂದ ಟೇಕ್ ಆಫ್ ಮಾಡಲು ಬರುತ್ತಿದ್ದಾಗ ಅದೇ ದಿಕ್ಕಿನಲ್ಲಿ ಅತಿ ವೇಗವಾಗಿ ಮತ್ತೊಂದು ವಿಮಾನ ಬರುತ್ತಿರುವುದನ್ನು ಸಿಬ್ಬಂದಿ ನೋಡಿದ್ದಾರೆ. ಟೇಕ್ ಆಫ್ ಅನ್ನು ತಕ್ಷಣ ತಿರಸ್ಕರಿಸಲು ಎಟಿಸಿಯಿಂದ ಸೂಚನೆ ಬಂದಿದೆ. ನಂತರ ವಿಮಾನ ಸುರಕ್ಷಿತವಾಗಿ ಕೆಳಗಿಳಿದಿದ್ದು, ನಂಬರ್ 4 ರನ್ ವೇ ಮೂಲಕ ಮೂಲಕ ರನ್ ವೇ ತೆರವುಗೊಳಿಸಿದೆ.
ದುಬೈನಿಂದ ಬೆಂಗಳೂರಿಗೆ ಹೊರಟ್ಟಿದ್ದ ಮತ್ತೊಂದು ವಿಮಾನ ಇಕೆ-568, ರನ್ ವೇ 30 ಆರ್ ನಿಂದ ಟೇಕ್ ಆಫ್ ಆಗಬೇಕಿತ್ತು. ಎಟಿಸಿ ಮಧ್ಯ ಪ್ರವೇಶ ನಂತರ ಬೆಂಗಳೂರಿಗೆ ತೆರಳುತ್ತಿದ್ದ ವಿಮಾನ ಟೇಕ್ ಆಫ್ ಆಗಿದ್ದು, ಹೈದರಾಬಾದ್ ಗೆ ಹೊರಟ್ಟಿದ್ದ ವಿಮಾನ ಟ್ಯಾಕ್ಸಿ ಬೇ ಗೆ ವಾಪಸ್ಸಾಗಿದ್ದು, ಕೆಲವು ನಿಮಿಷಗಳ ನಂತರ ಟೇಕ್ ಆಫ್ ಆಗಿರುವುದಾಗಿ ಘಟನೆ ಬಗ್ಗೆ ವ್ಯಕ್ತಿಯೊಬ್ಬರು ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಈ ಘಟನೆ ಬಗ್ಗೆ ಯುಎಇಯ ವಾಯುಯಾನ ತನಿಖಾ ಸಂಸ್ಥೆ' ದಿ ಏರ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಸೆಕ್ಟರ್ ತನಿಖೆ ಪ್ರಾರಂಭಿಸಿದೆ.