ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ: 46 ಮಂದಿಗೆ ತೀವ್ರ ಗಾಯ- ವಿಡಿಯೋ
ಕೋವಿಡ್-19 ಪ್ರಕರಣಗಳ ಹೆಚ್ಚಳದ ನಡುವೆ ಶುಕ್ರವಾರ ತಮಿಳುನಾಡಿನ ಮಧುರೈ ಜಿಲ್ಲೆಯ ಅವನಿಯಪುರಂನಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 300 ಗೂಳಿಗಳನ್ನು ಬೆದರಿಸಲು ಅಖಾಡಕ್ಕೆ ಬಿಡಲಾಯಿತು.
Published: 14th January 2022 03:37 PM | Last Updated: 14th January 2022 03:42 PM | A+A A-

ಜಲ್ಲಿಕಟ್ಟು ಸ್ಪರ್ಧೆಯ ಚಿತ್ರ
ಮಧುರೈ: ಕೋವಿಡ್-19 ಪ್ರಕರಣಗಳ ಹೆಚ್ಚಳದ ನಡುವೆ ಶುಕ್ರವಾರ ತಮಿಳುನಾಡಿನ ಮಧುರೈ ಜಿಲ್ಲೆಯ ಅವನಿಯಪುರಂನಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 300 ಗೂಳಿಗಳನ್ನು ಬೆದರಿಸಲು ಅಖಾಡಕ್ಕೆ ಬಿಡಲಾಯಿತು.
ಕೊಬ್ಬಿದ ಗೂಳಿಗಳನ್ನು ಪಳಗಿಸುವ ಪ್ರಯತ್ನದಲ್ಲಿ ಅನೇಕ ಮಂದಿ ವಿಫಲರಾದರು. ಗೂಳಿಗಳು ಅವರನ್ನು ಹಿಮೆಟ್ಟಿಸುತ್ತಾ ಮುಂದಕ್ಕೆ ಓಡಿದವು. ಈ ಸ್ಪರ್ಧೆಯಲ್ಲಿ 46 ಮಂದಿ ತೀವ್ರವಾಗಿ ಗಾಯಗೊಂಡಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
#WATCH Jallikattu competition in Avaniyapuram area of Madurai, Tamil Nadu
As many as 48 persons have sustained injuries in this event, as per a health official pic.twitter.com/ZqFRCC3GKd— ANI (@ANI) January 14, 2022
ಕೋವಿಡ್ ನಿಯಮ ಪಾಲನೆಯೊಂದಿಗೆ ಜಲ್ಲಿಕಟ್ಟು ಸ್ಪರ್ಧೆ ನಡೆಸಲು ಸರ್ಕಾರ ನಿರ್ಧರಿಸಿದ ನಂತರ ಸುಮಾರು 4,544 ಗೂಳಿಗಳ ಮಾಲೀಕರು ಹಾಗೂ 2001 ಗೂಳಿ ಪಳಗಿಸುವವರು ಸ್ಪರ್ಧೆಗಾಗಿ ಆನ್ ಲೈನ್ ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು.
ಕೋವಿಡ್ ನಿಂದಾಗಿ ಈ ಬಾರಿ ವಿಶೇಷ ಅತಿಥಿ ಪಾಲ್ಗೊಂಡಿರಲಿಲ್ಲ. ಪ್ರತಿ ವರ್ಷ ಪೊಂಗಲ್ ಸಂದರ್ಭದಲ್ಲಿ ತಮಿಳುನಾಡಿನ ಹಳ್ಳಿಗಳಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಜಲ್ಲಿಕಟ್ಟು ಸ್ಪರ್ಧೆ ಆಯೋಜಕರು ಚಿನ್ನದ ನಾಣ್ಯ, ವಾಷಿಂಗ್ ಮೆಷಿನ್, ಕಾರು, ಬೈಕ್ ಮತ್ತಿತರ ಕೊಡುಗೆಗಳನ್ನು ಘೋಷಿಸುತ್ತಾರೆ.