ಕಾಂಗ್ರೆಸ್ ಅಭ್ಯರ್ಥಿ ಅರ್ಚನಾ ಗೌತಮ್ ಬಿಕಿನಿ ಫೋಟೋ ವೈರಲ್: ಫ್ಯಾಷನ್ ಮತ್ತು ಪಾಲಿಟಿಕ್ಸ್ ಬೆರೆಸದಿರುವಂತೆ ಮನವಿ
ಹಸ್ತಿನಾಪುರದ ಕಾಂಗ್ರೆಸ್ ಅಭ್ಯರ್ಥಿ ಅರ್ಚನಾ ಗೌತಮ್ ಮಾಡೆಲಿಂಗ್ ದಿನಗಳಲ್ಲಿ ಬಿಕಿನಿ ತೊಟ್ಟ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Published: 15th January 2022 07:48 PM | Last Updated: 15th January 2022 07:48 PM | A+A A-

ಮೀರತ್: ಹಸ್ತಿನಾಪುರದ ಕಾಂಗ್ರೆಸ್ ಅಭ್ಯರ್ಥಿ ಅರ್ಚನಾ ಗೌತಮ್ ಮಾಡೆಲಿಂಗ್ ದಿನಗಳಲ್ಲಿ ಬಿಕಿನಿ ತೊಟ್ಟ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಫ್ಯಾಷನ್ ತಮ್ಮ ವೃತ್ತಿಯಾಗಿದ್ದು, ವೃತ್ತಿ ಮತ್ತು ರಾಜಕೀಯವನ್ನು ಬೆರೆಸಬೇಡಿ ಎಂದು ವಿನಂತಿಸಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಅರ್ಜಿ ವಜಾ
ಮಿಸ್ ಬಿಕಿನಿ ಇಂಡಿಯಾ 2018, ಮಿಸ್ ಉತ್ತರ ಪ್ರದೇಶ 2014 ಮತ್ತು ಮಿಸ್ ಕಾಸ್ಮೊ ವಲ್ರ್ಡ್ 2018ರಲ್ಲಿ ವಿಜೇತರಾಗಿದ್ದ ಅರ್ಚನಾ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
ಇದನ್ನೂ ಓದಿ: ರಸ್ತೆಗಳನ್ನು ನಟಿ ಕಂಗನಾ ರಣಾವತ್ ಕೆನ್ನೆಗೆ ಹೋಲಿಸಿ ವಿವಾದಕ್ಕೆ ಸಿಲುಕಿದ ಕಾಂಗ್ರೆಸ್ ಶಾಸಕ!
ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ರಂಗದೊಂದಿಗೆ ಫ್ಯಾಷನ್ ಜಗತನ್ನು ಬೆರೆಸಬೇಡಿ. ಈ ಕೃತ್ಯದಲ್ಲಿ ತೊಡಗಿದವರ ಮನಸ್ಥಿತಿ ಏನು ಎಂಬುದು ಗೊತ್ತಾಗುತ್ತದೆ. ನನ್ನ ವೃತ್ತಿಯ ಬಗ್ಗೆ ನನಗೆ ಸದಾ ಗೌರವ ಮತ್ತು ಹೆಮ್ಮೆ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹದಗೆಟ್ಟ ಚಾಲಕನ ಆರೋಗ್ಯ: 10 ಕಿ.ಮೀ ಬಸ್ ಚಲಾಯಿಸಿ ಆಸ್ಪತ್ರೆಗೆ ದಾಖಲಿಸಿ ಚಾಲಕನ ಜೀವ ಉಳಿಸಿದ ಮಹಿಳೆ, ವಿಡಿಯೋ ವೈರಲ್!