ರಸ್ತೆಗಳನ್ನು ನಟಿ ಕಂಗನಾ ರಣಾವತ್ ಕೆನ್ನೆಗೆ ಹೋಲಿಸಿ ವಿವಾದಕ್ಕೆ ಸಿಲುಕಿದ ಕಾಂಗ್ರೆಸ್ ಶಾಸಕ!
ಜಾರ್ಖಂಡ್ನ ತಮ್ಮ ಕ್ಷೇತ್ರವಾದ ಜಮ್ತಾರಾದಲ್ಲಿ ರಸ್ತೆಗಳು ನಟಿ ಕಂಗನಾ ರಣಾವತ್ ಕೆನ್ನೆಗಿಂತ ಸುಂದರವಾಗಲಿದೆ ಎಂದು ಭರವಸೆ ನೀಡುವ ಮೂಲಕ ಕಾಂಗ್ರೆಸ್ ಶಾಸಕ ಡಾ ಇರ್ಫಾನ್ ಅನ್ಸಾರಿ ವಿವಾದಕ್ಕೆ ಸಿಲುಕಿದ್ದಾರೆ.
Published: 15th January 2022 01:11 PM | Last Updated: 15th January 2022 01:11 PM | A+A A-

ಸಂಗ್ರಹ ಚಿತ್ರ
ಜಮ್ತಾರಾ: ಜಾರ್ಖಂಡ್ನ ತಮ್ಮ ಕ್ಷೇತ್ರವಾದ ಜಮ್ತಾರಾದಲ್ಲಿ ರಸ್ತೆಗಳು ನಟಿ ಕಂಗನಾ ರಣಾವತ್ ಕೆನ್ನೆಗಿಂತ ಸುಂದರವಾಗಲಿದೆ ಎಂದು ಭರವಸೆ ನೀಡುವ ಮೂಲಕ ಕಾಂಗ್ರೆಸ್ ಶಾಸಕ ಡಾ ಇರ್ಫಾನ್ ಅನ್ಸಾರಿ ವಿವಾದಕ್ಕೆ ಸಿಲುಕಿದ್ದಾರೆ.
ಶುಕ್ರವಾರ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಡಾ ಇರ್ಫಾನ್ ಅನ್ಸಾರಿ, “ಜಮಾತಾರಾದಲ್ಲಿ 14 ವಿಶ್ವ ದರ್ಜೆಯ ರಸ್ತೆಗಳ ನಿರ್ಮಾಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಚಲನಚಿತ್ರ ನಟಿ ಕಂಗನಾ ರಣಾವತ್ ಅವರ ಕೆನ್ನೆಗಿಂತ ರಸ್ತೆಗಳು ಉತ್ತಮವಾಗಿರುತ್ತವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ಡಾ ಇರ್ಫಾನ್ ಅನ್ಸಾರಿ, ದೀರ್ಘಕಾಲದವರೆಗೆ ಫೇಸ್ ಮಾಸ್ಕ್ ಧರಿಸಬಾರದು ಏಕೆಂದರೆ ಅದು ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಹೇಳಿದ್ದರು. ವೈದ್ಯರ ಮಾತುಗಳನ್ನು ಪ್ರಸ್ತಾಪಿಸಿದ ಶಾಸಕರು, ಮಾಸ್ಕ್ಗಳ ಅತಿಯಾದ ಮತ್ತು ದೀರ್ಘಕಾಲದವರೆಗೆ ಬಳಸಿದರೆ ಇಂಗಾಲದ ಡೈಆಕ್ಸೈಡ್ನಿಂದ ಉಸಿರಾಡಲು ಕಾರಣವಾಗುತ್ತದೆ ಎಂದು ಹೇಳಿದ್ದರು.
ನವೆಂಬರ್ 2021ರಲ್ಲಿ ಹೊಸದಾಗಿ ನೇಮಕಗೊಂಡ ರಾಜಸ್ಥಾನ ಸಚಿವ ರಾಜೇಂದ್ರ ಸಿಂಗ್ ಗುಧಾ, ರಾಜ್ಯದ ರಸ್ತೆಗಳನ್ನು ನಟಿ ಕತ್ರಿನಾ ಕೈಫ್ ಕೆನ್ನೆಗಳಿಗೆ ಹೋಲಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು.
ಕಳೆದ ತಿಂಗಳು, ಮಹಾರಾಷ್ಟ್ರದ ಸಚಿವ ಮತ್ತು ಹಿರಿಯ ಶಿವಸೇನೆ ನಾಯಕ ಗುಲಾಬ್ರಾವ್ ಪಾಟೀಲ್ ತಮ್ಮ ಕ್ಷೇತ್ರದ ರಸ್ತೆಗಳನ್ನು ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿ ರಾಜ್ಯ ಮಹಿಳಾ ಆಯೋಗದ ಕೆಂಗಣ್ಣಿಗೆ ಗುರಿಯಾದ ಬಳಿಕ ಕ್ಷಮೆಯಾಚಿಸಿದ್ದರು.