
ಸಾಂದರ್ಭಿಕ ಚಿತ್ರ
ಲಖನೌ: ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಯೋಗಿ ಆದಿತ್ಯನಾಥ್ ಗುಜರಾತಿನಿಂದ ಪಕ್ಷದ ಕಾರ್ಯಕರ್ತರನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸ್ಥಳೀಯ ಕಾರ್ಯಕರ್ತರಿಗೆ ತರಬೇತಿ ನೀಡಲು ಗುಜರಾತಿನಿಂದ ಬಿಜೆಪಿ ಕಾರ್ಯಕರ್ತರನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎನ್ನುವುದು ಅಖಿಲೇಶ್ ಆರೋಪ.
ಇದನ್ನೂ ಓದಿ: ಯುಪಿ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, ಗೋರಖ್ ಪುರದಿಂದ ಯೋಗಿ ಆದಿತ್ಯನಾಥ್ ಸ್ಪರ್ಧೆ
ಚುನಾವಣೆಯಲ್ಲಿ ಗೆಲ್ಲಲು ಅಡ್ಡ ಮಾರ್ಗಗಳನ್ನು ಹೇಳಿಕೊಂಡುತ್ತಿರುವ ಗುಜರಾತ್ ಪ್ರಚಾರ ತಂಡದ ಕಾರ್ಯಕರ್ತರನ್ನು ಹಿಂದಕ್ಕೆ ಕಳುಹಿಸಬೇಕು ಎಂದು ಅಖಿಲೇಶ್ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ. ಗಾಳಿ ಸುದ್ದಿ ಮತ್ತು ದ್ವೇಷವನ್ನು ಹರಡುವುದು ಇದರ ಹಿಂದಿನ ಉದ್ದೇಶ, ಇದರಿಂದಾಗಿ ರಾಜ್ಯದಲ್ಲಿ ಪಾರದರ್ಶಕ ಮಾದರಿಯಲ್ಲಿ ಚುನಾವಣೆ ನಡೆಯುವುದು ಅನುಮಾನ ಎಂದು ಅವರು ಅಖಿಲೇಶ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಸಂಕ್ರಾಂತಿಯಂದು ದಲಿತರ ಮನೆಯಲ್ಲಿ ಭೋಜನ ಸವಿದ ಸಿಎಂ ಯೋಗಿ ಆದಿತ್ಯನಾಥ್- ವಿಡಿಯೋ