ಬಿಎಸ್ಎಫ್ ಅಧಿಕಾರಿಯಿಂದ 125 ಕೋಟಿ ರೂ. ವಂಚನೆ: ಅಕ್ರಮ ಹಣ ವರ್ಗಾವಣೆಗೆ ಬ್ಯಾಂಕ್ ಮ್ಯಾನೇಜರ್ ಸೋದರಿ ನೆರವು
ಹರಿಯಾಣದ ಗಡಿ ಭದ್ರತಾ ಪಡೆ ಅಧಿಕಾರಿಯಿಂದ 14 ಕೋಟಿ ರೂ. ನಗದು, ₹ 1 ಕೋಟಿ ಮೌಲ್ಯದ ಚಿನ್ನಾಭರಣಗಳು ಮತ್ತು ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್ ಸೇರಿದಂತೆ 7 ಐಷಾರಾಮಿ ಕಾರು ವಶಪಡಿಸಿಕೊಳ್ಳಲಾಗಿದೆ.
Published: 16th January 2022 08:58 PM | Last Updated: 16th January 2022 08:58 PM | A+A A-

ಪ್ರವೀಣ್ ಯಾದವ್ (ಒಳಚಿತ್ರದಲ್ಲಿ ವಶಪಡಿಸಿಕೊಳ್ಳಲಾದ ಕಾರುಗಳು ಮತ್ತು ನಗದು )
ಗುರ್ಗಾಂವ್: ಭದ್ರತಾ ಪಡೆ ಅಧಿಕಾರಿಯೋರ್ವರು ಭಾಗಿಯಾದ 125 ಕೋಟಿ ರೂ. ಮೊತ್ತದ ಭಾರೀ ದೊಡ್ಡ ವಂಚನೆ ಬಯಲಿಗೆಳೆಯಲಾಗಿದೆ.
ಇದನ್ನೂ ಓದಿ: ಭಾರತೀಯ ಸೇನೆಗೆ ಹೊಸ ಯೂನಿಫಾರ್ಮ್: ಎಲ್ಲಾ ಹವಾಮಾನದಲ್ಲೂ ಧರಿಸಬಲ್ಲ ಆರಾಮದಾಯಕ ಸಮವಸ್ತ್ರ
ಹರಿಯಾಣದ ಗಡಿ ಭದ್ರತಾ ಪಡೆ ಅಧಿಕಾರಿಯಿಂದ 14 ಕೋಟಿ ರೂ. ನಗದು, ₹ 1 ಕೋಟಿ ಮೌಲ್ಯದ ಚಿನ್ನಾಭರಣಗಳು ಮತ್ತು ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್ ಸೇರಿದಂತೆ 7 ಐಷಾರಾಮಿ ಕಾರುಗಳು, ಅಪಾರ ಸಂಪತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ರೈಲ್ವೇ ಭದ್ರತಾ ಪಡೆಯಿಂದ ಕಳೆದ ವರ್ಷ 600 ಮಂದಿ ಜೀವರಕ್ಷಣೆ: ಮಕ್ಕಳ ಕಳ್ಳಸಾಗಣೆ ತಡೆಗೆ ಕ್ರಮ
ಗುರ್ಗಾಂವ್ ಜಿಲ್ಲೆಯ ಮನೇಸರ್‌ನಲ್ಲಿರುವ ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಪ್ರಧಾನ ಕಚೇರಿಯಲ್ಲಿ (ಎನ್‌ಎಸ್‌ಜಿ) ನಿಯೋಜನೆಗೊಂಡಿದ್ದ ಬಿಎಸ್‌ಎಫ್ ಡೆಪ್ಯುಟಿ ಕಮಾಂಡೆಂಟ್ ಪ್ರವೀಣ್ ಯಾದವ್, ಐಪಿಎಸ್ ಅಧಿಕಾರಿಯಂತೆ ನಟಿಸಿ ಜನರಿಗೆ ₹ 125 ಕೋಟಿ ವಂಚನೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಧರ್ಮ ಸಂಸದ್ ಪ್ರಕರಣ: ಹರಿದ್ವಾರದ ಧರಣಿ ಸ್ಥಳದಿಂದ ಯತಿ ನರಸಿಂಹಾನಂದ ಪೊಲೀಸ್ ಠಾಣೆಗೆ
ಐಪಿಎಸ್ ಅಧಿಕಾರಿಯಂತೆ ನಟಿಸಿದ ಯಾದವ್ ಅವರು, ಎನ್‌ಎಸ್‌ಜಿ ಕ್ಯಾಂಪಸ್‌ನಲ್ಲಿ ನಿರ್ಮಾಣ ಗುತ್ತಿಗೆ ನೀಡುವ ನೆಪದಲ್ಲಿ ಜನರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. “ಜನರಿಂದ ವಂಚನೆ ಮಾಡಿದ ಎಲ್ಲ ಹಣವನ್ನು ಎನ್‌ಎಸ್‌ಜಿ ಹೆಸರಿನಲ್ಲಿ ನಕಲಿ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಎಲ್‌ಒಸಿಯಲ್ಲಿನ ಪರಿಸ್ಥಿತಿ ಕಳೆದ ವರ್ಷಕ್ಕಿಂತ ಉತ್ತಮವಾಗಿದೆ: ಸೇನಾ ಮುಖ್ಯಸ್ಥ ಮುಕುಂದ್ ನರವಾಣೆ
‘ಪ್ರವೀಣ್ ಯಾದವ್ ಷೇರು ಮಾರುಕಟ್ಟೆಯಲ್ಲಿ 60 ಲಕ್ಷ ರೂ ನಷ್ಟ ಅನುಭವಿಸಿದ್ದರು. ಈ ಹಾನಿಯನ್ನು ಅನ್ಯ ಮಾರ್ಗದಿಂದ ಸಂಗ್ರಹಿಸುವ ಉದ್ದೇಶದಿಂದ ವಾಮ ಮಾರ್ಗಕ್ಕೆ ಇಳಿದಿದ್ದರು.
ಇದನ್ನೂ ಓದಿ: ರಸ್ತೆಗಳನ್ನು ನಟಿ ಕಂಗನಾ ರಣಾವತ್ ಕೆನ್ನೆಗೆ ಹೋಲಿಸಿ ವಿವಾದಕ್ಕೆ ಸಿಲುಕಿದ ಕಾಂಗ್ರೆಸ್ ಶಾಸಕ!
125 ಕೋಟಿ ರೂ. ವಂಚನೆ ಪ್ರಕರಣ ಬೆಳಕಿಗೆ ಬರುವುದಕ್ಕೂ ಮುನ್ನ ಬಿಎಸ್ಎಫ್ ಅಧಿಕಾರಿ ಯಾದವ್ ಕೆಲವು ದಿನಗಳ ಹಿಂದೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ: ಭಾರತದ ಕೋವಿಡ್ ಲಸಿಕೆ ಅಭಿಯಾನಕ್ಕೆ 1 ವರ್ಷ: ಆರೋಗ್ಯ ಕಾರ್ಯಕರ್ತರು, ವಿಜ್ಞಾನಿಗಳಿಗೆ ಶುಭಾಶಯ ತಿಳಿಸಿದ ಮನ್ಸುಖ್ ಮಾಂಡವಿಯಾ