ಗೋವಾ: ಚೆಕ್ ಪೋಸ್ಟ್ ನಲ್ಲಿ ಭೀಕರ ರಸ್ತೆ ಅಪಘಾತ, ಪೇದೆ, ಐಆರ್ ಬಿಪಿ ಯೋಧ ಸಾವು: ಚಾಲಕನ ಬಂಧನ
ದಕ್ಷಿಣ ಗೋವಾದಲ್ಲಿ ಪೊಲೀಸ್ ಚೆಕ್ ಪೋಸ್ಟ್ ಬಳಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಐಆರ್ ಬಿ (ಭಾರತೀಯ ರಿಸರ್ವ್ ಬೆಟಾಲಿಯನ್) ಯೋಧ ಹಾಗೂ ಓರ್ವ ಪೊಲೀಸ್ ಪೇದೆ ಮೃತಪಟ್ಟಿದ್ದಾರೆ.
Published: 16th January 2022 12:22 PM | Last Updated: 16th January 2022 12:22 PM | A+A A-

ಸಾಂಕೇತಿಕ ಚಿತ್ರ)
ಪಣಜಿ: ದಕ್ಷಿಣ ಗೋವಾದಲ್ಲಿ ಪೊಲೀಸ್ ಚೆಕ್ ಪೋಸ್ಟ್ ಬಳಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಐಆರ್ ಬಿ (ಭಾರತೀಯ ರಿಸರ್ವ್ ಬೆಟಾಲಿಯನ್) ಯೋಧ ಹಾಗೂ ಓರ್ವ ಪೊಲೀಸ್ ಪೇದೆ ಮೃತಪಟ್ಟಿದ್ದಾರೆ.
ಸೆರಾಲಿಮ್ ಗ್ರಾಮದಲ್ಲಿ ಈ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾರಿನ ಚಾಲಕನನ್ನು ಬಂಧಿಸಲಾಗಿದೆ. ಮಧ್ಯರಾತ್ರಿ 12.15 ರ ಸುಮಾರಿಗೆ ನಾಕಾಬಂದಿ ಕರ್ತವ್ಯದಲ್ಲಿ ನಿರತರಾಗಿದ್ದ ಐಆರ್ ಬಿ ಯೋಧ ಹಾಗೂ ಹೋಂ ಗಾರ್ಡ್, ಪೊಲೀಸ್ ಪೇದೆಗೆ ಕಾರು ಡಿಕ್ಕಿ ಹೊಡೆದಿತ್ತು.
ಮೃತ ಪೇದೆಯನ್ನು ಗೋವಾ ಪೊಲೀಸ್ ನ ಶೈಲೇಶ್ ಗಾಂವ್ಕರ್ ಹಾಗೂ ಐಆರ್ ಬಿ ಯ ವಿಶ್ವಾಸ್ ಡೇಕರ್ ಎಂದು ಗುರುತಿಸಲಾಗಿದೆ. ವಿಶ್ವಾಸ್ ಎಂಬಾತ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಹೋಮ್ ಗಾರ್ಡ್ ಗೆ ಗಾಯಗಳಾಗಿಲ್ಲ, ಕಾರು ಹಾಗೂ ಕಾರಿನ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.