ಮುಂದಿನ 25 ವರ್ಷಗಳಲ್ಲಿ ಭಾರತ ಹಸಿರು, ನವೀಕೃತ ಇಂಧನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಿದೆ: ದಾವೊಸ್ ಶೃಂಗಸಭೆಯಲ್ಲಿ ಮೋದಿ
ಇದೇ ವೇಳೆ ಕ್ರಿಪ್ಟೊ ಕರೆನ್ಸಿ ಕುರಿತು ಅಂತಾರಾಷ್ಟ್ರೀಯ ಸಮುದಾಯ ಒಗ್ಗಟ್ಟಾಗಿ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
Published: 17th January 2022 11:46 PM | Last Updated: 18th January 2022 12:59 PM | A+A A-

ವರ್ಚುವಲ್ ಸಭೆಯಲ್ಲಿ ಮೋದಿ
ನವದೆಹಲಿ: ವಿಶ್ವ ಆರ್ಥಿಕ ಫೋರಂ ನ ದಾವೊಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡರು. ವರ್ಚುವಲ್ ಆಗಿ ನಡೆದ ಸಭೆಯಲ್ಲಿ ಮಾತುಕತೆ ನಡೆಸಿದರು.
ಇದನ್ನೂ ಓದಿ: ಗಣರಾಜ್ಯೋತ್ಸವ: ಸುಭಾಷ್ ಚಂದ್ರ ಬೋಸ್ ಕುರಿತ ಸ್ತಬ್ಧ ಚಿತ್ರಕ್ಕೆ ಅನುಮತಿ ನೀಡದ ಕೇಂದ್ರದ ವಿರುದ್ಧ ದೀದಿ ಕೆಂಡಾಮಂಡಲ
ಅವರು ಭಾರತ ಮುಂದಿನ 25 ವರ್ಷಗಳಲ್ಲಿ ಹಸಿರು ಮತ್ತು ನವೀಕೃತ ಇಂಧನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವ ವಿಶ್ವಾಸವನ್ನು ಪ್ರಧಾನಿ ಇದೇ ವೇಳೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಕ್ಷೇತ್ರಗಳಲ್ಲಿ ದೇಶದಲ್ಲಿ ಹೂಡಿಕೆ ನಡೆಸಲು ಇದು ಪ್ರಶಸ್ತವಾದ ಸಮಯ ಎಂದು ಅವರು ಕರೆ ನೀಡಿದರು.
ಇದನ್ನೂ ಓದಿ: ನಾರಾಯಣ ಗುರುಗಳಿಗೆ ಎಸಗಿರುವ ಅಪಮಾನ.. 'ಹಿಂದೂ ಹೃದಯ ಸಾಮ್ರಾಟ' ಮೋದಿ ಗಮನಕ್ಕೆ ಬಂದಿಲ್ಲವೇ: ಸಿದ್ದರಾಮಯ್ಯ ಪ್ರಶ್ನೆ
ಇದೇ ವೇಳೆ ಜಗತ್ತು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಕ್ರಿಪ್ಟೊ ಕರೆನ್ಸಿ ಕುರಿತು ಅಂತಾರಾಷ್ಟ್ರೀಯ ಸಮುದಾಯ ಒಗ್ಗಟ್ಟಾಗಿ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಜನವರಿ 16 ರಾಷ್ಟ್ರೀಯ ಸ್ಟಾರ್ಟ್ ಅಪ್ ದಿನವಾಗಿ ಆಚರಣೆ: ಮೋದಿ ಘೋಷಣೆ
ತಮ್ಮ ಭಾಷಣದಲ್ಲಿ ಭಾರತ ಜಗತ್ತಿನ ಔಷಧಾಲಯ ಎನ್ನುವ ಮಾತನ್ನು ಪುನರುಚ್ಛರಿಸಿರುವ ಮೋದಿ ಇಡೀ ಜಗತ್ತಿಗೆ ದಾಖಲೆಯ ಸಂಖ್ಯೆಯ ಎಂಜಿನಿಯರ್ ಗಳನ್ನು ಪೂರೈಸುತ್ತಿರುವ ರಾಷ್ಟ್ರ ಭಾರತ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯ: ಪ್ರಧಾನಿಗೆ ಮಾರ್ಗರೇಟ್ ಆಳ್ವ ಪತ್ರ