3 ಕಣ್ಣಿರುವ ಅಪರೂಪದ ಕರು ಜನನ: ಶಿವನ ಅವತಾರವೆಂದು ಪೂಜಿಸಲು ಮುಗಿಬಿದ್ದ ಜನ!
ಮೂರು ಕಣ್ಣುಗಳಿರುವ ಅಪರೂಪದ ವಿಚಿತ್ರ ಕರುವೊಂದು ಜನಿಸಿರುವ ಘಟನೆ ಚತ್ತೀಸ್ ಗಢದ ರಾಜನಂದಗಾಂವ್ ನಲ್ಲಿ ವರದಿಯಾಗಿದ್ದು, ಜನತೆ ಅದನ್ನು ಶಿವನ ಅವತಾರವೆಂದು ಭಾವಿಸಿ ಪೂಜಿಸಲು ಪ್ರಾರಂಭಿಸಿದ್ದಾರೆ.
Published: 17th January 2022 04:33 PM | Last Updated: 17th January 2022 05:30 PM | A+A A-

ಮೂರು ಕಣ್ಣಿನ ಕರು
ಚತ್ತೀಸ್ ಗಢ: ಮೂರು ಕಣ್ಣುಗಳಿರುವ ಅಪರೂಪದ ವಿಚಿತ್ರ ಕರುವೊಂದು ಜನಿಸಿರುವ ಘಟನೆ ಚತ್ತೀಸ್ ಗಢದ ರಾಜನಂದಗಾಂವ್ ನಲ್ಲಿ ವರದಿಯಾಗಿದ್ದು, ಜನತೆ ಅದನ್ನು ಶಿವನ ಅವತಾರವೆಂದು ಭಾವಿಸಿ ಪೂಜಿಸಲು ಪ್ರಾರಂಭಿಸಿದ್ದಾರೆ.
ಕಳೆದ ವಾರ ಈ ಕರು ಜನಿಸಿದ್ದು, ನಾಲ್ಕು ಮೂಗಿನ ಹೊಳ್ಳೆಗಳಿವೆ. ಪ್ರಾರಂಭದಲ್ಲಿ ಕರುವಿಗೆ ಹಣೆಯ ಮೇಲೆ ಪೆಟ್ಟಾಗಿದೆ ಎಂದುಕೊಂಡಿದ್ದೆವು. ಆದರೆ ಸರಿಯಾದ ಬೆಳಕಿನಲ್ಲಿ ಪರಿಶೀಲಿಸಿದಾಗ ಅದು ಕಣ್ಣು ಎಂಬುದು ತಿಳಿಯಿತು ಅಷ್ಟೇ ಅಲ್ಲದೇ ಮೂಗಿನಲ್ಲಿ ಎರಡು ರಂಧ್ರಗಳಿರುವ ಬದಲು ನಾಲ್ಕು ಇರುವುದು ಪತ್ತೆಯಾಗಿದೆ. ಜೊತೆಗೆ ಬಾಲವೂ ಹೆಣೆಯಲ್ಪಟ್ಟಂತೆ ಇದೆ ಎಂದು ಕರುವಿನ ಮಾಲಿಕ ನೀರಜ್ ಚಂಡೇಲ್ ಮಾಧ್ಯಮಗಳಿಗೆ ತಿಳಿಸಿದ್ದು, ಈ ಕರುವನ್ನು ಕಂಡ ಗ್ರಾಮಸ್ಥರು ಪೂಜಿಸಲು ಆರಂಭಿಸಿದ್ದು, ಶಿವನ ಅವತಾರವೆಂದು ಭಾವಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಕರುವಿನ ತಾಯಿ ಹಸು ಎರಡು ಸ್ವಾಭಾವಿಕವಾಗಿರುವ ಕರುಗಳಿಗೆ ಜನ್ಮ ನೀಡಿತ್ತು. ಈಗ ಈ ವಿಚಿತ್ರ ಕರುವನ್ನು ವೀಕ್ಷಿಸಲು ಬರುತ್ತಿರುವವರು ತೆಂಗಿನಕಾಯಿ, ಹಣವನ್ನು ತರುತ್ತಿದ್ದಾರೆ ಆಶೀರ್ವಾದ ಪಡೆಯುತ್ತಿದ್ದಾರೆ.
ನಾನು ಎಂದಿಗೂ ಇಂತಹ ಕರುವನ್ನು ಕಂಡಿರಲಿಲ್ಲ. ಇದು ಪವಾಡವೇ ಸರಿ ಎನ್ನುತ್ತಾರೆ ಗ್ರಾಮಸ್ಥ ನೀಲ್ ಕುಮಾರ್ ವರ್ಮ, ವೈದ್ಯರು ಕರುವಿನ ತಪಾಸಣೆಯನ್ನೂ ಮಾಡಿದ್ದು, ಆರೋಗ್ಯಕರವಾಗಿದೆ ಎಂದು ಹೇಳಿದ್ದಾರೆ.