
ರಾಹುಲ್ ಗಾಂಧಿ
ನವದೆಹಲಿ: ದಲಿತ ನಾಯಕ ರೋಹಿತ್ ಮೇಮುಲ ಪ್ರತಿರೋಧದ ನಾಯಕ ಮತ್ತು ಸಂಕೇತ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೋಮವಾರ ಅಭಿಪ್ರಾಯಪಟ್ಟಿದ್ದಾರೆ.
ಇಂದು ರೋಹಿತ್ ವೇಮುಲಾ ಅವರ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ದಲಿತ ನಾಯಕನಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶ್ರದ್ಧಾಂಜಲಿ ಸಲ್ಲಿಸಿದರು. ರೋಹಿತ್ ವೇಮುಲಾ ಅವರು ದಲಿತರ ನ್ಯಾಯಕ್ಕಾಗಿ ಹಾಗೂ ಅವರ ಮೇಲಿನ ತಾರತಮ್ಯ ವಿರುದ್ಧ ಧ್ವನಿ ಎತ್ತಿದವರು. ದಲಿತರ ಪರ ಮಾತನಾಡಿದ್ದಕ್ಕಾಗಿ ಹತ್ಯೆ ಮಾಡಲಾಗಿದೆ” ಎಂದು ಅವರು ಟ್ವಿಟರ್ ನಲ್ಲಿ ಹೇಳಿದ್ದಾರೆ.
ಇದನ್ನು ಓದಿ: ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ ಆರ್ಭಟಕ್ಕೆ 'ವೆಲ್ ಡನ್' ಎಂದ ರಾಹುಲ್!
“ವರ್ಷಗಳು ಕಳೆದರೂ, ರೋಹಿತ್ ವೇಮುಲ ಪ್ರತಿರೋಧದ ಸಂಕೇತವಾಗಿ ಮತ್ತು ಅವನ ಧೈರ್ಯಶಾಲಿ ತಾಯಿಯ ಭರವಸೆಯ ಸಂಕೇತವಾಗಿ ಉಳಿಯುತ್ತಾರೆ. ದಲಿತರ ನ್ಯಾಯಕ್ಕಾಗಿ ಕೊನೆಯವರೆಗೂ ಹೋರಾಡಿದ್ದಕ್ಕಾಗಿ, ರೋಹಿತ್ ನನ್ನ ನಾಯಕ, ಅನ್ಯಾಯಕ್ಕೊಳಗಾದ ನನ್ನ ಸಹೋದರ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಹೈದರಾಬಾದ್ ವಿಶ್ವವಿದ್ಯಾನಿಲಯದ 26 ವರ್ಷದ ದಲಿತ ವಿದ್ಯಾರ್ಥಿ ವೇಮುಲಾ ಅವರು ಕಿರುಕುಳದ ಆರೋಪದ ಮೇಲೆ ಜನವರಿ 17, 2016 ರಂದು ಆತ್ಮಹತ್ಯೆ ಮಾಡಿಕೊಂಡರು. ಅವರ ಮರಣವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತೀಯತೆಯ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನಕ್ಕೆ ಪ್ರಚೋದಿಸಿತ್ತು.