ಪಂಜಾಬ್ ವಿಧಾನಸಭೆ ಚುನಾವಣೆ: ಭಗವಂತ್ ಮನ್ ಆಮ್ ಆದ್ಮಿ ಪಾರ್ಟಿಯ ಸಿಎಂ ಅಭ್ಯರ್ಥಿ
ಪಂಜಾಬ್ ನ ಸಂಗ್ರೂರು ಕ್ಷೇತ್ರದ ಆಮ್ ಆದ್ಮಿ ಪಕ್ಷದ ಲೋಕಸಭಾ ಸದಸ್ಯ ಭಗವಂತ್ ಮನ್ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸಿಎಂ ಅಭ್ಯರ್ಥಿಯಾಗಿದ್ದಾರೆ ಎಂದು ದೆಹಲಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ ( Aam Aadmi Party) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
Published: 18th January 2022 12:51 PM | Last Updated: 18th January 2022 01:06 PM | A+A A-

ಸಿಎಂ ಅರವಿಂದ್ ಕೇಜ್ರಿವಾಲ್ ಜೊತೆ ಭಗವಂತ್ ಮನ್
ಮೊಹಾಲಿ (ಪಂಜಾಬ್): ಪಂಜಾಬ್ ನ ಸಂಗ್ರೂರು ಕ್ಷೇತ್ರದ ಆಮ್ ಆದ್ಮಿ ಪಕ್ಷದ ಲೋಕಸಭಾ ಸದಸ್ಯ ಭಗವಂತ್ ಮನ್ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸಿಎಂ ಅಭ್ಯರ್ಥಿಯಾಗಿದ್ದಾರೆ ಎಂದು ದೆಹಲಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ ( Aam Aadmi Party) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
AAP's CM Candidate & Punjab's Next CM is..... @BhagwantMann #AAPdaCM pic.twitter.com/LWS28OSOwz
— AAP (@AamAadmiParty) January 18, 2022
ಇಂದು ಚಂಡೀಗಢದಲ್ಲಿ ಸಾರ್ವಜನಿಕರ ಮುಂದೆ ವೇದಿಕೆಯಲ್ಲಿ ಈ ಘೋಷಣೆ ಮಾಡಿದ ಅವರು, ಪಕ್ಷವು ಇತ್ತೀಚೆಗೆ ಫೋನ್ ಲೈನ್ ಅನ್ನು ತೆರೆದು ಅಭ್ಯರ್ಥಿಯ ಆಯ್ಕೆಯನ್ನು ನೀಡುವಂತೆ ಜನರನ್ನು ಕೇಳಿಕೊಂಡಿದ್ದೆವು. ಜನರ ಅಭಿಪ್ರಾಯ ಸಂಗ್ರಹಿಸಿ ಸಿಕ್ಕಿರುವ ಫಲಿತಾಂಶದಂತೆ ಭಗವಂತ್ ಮನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ತೀರ್ಮಾನಿಸಿದ್ದೇವೆ ಎಂದು ಪ್ರಕಟಿಸಿದರು.
पंजाब दी आन, बान, शान
— AAP (@AamAadmiParty) January 18, 2022
बनेंगे पंजाब के अगले मुख्यमंत्री @BhagwantMann #AAPdaCM pic.twitter.com/8ncgLZghcP
ಶೇಕಡಾ 93ಕ್ಕೂ ಅಧಿಕ ಮಂದಿ ಮನ್ ಅವರ ಪರ ಒಲವು ವ್ಯಕ್ತಪಡಿಸಿದರು ಎಂದರು. ಪಂಜಾಬ್ ವಿಧಾನಸಭೆ ಚುನಾವಣೆ ಫೆಬ್ರವರಿ 20ರಂದು ನಡೆಯಲಿದೆ.