
ಸಾಂದರ್ಭಿಕ ಚಿತ್ರ
ನವದೆಹಲಿ: ಮುಂಬೈನ ನೌಕಾನೆಲೆಯಲ್ಲಿ ಮಂಗಳವಾರ ಭಾರತೀಯ ನೌಕೆ (ಐಎನ್ಎಸ್) ರಣವೀರ್ ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ನೌಕಾಪಡೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಮಾಲ್ಡೀವ್ಸ್ ನಲ್ಲಿ ಭುಗಿಲೆದ್ದ ಭಾರತದ ವಿರುದ್ಧ ಆಕ್ರೋಶ: ದೇಶದಿಂದ ಭಾರತೀಯ ಸೇನೆ ನಿರ್ಗಮನಕ್ಕೆ ಒತ್ತಾಯ
ಮುಂಬೈನ ನೌಕಾನೆಲೆಯಲ್ಲಿ ನಡೆದ ದುರದೃಷ್ಟಕರ ಘಟನೆ ನಡೆದಿದ್ದು, ಐಎನ್ಎಸ್ ರಣವೀರ್ ಹಡಗಿನ ಆಂತರಿಕ ವಿಭಾಗದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಮೂವರು ನೌಕಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಭಾರತೀಯ ನೌಕಾಪಡೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕಾಶ್ಮೀರ: ಹಿಮದಲ್ಲಿ ಸಿಲುಕಿದ್ದ 30 ನಾಗರಿಕರನ್ನು ರಕ್ಷಿಸಿದ ಭಾರತೀಯ ಸೇನೆ
ಸ್ಫೋಟ ಸಂಭವಿಸಿದ ತಕ್ಷಣವೇ ಹಡಗಿನ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಯಾವುದೇ ಬೃಹತ್ ಹಾನಿ ವರದಿಯಾಗಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಚೀನಾದಿಂದ ಪ್ಯಾಂಗಾಂಗ್ ಸರೋವರದ ಬಳಿ ಅಕ್ರಮ ಸೇತುವೆ ನಿರ್ಮಾಣ: ಭಾರತ ಕಳವಳ
ಐಎನ್ಎಸ್ ರಣವೀರ್ ಅನ್ನು ನವೆಂಬರ್ 2021 ರಿಂದ ಪೂರ್ವ ನೌಕಾ ಕಮಾಂಡ್ನಿಂದ ಕ್ರಾಸ್ ಕೋಸ್ಟ್ ಕಾರ್ಯಾಚರಣೆ ನಿಮಿತ್ತ ನಿಯೋಜಿಸಲಾಗಿತ್ತು ಮತ್ತು ಶೀಘ್ರದಲ್ಲೇ ಬೇಸ್ ಪೋರ್ಟ್ಗೆ ಮರಳಬೇಕಿತ್ತು. ಅವಘಡ ಕುರಿತು ತನಿಖೆ ನಡೆಸಲು ಆದೇಶಿಸಲಾಗಿದೆ.
ಇದನ್ನೂ ಓದಿ: ಗಣರಾಜ್ಯೋತ್ಸವ 2022: ಸ್ತಬ್ಧ ಚಿತ್ರ ತಿರಸ್ಕಾರ ವಿವಾದ; ರಾಜ್ಯಗಳ ಟೀಕೆ ತಪ್ಪು ನಿದರ್ಶನ ಎಂದ ಕೇಂದ್ರ ಸರ್ಕಾರ