ಕೋವಿಡ್ ಪಾಸಿಟಿವಿಟಿ ದರ ನಿರ್ಬಂಧ ತೆರವುಗೊಳಿಸುವಷ್ಟು ಕಡಿಮೆ ಇಲ್ಲ: ದೆಹಲಿ ಆರೋಗ್ಯ ಸಚಿವ
ಕೋವಿಡ್ ಪಾಸಿಟಿವಿಟಿ ದರ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ಮಹಾಮಾರಿ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ವಿಧಿಸಲಾಗಿರುವ ನಿರ್ಬಂಧಗಳನ್ನು ಸದ್ಯಕ್ಕೆ ತೆರವುಗೊಳಿಸುವುದಿಲ್ಲ.
Published: 19th January 2022 04:56 PM | Last Updated: 19th January 2022 04:56 PM | A+A A-

ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್
ನವದೆಹಲಿ: ಕೋವಿಡ್ ಪಾಸಿಟಿವಿಟಿ ದರ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ಮಹಾಮಾರಿ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ವಿಧಿಸಲಾಗಿರುವ ನಿರ್ಬಂಧಗಳನ್ನು ಸದ್ಯಕ್ಕೆ ತೆರವುಗೊಳಿಸುವುದಿಲ್ಲ. ಸರ್ಕಾರ ಮೂರ್ನಾಲ್ಕು ದಿನ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಲಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ಬುಧವಾರ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಇಂದು ಸುಮಾರು 13,000 ಪಾಸಿಟಿವ್ ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ. ಆದರೆ ಪಾಸಿಟಿವ್ ಪ್ರಮಾಣ ಶೇಕಡಾ 24 ರಷ್ಟು ಇದೆ ಎಂದು ದೆಹಲಿ ಆರೋಗ್ಯ ಸಚಿವರು ತಿಳಿಸಿದರು.
ಇದನ್ನು ಓದಿ: ಆರೋಪ-ಪ್ರತ್ಯಾರೋಪದಿಂದ ಕೊರೋನಾ ನಿರ್ಮೂಲನೆ ಆಗಲ್ಲ: ದೆಹಲಿ ಸಿಎಂ ಕೇಜ್ರಿವಾಲ್
"ದೆಹಲಿಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇಕಡಾ 30 ರಿಂದ ಶೇಕಡಾ 22.5 ಕ್ಕೆ ಇಳಿದಿದೆ. ಆದರೂ ಪಾಸಿಟಿವ್ ಪ್ರಮಾಣ ಎಲ್ಲಾ ನಿರ್ಬಂಧಗಳನ್ನು ಹಠಾತ್ತನೆ ತೆಗೆದುಹಾಕುವಷ್ಟು ಕಡಿಮೆ ಅಲ್ಲ. ಪಾಸಿಟಿವಿಟಿ ದರ ಇನ್ನೂ ಅರ್ಧದಷ್ಟು ಕಡಿಮೆಯಾಗಬೇು. ನಾವು ಮೂರರಿಂದ ನಾಲ್ಕು ದಿನ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತೇವೆ" ಎಂದು ನಿರ್ಬಂಧ ಸಡಿಲಿಸುವಂತೆ ಕೆಲವು ವ್ಯಾಪಾರಿಗಳ ಒತ್ತಾಯದ ಬಗ್ಗೆ ಕೇಳಿದ ಪ್ರಶ್ನೆಗೆ ಜೈನ್ ಉತ್ತರಿಸಿದ್ದಾರೆ.
ಕಳೆದ ಗುರುವಾರ ದೆಹಲಿಯಲ್ಲಿ 28,867 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು. ನಂತರ ಈ ಸಂಖ್ಯೆ ಶುಕ್ರವಾರ 24,383, ಶನಿವಾರ 20,718, ಭಾನುವಾರ 18,286, ಸೋಮವಾರ 12,527 ಮತ್ತು ಮಂಗಳವಾರ 11,684 ಕ್ಕೆ ಇಳಿದಿದೆ.