ಗೋವಾ ವಿಧಾನಸಭಾ ಚುನಾವಣೆ: ಎನ್ ಸಿಪಿ, ಶಿವಸೇನೆ ಮೈತ್ರಿ ಘೋಷಣೆ
ಗೋವಾ ವಿಧಾನಸಭಾ ಚುನಾವಣೆಗೂ ಮುನ್ನ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್‌ಸಿಪಿ) ಮತ್ತು ಶಿವಸೇನೆ ಬುಧವಾರ ಚುನಾವಣಾ ಪೂರ್ವ ಮೈತ್ರಿ ಘೋಷಿಸಿ ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸುವುದಾಗಿ ಹೇಳಿವೆ.
Published: 19th January 2022 08:21 PM | Last Updated: 20th January 2022 01:29 PM | A+A A-

ಸಂಜಯ್ ರಾವುತ್ - ಪ್ರಫುಲ್ ಪಟೇಲ್
ಪಣಜಿ: ಗೋವಾ ವಿಧಾನಸಭಾ ಚುನಾವಣೆಗೂ ಮುನ್ನ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್‌ಸಿಪಿ) ಮತ್ತು ಶಿವಸೇನೆ ಬುಧವಾರ ಚುನಾವಣಾ ಪೂರ್ವ ಮೈತ್ರಿ ಘೋಷಿಸಿ ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸುವುದಾಗಿ ಹೇಳಿವೆ.
ಪಣಜಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿವಸೇನಾ ರಾಜ್ಯಸಭಾ ಸಂಸದ ಸಂಜಯ್ ರಾವುತ್ ಮತ್ತು ಎನ್‌ಸಿಪಿಯ ಹಿರಿಯ ನಾಯಕ ಪ್ರಫುಲ್ ಪಟೇಲ್, ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ(ಎಂವಿಎ) ಮೈತ್ರಿಯನ್ನು ಗೋವಾಗೆ ವಿಸ್ತರಿಸುವ ಸಲುವಾಗಿ ಎರಡು ಪಕ್ಷಗಳು ಕಾಂಗ್ರೆಸ್‌ನ್ನು ಸಂಪರ್ಕಿಸಿದ್ದವು, ಆದರೆ ಕಾಂಗ್ರೆಸ್ ನಾಯಕರು ಯಾವುದೆ ಪ್ರತಿಕ್ರಿಯೆ ನೀಡಲಿಲ್ಲ. ಹಾಗಾಗಿ ಈ ಎರಡು ಪಕ್ಷಗಳು ಮೈತ್ರಿ ನಿರ್ಧಾರ ತೆಗೆದುಕೊಂಡೆವು ಎಂದು ಹೇಳಿದರು.
ಇದನ್ನು ಓದಿ: ಗೋವಾ ವಿಧಾನಸಭೆ ಚುನಾವಣೆ: ಆಪ್ ಸಿಎಂ ಅಭ್ಯರ್ಥಿಯಾಗಿ ವಕೀಲ ಅಮಿತ್ ಪಾಲೇಕರ್ ಆಯ್ಕೆ
“ನಾವು ಎಂವಿಎಯನ್ನು ಮಹಾರಾಷ್ಟ್ರದಿಂದ ಗೋವಾಕ್ಕೆ ವಿಸ್ತರಿಸಬೇಕೆಂದು ಯೋಚಿಸಿದ್ದೇವೆ. ಕಾಂಗ್ರೆಸ್ ಕೂಡ ಪ್ರಮುಖ ಪಾತ್ರ ವಹಿಸಬೇಕು ಮತ್ತು ನಾವು(ಎನ್‌ಸಿಪಿ ಮತ್ತು ಶಿವಸೇನೆ) ಕೆಲವು ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ” ಎಂದು ಪಟೇಲ್ ಹೇಳಿದರು.
ಮುಂದಿನ ತಿಂಗಳು ಚುನಾವಣೆ ನಡೆಯಲಿರುವ 40 ಸ್ಥಾನಗಳಲ್ಲಿ ಎರಡೂ ಪಕ್ಷಗಳು ತಲಾ 10-12 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಎಂದು ರಾವುತ್ ಮಾಹಿತಿ ನೀಡಿದರು.
ಗೋವಾದಲ್ಲಿ ಸಾಕಷ್ಟು ಗೊಂದಲಗಳಿವೆ. ಬಿಜೆಪಿ, ಕಾಂಗ್ರೆಸ್, ಟಿಎಂಸಿ, ಎಎಪಿ ಇತರ ಪಕ್ಷಗಳಿವೆ ಮತ್ತು ಈ ಒಟ್ಟಾರೆ ಗೊಂದಲದಲ್ಲಿ, ಎನ್‌ಸಿಪಿ ಮತ್ತು ಶಿವಸೇನೆ ಸರ್ಕಾರ ರಚಿಸುವ ಸ್ಥಿತಿಯಲ್ಲಿಲ್ಲದಿದ್ದರೂ ನಾವು ಕಣಕ್ಕಿಳಿಯುತ್ತೇವೆ. ಮುಂದಿನ ಕೆಲವು ದಿನಗಳಲ್ಲಿ ಮೈತ್ರಿಕೂಟ ತನ್ನ ಅಭ್ಯರ್ಥಿಗಳನ್ನು ಘೋಷಿಸಲಿದೆ ಎಂದು ರಾವುತ್ ಹೇಳಿದರು.
ಗೋವಾ ವಿಧಾನಸಭೆಗೆ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.