
ಹೇಮಂತ್ ಸೊರೇನ್
ರಾಂಚಿ: ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ CMSUPPORTS ಎನ್ನುವ ಹೊಸ ಆಪ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಬಿಪಿಎಲ್ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಪೆಟ್ರೋಲ್ ನೀಡಲು ಈ ಆಪ್ ಸಹಕರಿಸಲಿದೆ.
ಇದನ್ನೂ ಓದಿ: ಗೋವಾ ವಿಧಾನಸಭಾ ಚುನಾವಣೆ: ಮೈತ್ರಿ ಘೋಷಿಸಿದ ಎನ್ ಸಿಪಿ, ಶಿವಸೇನೆ
ಜಾರ್ಖಂಡ್ ಸರ್ಕಾರದ ಈ ಹೊಸ ಯೋಜನೆಯಿಂದ ಪಿಂಕ್ ಮತ್ತು ಹಸಿರು ರೇಷನ್ ಕಾರ್ಡ್ ಹೊಂದಿದವರು ಪ್ರತಿ ಲೀ. ಪೆಟ್ರೋಲನ್ನು 25 ರೂಗ಼ಳಿಗೆ ಪಡೆದುಕೊಳ್ಳಬಹುದಾಗಿದೆ. ತಿಂಗಳಿಗೆ ಗರಿಷ್ಠ 10 ಲೀ. ಮಿತಿ ನಿಗದಿ ಪಡಿಸಲಾಗಿದೆ.
ಇದನ್ನೂ ಓದಿ: ಈ ಬಾರಿಯ ಗಣರಾಜ್ಯೋತ್ಸವ ದಿನಾಚರಣೆಗೆ ವಿದೇಶದಿಂದ ಮುಖ್ಯ ಅತಿಥಿಗಳಿಲ್ಲ!
ಈ ಹೊಸ ಯೋಜನೆಗೆ ಹೆಸರು ನೊಂದಾಯಿಸಿಕೊಳ್ಳಲು ಇಚ್ಚಿಸುವವರು ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಂಬರ್ ಅನ್ನು ನೀಡಬೇಕು.
ಇದನ್ನೂ ಓದಿ: ಕ್ಲಬ್ ಹೌಸ್ ಆಪ್ ನಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಟೀಕೆ: ಮಹಿಳಾ ಆಯೋಗದಿಂದ ಎಫ್ಐಆರ್