
ಪ್ರಧಾನಿ ಮೋದಿ
ನವದೆಹಲಿ: ಭಾರತದ ಜಾಗತಿಕ ವರ್ಚಸ್ಸಿಗೆ ಮಸಿ ಬಳಿಯಲು ಸಂಚು ನಡೆಯುತ್ತಿರುವುದಾಗಿ ಹೇಳಿರುವ ಮೋದಿ ಅದನ್ನು ರಾಜಕೀಯ ಹಿನ್ನೆಲೆಯಲ್ಲಿ ನೋಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಲಂಕಾದ ತಮಿಳು ಪಕ್ಷಗಳು ಪ್ರಧಾನಿ ಮೋದಿ ಸಹಾಯ ಕೇಳಿದ್ದಕ್ಕೆ ಶ್ರೀಲಂಕಾ ಸಚಿವ ಕೆಂಡಾಮಂಡಲ!
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಹೆಸರಿಗೆ ಕಳಂಕ ತರುವ ಕೆಲಸಗಳು ನಡೆಯುತ್ತಿರುವುದನ್ನು ನಾವು ಗಮನಿಸಬಹುದು. ಅದು ರಾಜಕಾರಣದ ಭಾಗ ಎಂದು ಸುಮ್ಮನೆ ಕೈತೊಳೆದುಕೊಳ್ಳಲು ಆಗುವುದಿಲ್ಲ, ಏಕೆಂದರೆ ಅದು ದೇಶದ ಗೌರವದ ಪ್ರಶ್ನೆ ಎಂದು ಮೋದಿ ಗುಡುಗಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಶ್ರೀರಾಮನಂತೆ ದೇವರ ಅಪರಾವತಾರ: ಮಧ್ಯ ಪ್ರದೇಶ ಸಚಿವ ಕಮಲ್ ಪಟೇಲ್
ಮೋದಿ, ಬ್ರಹ್ಮಕುಮಾರಿ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಭಾರತದ ವಿರುದ್ಧ ಹರಡುತ್ತಿರುವ ಅಪಪ್ರಚಾರವನ್ನು ತಡೆಗಟ್ಟುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಭಾರತದ ಕುರಿತು ಸರಿಯಾದ ಸಂದೇಶವನ್ನು ಜಗತ್ತಿಗೆ ಪ್ರಚಾರ ಮಾಡುವುದು ನಮ್ಮೆಲ್ಲರ ಹೊಣೆ ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಗೆ ಹೊಡೆಯಬಲ್ಲೆ... ಕಾಂಗ್ರೆಸ್ ನಾಯಕ ನಾನಾ ಪಟೋಲೆ ವಿವಾದಾಸ್ಪದ ಹೇಳಿಕೆ