ಗೋವಾ ಚುನಾವಣೆ: ಮನೋಹರ್ ಪರಿಕ್ಕರ್ ಪುತ್ರನಿಗೆ ಟಿಕೆಟ್ ಆಫರ್ ನೀಡಿದ ಕೇಜ್ರಿವಾಲ್!
2022ರ ಗೋವಾ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿರುವ ಬಿಜೆಪಿ ಈಗಾಗಲೇ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಮಾಜಿ ರಕ್ಷಣಾ ಸಚಿವ ಹಾಗೂ ಬಿಜೆಪಿ ನಾಯಕ ದಿವಂಗತ ಮನೋಹರ್ ಪರಿಕ್ಕರ್...
Published: 20th January 2022 04:20 PM | Last Updated: 20th January 2022 06:18 PM | A+A A-

ಅರವಿಂದ್ ಕೇಜ್ರಿವಾಲ್ - ಉತ್ಪಲ್ ಪರಿಕ್ಕರ್
ನವದೆಹಲಿ: 2022ರ ಗೋವಾ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿರುವ ಬಿಜೆಪಿ ಈಗಾಗಲೇ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಮಾಜಿ ರಕ್ಷಣಾ ಸಚಿವ ಹಾಗೂ ಬಿಜೆಪಿ ನಾಯಕ ದಿವಂಗತ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಅವರ ಹೆಸರು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಇಲ್ಲ. ಉತ್ಪಾಲ್ ಅವರು ಪಣಜಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದರು. ಆದಾಗ್ಯೂ, ಬಿಜೆಪಿ ಅಟಾನಾಸಿಯೋ ‘ಬಾಬುಷ್’ ಮಾನ್ಸೆರೇಟ್ ಮೇಲೆ ವಿಶ್ವಾಸ ಇಟ್ಟಿದೆ.
ಈ ಮಧ್ಯೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗೋವಾ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ ಅವರಿಗೆ ಆಮ್ ಆದ್ಮಿ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಲು ಆಫರ್ ನೀಡಿದ್ದಾರೆ.
ಇದನ್ನು ಓದಿ: ಪಣಜಿಯಿಂದ ಪರಿಕ್ಕರ್ ಪುತ್ರನ ಕಣಕ್ಕಿಳಿಸಲು ಬಿಜೆಪಿ ಅನಾಸಕ್ತಿ: ಬೆಂಬಲಕ್ಕೆ ಧಾವಿಸಿದ ಶಿವಸೇನೆ!
ಈ ಕುರಿತು ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, “ಪರಿಕ್ಕರ್ ಕುಟುಂಬದೊಂದಿಗೆ ಬಿಜೆಪಿಯು ಯೂಸ್ ಅಂಡ್ ಥ್ರೋ ನೀತಿಯನ್ನು ಅಳವಡಿಸಿಕೊಂಡಿರುವುದಕ್ಕೆ ಗೋವಾದ ಜನರು ದುಃಖಿತರಾಗಿದ್ದಾರೆ. ನಾನು ಯಾವಾಗಲೂ ಮನೋಹರ್ ಪರಿಕ್ಕರ್ ಜಿ ಅವರನ್ನು ಗೌರವಿಸುತ್ತೇನೆ. ಉತ್ಪಲ್ ಪರಿಕ್ಕರ್ ಅವರು ಎಎಪಿ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಲು ಸ್ವಾಗತಾರ್ಹ” ಎಂದು ಹೇಳಿದ್ದಾರೆ.
ಇದನ್ನು ಓದಿ: ಗೋವಾ ವಿಧಾನಸಭೆ ಚುನಾವಣೆ: ಆಪ್ ಸಿಎಂ ಅಭ್ಯರ್ಥಿಯಾಗಿ ವಕೀಲ ಅಮಿತ್ ಪಾಲೇಕರ್ ಆಯ್ಕೆ
ಮನೋಹರ್ ಪರಿಕ್ಕರ್ ನಿಧನರಾದ ನಂತರ ನಡೆದ ಉಪ ಚುನಾವಣೆಯಲ್ಲಿ ಅಟಾನಾಸಿಯೊ ಮಾನ್ಸೆರೇಟ್ ಅವರು ಗೆಲುವು ಸಾಧಿಸಿದ್ದರು. ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಹೀಗಾಗಿ, ಬಿಜೆಪಿ ಅಟಾನಾಸಿಯೊ ಮಾನ್ಸೆರೇಟ್ ಅವರಿಗೆ ಮಣೆ ಹಾಕಿದ್ದು, ಉತ್ಪಲ್ ಪರಿಕ್ಕರ್ ಗೆ ಪಣಜಿಯಿಂದ ಟಿಕೆಟ್ ನಿರಾಕರಿಸಲಾಗಿದೆ.