
ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದಲ್ಲಿ ನಾಗರಿಕ ಸಮಾಜವನ್ನು ಬಗ್ಗುಬಡಿಯಲು ಕೇಂದ್ರ ಸರ್ಕಾರ ವಿದೇಶಿ ದೇಣಿಗೆ ನಿಯಂತ್ರಣ ಕಾನೂನು (FCRA) ಅನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹಲವು ಮಾನವ ಹಕ್ಕುಗಳ ಸಂಘಟನೆಗಳು ಆರೋಪಿಸಿವೆ. ಈ ಹಿನ್ನೆಲೆಯಲ್ಲಿ ಮಾನವಹಕ್ಕುಗಳ ಕಾವಲುಪಡೆ ಭಾರತದಲ್ಲಿ FCRA ಕಾನೂನು ದುರ್ಬಳಕೆ ಮಾಡದಂತೆ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿವೆ.
ಇದನ್ನೂ ಓದಿ: ಮದರ್ ತೆರೆಸಾ ಚಾರಿಟಿ ಎಫ್ ಸಿಆರ್ ಎ ಪರವಾನಗಿ ನವೀಕರಿಸಿದ ಕೇಂದ್ರ ಸರ್ಕಾರ; ಇನ್ಮುಂದೆ ವಿದೇಶಿ ದೇಣಿಗೆ ಸ್ವೀಕರಿಸಬಹುದು!
ಮದುರೈನಲ್ಲಿ ಜನವರಿ 8 ರಂದು CPSC ಸಂಘಟನೆ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದ್ದನ್ನು ಮಾನವಹಕ್ಕುಗಳ ಕಾವಲುಪಡೆ ಉಲ್ಲೇಖಿಸಿದೆ.
ಇದನ್ನೂ ಓದಿ: ಟಿಟಿಡಿಯ ವಿದೇಶಿ ದೇಣಿಗೆಗೆ ಕೇಂದ್ರ ಕೊಕ್ಕೆ; ಎಫ್ ಸಿ ಆರ್ ಎ ಪರವಾನಗಿ ಇನ್ನೂ ನವೀಕರಿಸಿಲ್ಲ: ವರದಿ
CPSC ಸಂಘಟನೆ ಕಚೇರಿ ಮೇಲೆ ದಾಳಿನಡೆಸಿದ್ದ ಸಿಬಿಐ ಅಧಿಕಾರಿಗಳು ತಾವು ಸಂಘಟನೆಯ ಹಣದ ವ್ಯವಹಾರದಲ್ಲಿ ವಂಚನೆ ನಡೆದಿರುವ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದರು.
ಇದನ್ನೂ ಓದಿ: ಆಕ್ಸ್ಫಾಮ್ ಇಂಡಿಯಾ, ಜಾಮಿಯಾ ಮಿಲ್ಲಿಯಾ ಸೇರಿ 6,000 ಸಂಸ್ಥೆಗಳ ಎಫ್ ಸಿಆರ್ ಎ ನೋಂದಣಿ ರದ್ದು
ದೇಶದಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತವಾಗಿರುವ ವ್ಯಕ್ತಿಗಳು, ಸಂಘಟನೆಗಳನ್ನು ಬಗ್ಗುಬಡಿಯಲು ಕೇಂದ್ರ ಸರ್ಕಾರ ದೇಶದ್ರೋಹ ಮತ್ತು ಭಯೋತ್ಪಾದನೆಯ ಅಸ್ತ್ರಗಳನ್ನು ಬಳಸುತ್ತಿದೆ ಎಂದು ಹಲವು ಎನ್ ಜಿ ಓ ಗಳು ಆರೋಪಿಸಿದ್ದವು.
ಇದನ್ನೂ ಓದಿ: ಸಾಮಾಜಿಕ ಜವಾಬ್ದಾರಿ ಅಂದ್ರೆ ಪಿಎಂ ಕೇರ್ಸ್ ಗೆ ದೇಣಿಗೆ ನೀಡಿ ಸುಮ್ಮನಾಗುವುದಲ್ಲ: ಯದುವೀರ ಕೃಷ್ಣದತ್ತ ಒಡೆಯರ್