
ಕಾಳಿಚರಣ್ ಮಹಾರಾಜ್
ಥಾಣೆ: ಮಹಾತ್ಮ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದ ಧಾರ್ಮಿಕ ನಾಯಕ ಕಾಳಿಚರಣ್ ಮಹಾರಾಜ್ ಅವರನ್ನು ಥಾಣೆ ನಗರ ಪೊಲೀಸರು ಬಂಧಿಸಿದ್ದಾರೆ.
ಬುಧವಾರ ರಾತ್ರಿ ಛತ್ತೀಸ್ ಗಢದ ರಾಜಧಾನಿ ರಾಯ್ ಪುರದಲ್ಲಿ ಬಂಧಿಸಲಾಗಿದ್ದು, ಇಂಥಹದ್ದೇ ಪ್ರಕರಣವೊಂದರಲ್ಲಿ ಅವರು ಈ ಹಿಂದೆ ಜೈಲು ಸೇರಿದ್ದರು.
ಟ್ರಾನ್ಸಿಟ್ ರಿಮ್ಯಾಂಡ್ ಆಧಾರದಲ್ಲಿ ಕಾಳಿಚರಣ್ ಮಹಾರಾಜ್ ನ್ನು ಥಾಣೆಗೆ ಕರೆದುಕೊಂಡು ಬರಲಾಗಿದ್ದು ಇಂದು ಕೋರ್ಟ್ ಗೆ ಹಾಜರುಪಡಿಸಲಾಗುತ್ತಿದೆ ಎಂದು ನೌಪಾಡ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಳಿಚರಣ್ ಮಹಾರಾಜ್ ಗೆ ಜನವರಿ 13ರವರೆಗೆ ನ್ಯಾಯಾಂಗ ಬಂಧನ
2021 ರ ಡಿ.26 ರಂದು ಛತ್ತೀಸ್ ಗಢದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಳಿಚರಣ್ ಮಹಾರಜ್ ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು ಇದೇ ಪ್ರಕರಣದಲ್ಲಿ ಅವರನ್ನು ಬಂಧಿಸಿ ಛತ್ತೀಸ್ ಗಢದ ಜೈಲಿನಲ್ಲಿರಿಸಲಾಗಿತ್ತು. ಮಹಾರಾಷ್ಟ್ರದಲ್ಲಿಯೂ ಜ.12 ರಂದು ವಾರ್ಧ ಪೊಲೀಸರು ಅವರ ವಿರುದ್ಧ ಇಂಥಹದ್ದೇ ಪ್ರಕರಣ ದಾಖಲಿಸಿದ್ದರು