ಉತ್ತರ ಪ್ರದೇಶ ಚುನಾವಣೆ: ಕಾಂಗ್ರೆಸ್ ನ 41 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ, 16 ಮಹಿಳೆಯರಿಗೆ ಟಿಕೇಟ್
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ 41 ಅಭ್ಯರ್ಥಿಗಳನ್ನೊಳಗೊಂಡ ಎರಡನೇ ಪಟ್ಟಿಯನ್ನು ಜ.20 ರಂದು ಬಿಡುಗಡೆ ಮಾಡಿದೆ.
Published: 20th January 2022 01:45 PM | Last Updated: 20th January 2022 01:51 PM | A+A A-

ಕಾಂಗ್ರೆಸ್
ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ 41 ಅಭ್ಯರ್ಥಿಗಳನ್ನೊಳಗೊಂಡ ಎರಡನೇ ಪಟ್ಟಿಯನ್ನು ಜ.20 ರಂದು ಬಿಡುಗಡೆ ಮಾಡಿದೆ.
ಎರಡನೇ ಪಟ್ಟಿಯಲ್ಲಿ 16 ಮಹಿಳೆಯರ ಹೆಸರನ್ನು ಕಾಂಗ್ರೆಸ್ ಘೋಷಣೆ ಮಾಡಿದ್ದು, ಪೂನಮ್ ಪಂಡಿತ್ ಅವರನ್ನು ಸ್ಯಾನ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗಿದೆ. ಪೂನಮ್ ಪಂಡಿತ್ ಅಂತಾರಾಷ್ಟ್ರೀಯ ಖ್ಯಾತಿಯ ಶೂಟರ್ ಆಗಿದ್ದು ಕೃಷಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಪ್ರಚಲಿತರಾಗಿದ್ದರು.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಶೇ.40 ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು.
उत्तर प्रदेश में बदलाव की राह देख रही जनता को बेहतर जनप्रतिनिधि चुनने का अधिकार है।
— UP Congress (@INCUttarPradesh) January 20, 2022
प्रदेश की 41 विधानसभा सीटों पर हम अपने प्रत्याशियों की दूसरी सूची जारी कर रहे हैं।
लड़ेगा, बढ़ेगा, जीतेगा यूपी pic.twitter.com/KbyhGx39Ic
ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್ ತನ್ನ ಭರವಸೆಯನ್ನು ಪೂರ್ಣಗೊಳಿಸಿದೆ. ಎರಡನೇ ಪಟ್ಟಿಯಲ್ಲಿ ಮೀಸಲು ಕ್ಷೇತ್ರವಾದ ಆಗ್ರಾ ಕಂಟೋನ್ಮೆಂಟ್ ನಿಂದ ಸಿಕಂದರ್ ವಾಲ್ಮೀಕಿ ಅವರನ್ನು ಕಣಕ್ಕೆ ಇಳಿಸಲಾಗಿದೆ. ವಾಲ್ಮೀಕಿ, ಅಖಿಲ ಭಾರತೀಯ ವಾಲ್ಮೀಕಿ ಮಹಾಸಭಾದ ಜಿಲ್ಲಾ ಅಧ್ಯಕ್ಷರಾಗಿದು, ಉತ್ತರ ಪ್ರದೇಶ ನಗರ ನಿಗಮ ಜಲ ಇಲಾಖೆಯ ಕರ್ಮಚಾರಿ ಸಂಘದ ರಾಜ್ಯಾಧ್ಯಕ್ಷರೂ ಆಗಿದ್ದಾರೆ.