ತನಿಖಾಧಿಕಾರಿಯನ್ನೇ ಕೊಲ್ಲಲು ನಟ ದಿಲೀಪ್ ಸಂಚು ರೂಪಿಸಿದ್ದರು: ಕೋರ್ಟ್ ಗೆ ವರದಿ ಸಲ್ಲಿಸಿದ ಕ್ರೈಂ ಬ್ರಾಂಚ್
2017 ರಲ್ಲಿ ಖ್ಯಾತ ನಟಿಯನ್ನು ಅಪಹರಿಸಿ ಅತ್ಯಾಚಾರ ಹಲ್ಲೆ ನಡೆಸಿರುವ ಪ್ರಕರಣದಲ್ಲಿ ತನಿಖಾಧಿಕಾರಿಗಳನ್ನು ಕೊಲ್ಲಲು ಸಂಚು ರೂಪಿಸಿದ ಆರೋಪದ ಮೇಲೆ ಅಪರಾಧ ವಿಭಾಗವು ಶುಕ್ರವಾರ ನಟ ದಿಲೀಪ್ ಅವರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲು ಅವಕಾಶ ಕೇಳಿದೆ.
Published: 21st January 2022 10:35 AM | Last Updated: 21st January 2022 01:27 PM | A+A A-

ನಟ ದಿಲೀಪ್
ಕೊಚ್ಚಿ: 2017 ರಲ್ಲಿ ಖ್ಯಾತ ನಟಿಯನ್ನು ಅಪಹರಿಸಿ ಅತ್ಯಾಚಾರ ಹಲ್ಲೆ ನಡೆಸಿರುವ ಪ್ರಕರಣದಲ್ಲಿ ತನಿಖಾಧಿಕಾರಿಗಳನ್ನು ಕೊಲ್ಲಲು ಸಂಚು ರೂಪಿಸಿದ ಆರೋಪದ ಮೇಲೆ ಅಪರಾಧ ವಿಭಾಗವು ಶುಕ್ರವಾರ ನಟ ದಿಲೀಪ್ ಅವರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲು ಅವಕಾಶ ಕೇಳಿದೆ.
ನಟಿಯ ಅಪಹರಣ ಕೃತ್ಯದಲ್ಲಿ ದಿಲೀಪ್ ಮತ್ತು ಇತರ ಐವರು ಭಾಗಿಯಾಗಿದ್ದಾರೆ, ಗಂಭೀರ ಅಪರಾಧದ ಆರೋಪ ಎದುರಿಸುತ್ತಿರುವವರೊಬ್ಬರು ತನಿಖಾಧಿಕಾರಿಗಳ ಪ್ರಾಣಕ್ಕೇ ಸಂಚಕಾರ ಎಸಗುವ ಕ್ರಿಮಿನಲ್ ಸಂಚು ರೂಪಿಸಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಎಂದು ಅಪರಾಧ ವಿಭಾಗ(Crime Branch) ತನ್ನ ವರದಿ ಸಲ್ಲಿಕೆಯಲ್ಲಿ ಹೇಳಿದೆ. ದಿಲೀಪ್ ವಿರುದ್ಧದ ಆರೋಪಗಳು ತುಂಬಾ ಗಂಭೀರ ಸ್ವರೂಪದ್ದಾಗಿವೆ. ಹಾಗಾಗಿ ಆರೋಪದ ಸತ್ಯಾಸತ್ಯತೆ ಹೊರಬರಲು ಅವರ ಕಸ್ಟಡಿ ವಿಚಾರಣೆ ಅಗತ್ಯ ಎಂದು ಪ್ರತಿಪಾದಿಸಿದೆ.
ಪ್ರಕರಣದ ತನಿಖೆ ಭರದಿಂದ ಸಾಗುತ್ತಿದ್ದು, ತನಿಖೆಯ ಆರಂಭಿಕ ಹಂತದಲ್ಲಿಯೇ ಕೆಲವು ನಿರ್ಣಾಯಕ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಅರ್ಜಿದಾರರು ತಮ್ಮ ಪೂರ್ವಾಪರಗಳನ್ನು ಪರಿಗಣಿಸಿ ನಿರೀಕ್ಷಣಾ ಜಾಮೀನು ಪಡೆಯಲು ಅರ್ಹರಾಗಿರುವುದಿಲ್ಲ. ಅವರಿಗೆ ಜಾಮೀನು ನೀಡಿದರೆ, ಪ್ರಕರಣದ ಸಂಪೂರ್ಣ ತನಿಖೆಯನ್ನು ಹಾಳು ಮಾಡಬಹುದು ಎಂದು ಎರ್ನಾಕುಲಂನ ಅಪರಾಧ ವಿಭಾಗದ ಪೊಲೀಸ್ ಅಧೀಕ್ಷಕ ಎಂ ಪಿ ಮೋಹನಚಂದ್ರನ್ ಅವರು ದಿಲೀಪ್ ಮತ್ತು ಇತರ ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿರೋಧಿಸಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನ್ಯಾಯಾಲಯ ಇಂದು ವಿಚಾರಣೆಯನ್ನು ಮುಂದುವರಿಸಲಿದೆ.
ಇದನ್ನೂ ಓದಿ: ಮಲಯಾಳಂ ನಟ ದಿಲೀಪ್ ನಿವಾಸ, ಕಚೇರಿ ಮೇಲೆ ಕೇರಳ ಪೊಲೀಸ್ ದಾಳಿ
ಕಾನೂನಿನ ಕಪಿಮುಷ್ಠಿಯಿಂದ ಹೊರಬರಲು ದಿಲೀಪ್ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ನಟಿಯ ಅಪಹರಣ ಪ್ರಕರಣದಲ್ಲಿ 20 ಪ್ರಾಸಿಕ್ಯೂಷನ್ ಸಾಕ್ಷಿಗಳು ದಿಲೀಪ್‌ಗೆ ಸಹಾಯ ಮಾಡುವ ಪ್ರಯತ್ನದಲ್ಲಿ ತಮ್ಮ ಹೇಳಿಕೆಗಳನ್ನು ಬದಲಿಸಿದ್ದಾರೆ. ಆ ದಿಸೆಯಲ್ಲಿ ವಿಷಯಗಳನ್ನು ನಿರ್ವಹಿಸುವಲ್ಲಿ ದಿಲೀಪ್ ಮತ್ತು ಆತನ ವ್ಯಕ್ತಿಗಳ ಸ್ಪಷ್ಟ ಪಾತ್ರ ಬಹಿರಂಗವಾಗಿದ್ದು, ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ದಕ್ಕಾಗಿ ಎರಡು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ ಬಂಧನವನ್ನೂ ಮಾಡಲಾಗಿದೆ ಎಂದು ಅಪರಾಧ ವಿಭಾಗ ನ್ಯಾಯಾಲಯಕ್ಕೆ ಹೇಳಿದೆ.
ಅಪರಾಧ ವಿಭಾಗ ಕೋರ್ಟ್ ಗೆ ಸಲ್ಲಿಸಿರುವ ವರದಿಯಲ್ಲಿ ಏನು ಹೇಳಿದೆ?: ನವೆಂಬರ್ 15, 2017 ರಂದು, ಅರ್ಜಿದಾರರು ಇತರ ಆರೋಪಿಗಳೊಂದಿಗೆ ಆಲುವಾದಲ್ಲಿರುವ ದಿಲೀಪ್ ಅವರ ಮನೆಯ ಖಾಸಗಿ ಸಭಾಂಗಣದಲ್ಲಿ ಸೇರಿ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ಬೈಜು ಪೌಲೋಸ್ ಮತ್ತು ನಟ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಮೇಲ್ವಿಚಾರಣಾ ಅಧಿಕಾರಿಗಳ ಜೀವವನ್ನು ತೆಗೆಯುವ ಕ್ರಿಮಿನಲ್ ಸಂಚು ರೂಪಿಸಿದ್ದರು. ಅವರನ್ನು ಆರೋಪಿ ಸಂಖ್ಯೆ 8 ಎಂದು ವಿಚಾರಣೆಗೆ ಒಳಪಡಿಸಿದಾಗಿನಿಂದ. ದಿಲೀಪ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ನಿರ್ದೇಶಕ ಬಾಲಚಂದ್ರಕುಮಾರ್ ನೀಡಿರುವ ಹೇಳಿಕೆ ಮೇಲೆ ಕೇಸು ದಾಖಲಿಸಲಾಗಿದೆ.
ಇದನ್ನೂ ಓದಿ: ನಟಿ ಮೇಲೆ ಲೈಂಗಿಕ ಹಲ್ಲೆ ಪ್ರಕರಣ: ನಟ ದಿಲೀಪ್ ವಿರುದ್ಧ ಹೊಸ ಎಫ್ಐಆರ್ ದಾಖಲು, ಕೊನೆಗೂ ನಟಿ ಪರ ನಿಂತ ಮಾಲಿವುಡ್ ಸ್ಟಾರ್ ಗಳು!
ದಿಲೀಪ್ ಸ್ನೇಹಿತ ಶರತ್ ತಲೆಮರೆಸಿಕೊಂಡಿಲ್ಲ: ನಟ ದಿಲೀಪ್ ಅವರ ನಿಕಟವರ್ತಿ ಹಾಗೂ ಆಲುವಾ ಮೂಲದ ಸೂರ್ಯ ಟ್ರಾವೆಲ್ಸ್ ಮಾಲೀಕ ಶರತ್ ಜಿ ನಾಯರ್ ತಲೆಮರೆಸಿಕೊಂಡಿಲ್ಲ ಎಂದು ಕಾಂಟ್ರಾಕ್ಟ್ ಕ್ಯಾರೇಜ್ ಆಪರೇಟರ್ಸ್ ಅಸೋಸಿಯೇಷನ್ (ಸಿಸಿಒಎ)ಹೇಳಿದೆ. ನಟಿ ಅಪಹರಣ ಅತ್ಯಾಚಾರ ಪ್ರಕರಣದಲ್ಲಿ ತನಿಖಾ ತಂಡದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಹಾನಿ ಮಾಡಲು ಸಂಚು ರೂಪಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್ ಇತ್ತೀಚೆಗೆ ಶರತ್ ಮನೆ ಮೇಲೆ ದಾಳಿ ನಡೆಸಿತ್ತು. ದಾಳಿ ನಡೆದಾಗ ಕೆಲಸದ ನಿಮಿತ್ತ ಶರತ್ ಊಟಿಯಲ್ಲಿದ್ದರು ಈಗ ಆಲುವಾದಲ್ಲಿರುವ ಮನೆಯಲ್ಲಿದ್ದಾರೆ ಮತ್ತು ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿಲ್ಲ ಎಂದು ಸಿಸಿಒಎ ಹೇಳಿದೆ.