ಭಾರತದ ಹಿಂದೂ ಹುಡುಗ; ಮೊರಾಕೊ ದೇಶದ ಮುಸ್ಲಿಂ ಹುಡುಗಿ: ಇವರಿಬ್ಬರ ಮದುವೆ ಆಗಿದ್ದೆ ದೊಡ್ಡ ರೋಚಕ!
ಪ್ರೀತಿ ಪ್ರೇಮಗಳಿಗೆ ಜಾತಿ, ಧರ್ಮಗಳು ಮಾತ್ರವಲ್ಲ ದೇಶದ ಗಡಿಗಳೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಇಬ್ಬರು ಪ್ರೇಮಿಗಳಿಬ್ಬರು ಸಾಬೀತು ಪಡಿಸಿದ್ದಾರೆ.
Published: 21st January 2022 09:30 PM | Last Updated: 21st January 2022 09:30 PM | A+A A-

ಅವಿನಾಶ್-ಫದ್ವಾ ಲೈಮಾಲಿ
ಗ್ವಾಲಿಯರ್: ಪ್ರೀತಿ ಪ್ರೇಮಗಳಿಗೆ ಜಾತಿ, ಧರ್ಮಗಳು ಮಾತ್ರವಲ್ಲ ದೇಶದ ಗಡಿಗಳೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಇಬ್ಬರು ಪ್ರೇಮಿಗಳಿಬ್ಬರು ಸಾಬೀತು ಪಡಿಸಿದ್ದಾರೆ. ಮಧ್ಯಪ್ರದೇಶ ಗ್ವಾಲಿಯರ್ ನಗರದ 26 ವರ್ಷದ ಅವಿನಾಶ್ ಎಂಬ ಯುವಕನಿಗೆ ಸಾಮಾಜಿಕ ಮಾಧ್ಯಮದ ಮೂಲಕ ಮೊರಾಕೊ ದೇಶದ 24 ವರ್ಷದ ಫದ್ವಾ ಲೈಮಾಲಿ ಎಂಬ ಯುವತಿ ಪರಿಚಯವಾಗಿತ್ತು. ಈ ಜೋಡಿ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಲು ಬಯಸಿದ್ದರು.
ಪ್ರೇಯಸಿ ಫದ್ವಾಳಿಗಾಗಿ ಅವಿನಾಶ್ ಧೈರ್ಯ ಮಾಡಿ ಮೊರಾಕೊಗೆ ತೆರಳಿದ ಅಲ್ಲಿ ಆಕೆಯ ತಂದೆ ಅಲಿ ಲೈಮಾಲಿ ಅವರೊಂದಿಗೆ ತಮ್ಮ ಪ್ರೀತಿಯ ಬಗ್ಗೆ ತಿಳಿಸಿ ವಿವಾಹಕ್ಕೆ ಅನುಮತಿ ಕೋರಿದ. ಆದರೆ, ಫದ್ವಾ ತಂದೆ ಇಕ್ಕೆ ಬಿಲ್ ಕುಲ್ ಒಪ್ಪಲಿಲ್ಲ. ಕೊನೆಗೂ ಪುತ್ರಿ ಫದ್ವಾ ಒತ್ತಾಯದಿಂದ ಆತ ಒಪ್ಪಿಕೊಳ್ಳಬೇಕಾಯಿತು. ಆದಾಗ್ಯೂ, ಅಲಿ ಲೈಮಾಲಿ ಅವರ ಮದುವೆಗೆ ಒಂದು ಷರತ್ತು ವಿಧಿಸಿದರು. ಅವಿನಾಶ್ ಇಸ್ಲಾಂಗೆ ಮತಾಂತರಗೊಂಡು ಮುಸಲ್ಮಾನನಾಗಬೇಕು, ಮದುವೆಯಾಗಿ, ಮೊರಾಕೊದಲ್ಲಿ ಉಳಿಯಬೇಕು ಎಂದು ಹೇಳಿದರು.
ಫದ್ವಾ ತಂದೆ ವಿಧಿಸಿದ್ದ ಷರತ್ತುಗಳಿಗೆ ಅವಿನಾಶ್ ಒಪ್ಪಲಿಲ್ಲ. ಮೇಲಾಗಿ ಫದ್ವಾ ಅವಿನಾಶ್ ಜೊತೆ ಭಾರತ ತೆರಳುವುದಾಗಿ ಹೇಳಿದ್ದಳು. ಮಗಳ ಸಂತೋಷಕ್ಕಾಗಿ ತಂದೆ ಕೊನೆಗೂ ಒಪ್ಪಿದ್ದಾರೆ. ಮೊರಾಕೊ ಒಂದು ಮುಸ್ಲಿಂ ದೇಶ. ಅಲ್ಲಿನ ಜನಸಂಖ್ಯೆಯ ಶೇ 99 ಜನರು ಮುಸ್ಲಿಮರು.. ಅಲ್ಲಿ ರಾಜಪ್ರಭುತ್ವ. ಹಾಗಾಗಿಯೇ ಫದ್ವಾ ವಿವಾಹಕ್ಕೆ ಸರ್ಕಾರದ ಅನುಮತಿ ಪಡೆಯಲು ಬಹಳ ಸಮಯ ಹಿಡಿಯಿತು.
ಎಲ್ಲಾ ಅಡೆ ತಡೆ ದಾಟಿ ಭಾರತ ತಲುಪಬೇಕೆಂದು ಬಯಸಿದ ಫದ್ವಾಗೆ ಕೊರೊನಾ ಕೊನೆಯ ಅಡಚಣೆಯಾಯಿತು. ಕೊರೊನಾ ಪ್ರಕರಣಗಳು ಕಡಿಮೆಯುಗುವವರೆಗೂ ಕಾಯ್ದ ಅವಿನಾಶ್ -ಫದ್ವಾ ಜೋಡಿ ಇತ್ತೀಚೆಗೆ ಭಾರತಕ್ಕೆ ಆಗಮಿಸಿ ವಿವಾಹ ಮಾಡಿಕೊಳ್ಳಲು ದಂಪತಿಗಳು ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಎಲ್ಲ ನಿಯಮಗಳ ಅನುಸರಿಸಿ ಸರ್ಕಾರದ ಅನುಮತಿ ಪಡೆದು ಬುಧವಾರ ಇಬ್ಬರೂ ಒಂದಾಗಿದ್ದಾರೆ. ಮದುವೆಯ ನಂತರ ಅವಿನಾಶ್ ಮಾತನಾಡಿ.. ತನ್ನ ಪತ್ನಿ ಫದ್ವಾ ಮತಾಂತರಗೊಳ್ಳುವಂತೆ ತಾವು ಎಂದಿಗೂ ಒತ್ತಾಯಿಸುವುದಿಲ್ಲ ಎಂದು ಹೇಳಿದ್ದಾರೆ.