ಗೋವಾದಲ್ಲಿ ಮೈತ್ರಿಗಾಗಿ ಮಮತಾ ಸೋನಿಯಾರನ್ನು ಸಂಪರ್ಕಿಸಿದ್ದರು: ಟಿಎಂಸಿ
ವಿಧಾನಸಭೆ ನಡೆಯಲಿರುವ ಗೋವಾದಲ್ಲಿ ಮೈತ್ರಿ ಮಾಡಿಕೊಳ್ಳುವುದಕ್ಕಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೋನಿಯಾ ಗಾಂಧಿ ಅವರನ್ನು ಸಂಪರ್ಕಿಸಿದ್ದರು ಎಂದು ಟಿಎಂಸಿ ಹೇಳಿದೆ.
Published: 22nd January 2022 12:06 PM | Last Updated: 22nd January 2022 01:21 PM | A+A A-

ಮಮತಾ ಬ್ಯಾನರ್ಜಿ
ನವದೆಹಲಿ: ವಿಧಾನಸಭೆ ನಡೆಯಲಿರುವ ಗೋವಾದಲ್ಲಿ ಮೈತ್ರಿ ಮಾಡಿಕೊಳ್ಳುವುದಕ್ಕಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೋನಿಯಾ ಗಾಂಧಿ ಅವರನ್ನು ಸಂಪರ್ಕಿಸಿದ್ದರು ಎಂದು ಟಿಎಂಸಿ ಹೇಳಿದೆ.
ಆದರೆ ಮಮತಾ ಬ್ಯಾನರ್ಜಿ ಅವರ ಮೈತ್ರಿ ಪ್ರಸ್ತಾವನೆಗೆ ಸೋನಿಯಾ ಗಾಂಧಿ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ ಎಂದು ಟಿಎಂಸಿ ರಾಷ್ಟ್ರೀಯ ಉಪಾಧ್ಯಕ್ಷ ಪವನ್ ಕೆ ವರ್ಮ ತಿಳಿಸಿದ್ದಾರೆ.
ಟಿಎಂಸಿಯೊಂದಿಗೆ ಮೈತ್ರಿಯ ವಿಷಯವಾಗಿ ನಿರಾಸಕ್ತಿ ತಿರುವ ಕಾಂಗ್ರೆಸ್, ಟಿಎಂಸಿಯನ್ನು ವಿಶ್ವಾಸಾರ್ಹವಲ್ಲದ ಮಿತ್ರ ಪಕ್ಷ ಎಂದು ಹೇಳಿದೆ.
ಇದನ್ನೂ ಓದಿ: ಗೋವಾ ಚುನಾವಣೆ: ಬಿಜೆಪಿ ತೊರೆದ ಉತ್ಪಲ್ ಪರಿಕ್ಕರ್, ಪಣಜಿಯಿಂದಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ
ರಾಷ್ಟ್ರೀಯ ಮಟ್ಟದಲ್ಲಿ ಟಿಎಂಸಿಯನ್ನು ವಿಪಕ್ಷಗಳು ಪ್ರತ್ಯೇಕವಾಗಿರಿಸುವುದು ಮಮತಾ ಬ್ಯಾನರ್ಜಿ ಅವರನ್ನು ಕಾಂಗ್ರೆಸ್ ನೊಂದಿಗೆ ಮೈತ್ರಿ ಪ್ರಸ್ತಾವವನ್ನು ಮುಂದಿಡುವಂತೆ ಮಾಡಿದೆ.