ಈ ಬಾರಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ 25 ಸ್ತಬ್ಧಚಿತ್ರ, 16 ಕವಾಯತು ತಂಡ, 17 ಮಿಲಿಟರಿ ಬ್ಯಾಂಡ್‌ಗಳು ಭಾಗಿ
ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ 16 ಕವಾಯತು ತಂಡಗಳು, 17 ಮಿಲಿಟರಿ ಬ್ಯಾಂಡ್‌ಗಳು ಮತ್ತು ವಿವಿಧ ರಾಜ್ಯಗಳ, ಇಲಾಖೆಗಳ ಮತ್ತು ಸಶಸ್ತ್ರ ಪಡೆಗಳ 25 ಸ್ತಬ್ಧಚಿತ್ರಗಳು ಭಾಗವಹಿಸಲಿವೆ...
Published: 22nd January 2022 06:59 PM | Last Updated: 22nd January 2022 06:59 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ 16 ಕವಾಯತು ತಂಡಗಳು, 17 ಮಿಲಿಟರಿ ಬ್ಯಾಂಡ್‌ಗಳು ಮತ್ತು ವಿವಿಧ ರಾಜ್ಯಗಳ, ಇಲಾಖೆಗಳ ಮತ್ತು ಸಶಸ್ತ್ರ ಪಡೆಗಳ 25 ಸ್ತಬ್ಧಚಿತ್ರಗಳು ಭಾಗವಹಿಸಲಿವೆ ಎಂದು ಭಾರತೀಯ ಸೇನೆ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಗಣರಾಜ್ಯೋತ್ಸವದ ಪರೇಡ್-2022(RDP-2022)ರಲ್ಲಿ ಅಶ್ವದಳದ ಮೌಂಟೆಡ್ ಕಾಲಮ್, 14 ಯಾಂತ್ರೀಕೃತ ಕಾಲಮ್‌ಗಳು, ಆರು ಮಾರ್ಚಿಂಗ್ ಕಾಂಟಿಜೆಂಟ್‌ಗಳು ಮತ್ತು ಅದರ ವಾಯುಯಾನ ವಿಭಾಗದ ಸುಧಾರಿತ ಲಘು ಹೆಲಿಕಾಪ್ಟರ್‌ಗಳ ಫ್ಲೈಪಾಸ್ಟ್ ಇರಲಿದೆ ಎಂದು ಸೇನೆ ಹೇಳಿದೆ.
ಇದನ್ನು ಓದಿ: ಈ ಬಾರಿ ಗಣರಾಜ್ಯೋತ್ಸವ ಪರೇಡ್ ಗೆ “ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು” ಸ್ತಬ್ದಚಿತ್ರ ಆಯ್ಕೆ
ಸೈನ್ಯದ ಯಾಂತ್ರೀಕೃತ ಕಾಲಮ್‌ಗಳು ಒಂದು PT-76 ಟ್ಯಾಂಕ್, ಒಂದು ಸೆಂಚುರಿಯನ್ ಟ್ಯಾಂಕ್, ಎರಡು MBT ಅರ್ಜುನ್ MK-I ಟ್ಯಾಂಕ್‌ಗಳು, ಒಂದು APC TOPAS ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳು, ಒಂದು BMP-I ಪದಾತಿ ದಳದ ಫೈಟರ್ ವಾಹನ ಮತ್ತು ಎರಡು BMP-II ಪದಾತಿ ದಳದ ಫೈಟರ್ ವಾಹನಗಳು ಇರಲಿವೆ.
ಭಾರತೀಯ ಸೇನೆಯ ರಜಪೂತ್ ರೆಜಿಮೆಂಟ್, ಅಸ್ಸಾಂ ರೆಜಿಮೆಂಟ್, ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್‌ಫಾಂಟ್ರಿ, ಸಿಖ್ ಲೈಟ್ ಇನ್‌ಫಾಂಟ್ರಿ, ಆರ್ಮಿ ಆರ್ಡನೆನ್ಸ್ ಕಾರ್ಪ್ಸ್ ರೆಜಿಮೆಂಟ್ ಮತ್ತು ಪ್ಯಾರಾಚೂಟ್ ರೆಜಿಮೆಂಟ್‌ನ ಆರು ಕವಾಯತು ತಂಡಗಳು ಸೇರಿದಂತೆ ಒಟ್ಟಾರೆ ಸಶಸ್ತ್ರ ಪಡೆಗಳ 16 ಕವಾಯತು ತಂಡಗಳನ್ನು ಹೊಂದಿರಲಿದೆ.
ಗಣರಾಜ್ಯೋತ್ಸವ ಪರೇಡ್-2022 ಪ್ರಾರಂಭವಾಗುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಅತ್ಯುನ್ನತ ತ್ಯಾಗ ಮಾಡಿದ ಸೈನಿಕರಿಗೆ ಗೌರವ ಸಲ್ಲಿಸುವ ಮೂಲಕ ಚಾಲನೆ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.