ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ಜನರು, 15 ವರ್ಷದೊಳಗಿನ ಮಕ್ಕಳಿಗೆ ಗಣರಾಜ್ಯೋತ್ಸವ ಪರೇಡ್ಗೆ ಅವಕಾಶವಿಲ್ಲ
ಈ ಬಾರಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಪಾಲ್ಗೊಳ್ಳುವ ಜನರು ಸಂಪೂರ್ಣವಾಗಿ ಕೋವಿಡ್ ವಿರುದ್ಧ ಲಸಿಕೆಯನ್ನು ಹಾಕಿಸಿಕೊಂಡಿರಬೇಕು ಮತ್ತು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಸಮಾರಂಭದಲ್ಲಿ ಭಾಗವಹಿಸಲು ಅನುಮತಿಸಲಾಗುವುದಿಲ್ಲ ಎಂದು ದೆಹಲಿ ಪೊಲೀಸರು ಹೊರಡಿಸಿದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
Published: 24th January 2022 11:21 AM | Last Updated: 24th January 2022 01:45 PM | A+A A-

ಭಾರತೀಯ ಸೇನೆಯಿಂದ ಬ್ಯಾಂಡ್ ರಿಹರ್ಸಲ್ ಕಾರ್ಯಕ್ರಮದ ಚಿತ್ರ
ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಪಾಲ್ಗೊಳ್ಳುವ ಜನರು ಸಂಪೂರ್ಣವಾಗಿ ಕೋವಿಡ್ ವಿರುದ್ಧ ಲಸಿಕೆಯನ್ನು ಹಾಕಿಸಿಕೊಂಡಿರಬೇಕು ಮತ್ತು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಸಮಾರಂಭದಲ್ಲಿ ಭಾಗವಹಿಸಲು ಅನುಮತಿಸಲಾಗುವುದಿಲ್ಲ ಎಂದು ದೆಹಲಿ ಪೊಲೀಸರು ಹೊರಡಿಸಿದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಜನವರಿ 26 ರಂದು ರಾಜ್ಪಥ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತಿತರ ಕೋವಿಡ್ ಶಿಷ್ಟಾಚಾರಗಳಿಗೆ ಬದ್ಧರಾಗಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ಡೋಸ್ ಲಸಿಕೆ ಹೊಂದಿರುವುದು ಅವಶ್ಯಕವಾಗಿದೆ. ಗಣರಾಜೋತ್ಸವ ಪರೇಡ್ ವೀಕ್ಷಣೆಗೆ ಬರುವವರು ತಮ್ಮ ಲಸಿಕಾ ಪ್ರಮಾಣ ಪತ್ರಗಳನ್ನು ತರುವಂತೆ ವಿನಂತಿಸಲಾಗಿದೆ ಎಂದು ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದಾರೆ.15 ವರ್ಷಕ್ಕಿಂತ ಕಡಿಮೆ ವಯೋಮಾನದವರಿಗೆ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಜನವರಿ 16 ರಂದು ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರೊಂದಿಗೆ ಪ್ರಾರಂಭವಾದ ರಾಷ್ಟ್ರೀಯ ಕೋವಿಡ್ ಲಸಿಕೆ ಅಭಿಯಾನವನ್ನು ಕ್ರಮೇಣ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ವಿಸ್ತರಿಸಲಾಯಿತು. ಈ ತಿಂಗಳಿನಿಂದ, 15-18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲು ಪ್ರಾರಂಭಿಸಲಾಯಿತು. ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಮತ್ತು 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಕೊಮೊರ್ಬಿಡಿಟಿ ಹೊಂದಿರುವವರಿಗೆ 'ಮುನ್ನೆಚ್ಚರಿಕೆ' ಡೋಸ್ ಗಳನ್ನು ನೀಡಲಾಗುತ್ತಿದೆ, ಓಮಿಕ್ರಾನ್ ರೂಪಾಂತರದ ಕಾರಣದಿಂದಾಗಿ ಪ್ರಕರಣಗಳು ಹೆಚ್ಚಾಗುತ್ತಿವೆ.
ಇದನ್ನೂ ಓದಿ: ಈ ಬಾರಿ ಗಣರಾಜ್ಯೋತ್ಸವ ಪರೇಡ್ನಲ್ಲಿ 25 ಸ್ತಬ್ಧಚಿತ್ರ, 16 ಕವಾಯತು ತಂಡ, 17 ಮಿಲಿಟರಿ ಬ್ಯಾಂಡ್ಗಳು ಭಾಗಿ
ಗಣರಾಜ್ಯೋತ್ಸವ ಸಮಾರಂಭಕ್ಕೆ ಆಗಮಿಸುವವರು ಆಸನದಲ್ಲಿ ಕುಳಿತುಕೊಳ್ಳಲು ಬೆಳಿಗ್ಗೆ 7 ಗಂಟೆಗೆ ತೆರೆಯಲಾಗುವುದು ಮತ್ತು ಅದಕ್ಕೆ ಅನುಗುಣವಾಗಿ ಆಗಮಿಸುವಂತೆ ದೆಹಲಿ ಪೊಲೀಸರು ಮಾರ್ಗಸೂಚಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಪಾರ್ಕಿಂಗ್ ಸೀಮಿತವಾಗಿರುವುದರಿಂದ, ಸಂದರ್ಶಕರು ಕಾರ್ಪೂಲ್ ಅಥವಾ ಟ್ಯಾಕ್ಸಿ ಬಳಸಲು ಸೂಚಿಸಲಾಗಿದೆ. ಅವರು ಮಾನ್ಯವಾದ ಗುರುತಿನ ಚೀಟಿ ಹೊಂದಲು ಮತ್ತು ಭದ್ರತಾ ತಪಾಸಣೆಯ ಸಮಯದಲ್ಲಿ ಸಹಕರಿಸಲು ವಿನಂತಿಸಲಾಗಿದೆ ಎಂದು ಅದು ಹೇಳಿದೆ. ಪ್ರತಿ ಪಾರ್ಕಿಂಗ್ ಪ್ರದೇಶದಲ್ಲಿ ರಿಮೋಟ್-ನಿಯಂತ್ರಿತ ಕಾರ್ ಲಾಕ್ ಕೀಗಳನ್ನು ಠೇವಣಿ ಮಾಡಲು ಅವಕಾಶವಿದೆ" ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಭದ್ರತಾ ಕರ್ತವ್ಯಗಳಿಗಾಗಿ 27,000 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ಮತ್ತು ಗಣರಾಜ್ಯೋತ್ಸವದ ದೃಷ್ಟಿಯಿಂದ ಭಯೋತ್ಪಾದನಾ ವಿರೋಧಿ ಕ್ರಮಗಳನ್ನು ತೀವ್ರಗೊಳಿಸಲಾಗಿದೆ ಎಂದು ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನಾ ಭಾನುವಾರ ಹೇಳಿದ್ದರು.