
ತಾಯಿ ಜತೆ ಹಿಮಪ್ರಿಯಾ
ಆಂಧ್ರಪ್ರದೇಶ: ಶ್ರೀಕಾಕುಳಂ ಜಿಲ್ಲೆಯ ಪೊನ್ನಂ ಗ್ರಾಮದವರಾದ ಗುರುಗು ಹಿಮಪ್ರಿಯಾ ಅವರಿಗೆ ಅಪರೂಪದ ಗೌರವ ಸಂದಿದೆ.
ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಭಾರತ ಸರ್ಕಾರ ವಾರ್ಷಿಕವಾಗಿ ಘೋಷಿಸುವ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಮಕ್ಕಳ ಪ್ರಶಸ್ತಿಗೆ ಹಿಮಪ್ರಿಯಾ ಈ ವರ್ಷ ರಾಜ್ಯದಿಂದ ನಾಮನಿರ್ದೇಶನಗೊಂಡಿದ್ದಾರೆ. ಕೆಚ್ಚೆದೆಯ ಸಾಹಸಗಳನ್ನು ಪ್ರದರ್ಶಿಸಿದ ವಿಭಾಗದಲ್ಲಿ ಹಿಮಪ್ರಿಯಾ ಅವರಿಗೆ ರಾಷ್ಟ್ರೀಯ ಬಾಲ ಪ್ರಶಸ್ತಿ ಬಂದಿದೆ.
ರಾಷ್ಟ್ರೀಯ ಬಾಲಕಿಯರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹಿಮಪ್ರಿಯಾ ಅವರಿಗೆ ವರ್ಚುವಲ್ ರೀತಿಯಲ್ಲಿ ಪ್ರಮಾಣಪತ್ರ ಮತ್ತು 1 ಲಕ್ಷ ರೂ.ಯನ್ನು ಶ್ರೀಕಾಕುಳಂ ಜಿಲ್ಲಾಧಿಕಾರಿ ಶ್ರೀಕೇಶ್ ಲಾಠಾಕರ್ ಅವರ ಮೂಲಕ ಪ್ರದಾನ ಮಾಡಿದರು.
ಇದನ್ನು ಓದಿ: ಅಮೋಘ ನೆನಪಿನ ಸಾಮರ್ಥ್ಯದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಹೆಸರು ಪಡೆದ 2ರ ಪೋರ
ಹಿಮಪ್ರಿಯಾ ಅವರ ತಂದೆ ಸತ್ಯನಾರಾಯಣ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಜಮ್ಮು ಮತ್ತು ಕಾಶ್ಮೀರದ ಸೇನಾ ಕ್ವಾರ್ಟರ್ಸ್ನಲ್ಲಿ ಫೆಬ್ರವರಿ 10, 2018 ರಂದು, ಭಯೋತ್ಪಾದಕರು ಅವರು ತಂಗಿದ್ದ ಕ್ವಾರ್ಟರ್ಸ್ ಮೇಲೆ ದಾಳಿ ಮಾಡಿದರು. ಈ ವೇಳೆ ಗಾಯಾಳು ಹಿಮಪ್ರಿಯಾ ಮನೋಧೈರ್ಯದೊಂದಿಗೆ ವೀರಾವೇಶದ ಹೋರಾಟ ನಡೆಸಿದರು. ಆಕೆ ತನ್ನ ತಾಯಿಯೊಂದಿಗೆ ಕ್ವಾರ್ಟರ್ಸ್ನಲ್ಲಿದ್ದ ಕೆಲವರನ್ನು ರಕ್ಷಿಸಿದಳು. ಭಯೋತ್ಪಾದಕರ ದಾಳಿಯಲ್ಲಿ ಗಾಯಗೊಂಡ ಮಗುವಿನ ಸಾಹಸಕ್ಕೆ ಈ ಪ್ರಶಸ್ತಿ ನೀಡಲಾಗಿದೆ.
ಸಾಹಸಿ ಬಾಲಕಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಹಿಮಪ್ರಿಯಾ ಅವರನ್ನು ಶ್ರೀಕಾಕುಳಂ ಜಿಲ್ಲಾಧಿಕಾರಿ ಜೊತೆಗೆ ಜಿಲ್ಲಾಡಳಿತ ಅಭಿನಂದಿಸಿದೆ. ಶ್ರೀಕಾಕುಳಂ ಜಿಲ್ಲೆಯ ಹಿಮಪ್ರಿಯಾ ಅವರು ಪೋಷಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದಾರೆ.