ಗಣರಾಜ್ಯೋತ್ಸವ ಪರೇಡ್ ಸ್ತಬ್ಧ ಚಿತ್ರದಲ್ಲಿ ಕಸೂತಿ ಪ್ರದರ್ಶನ; ಸಂಡೂರು ಲಂಬಾಣಿ ಮಹಿಳೆಯರಲ್ಲಿ ಸಂತಸ
ಜ.26 ರ ಗಣರಾಜ್ಯೋತ್ಸವ ಪರೇಡ್ ನ ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ರಾಜ್ಯದ ಸಂಡೂರಿನ ಕಸೂತಿಗಳು ಪ್ರದರ್ಶನಗೊಳ್ಳಲಿದ್ದು ಸಂಡೂರಿನ ಲಂಬಾಣಿ ಮಹಿಳೆಯರು ಅತೀವ ಸಂತಸಗೊಂಡಿದ್ದಾರೆ.
Published: 24th January 2022 05:57 PM | Last Updated: 24th January 2022 06:13 PM | A+A A-

ಸಂಡೂರಿನ ಕಸೂತಿಗಳು
ಹುಬ್ಬಳ್ಳಿ: ಜ.26 ರ ಗಣರಾಜ್ಯೋತ್ಸವ ಪರೇಡ್ ನ ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ರಾಜ್ಯದ ಸಂಡೂರಿನ ಕಸೂತಿಗಳು ಪ್ರದರ್ಶನಗೊಳ್ಳಲಿದ್ದು ಸಂಡೂರಿನ ಲಂಬಾಣಿ ಮಹಿಳೆಯರು ಅತೀವ ಸಂತಸಗೊಂಡಿದ್ದಾರೆ.
ಬಟ್ಟೆಗಳು, ಸೀರೆ, ಶಾಲುಗಳ ಮೇಲೆ ಲಂಬಾಣಿ ಮಹಿಳೆಯರ ಉತ್ತಮ ಕಸೂತಿ ಕೆಲಸಗಳಿಗೆ ಜಾಗತಿಕವಾಗಿ ಮಾರುಕಟ್ಟೆ ಲಭ್ಯವಿದ್ದು, ದಿವಂಗತ ರಾಜಕಾರಣಿ, ಸಂಡೂರು ರಾಜಮನೆತನದ ಎಂ ವೈ ಘೋರ್ಪಡೆ ಅವರು ಸಂಡೂರು ಕುಶಲ ಕಲಾ ಕೇಂದ್ರ ಎಂಬ ಸ್ವ-ಸಹಾಯ ತಂಡವನ್ನು ಸ್ಥಾಪಿಸಿದ್ದರು.
ಸಂಡೂರಿನ ಕಸೂತಿಗಳು ಪ್ರದರ್ಶನಗೊಳ್ಳುತ್ತಿರುವುದು ಸಂಡೂರು ಕೇಂದ್ರದ ಕುಶಲ ಕರ್ಮಿಗಳಿಗೆ ಗೌರವ, ಹೆಮ್ಮೆಯನ್ನುಂಟುಮಾಡಿದೆ. ಈ ಮೂಲಕ ಇಲ್ಲಿನ ಕಲಾಕೃತಿಗಳಿಗೆ ಉತ್ತಮ ಮನ್ನಣೆ ದೊರೆತಂತಾಗಿದೆ. ಇದಕ್ಕಾಗಿ ವಿಶೇಷ ಕಾರ್ಯಕ್ರಮ ಹಾಗೂ ಗಣರಾಜ್ಯೋತ್ಸವ ವೀಕ್ಷಿಸುವುದಕ್ಕೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಕೇಂದ್ರದ ಮಹಿಳಾ ಕಲಾವಿದರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಈ ಬಾರಿ ಗಣರಾಜ್ಯೋತ್ಸವ ಪರೇಡ್ ಗೆ “ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು” ಸ್ತಬ್ದಚಿತ್ರ ಆಯ್ಕೆ
ನಾನು ಈ ಕೇಂದ್ರದಲ್ಲಿ ದಶಕಕ್ಕೂ ಹೆಚ್ಚಿನ ಸಮಯದಿಂದ ಕೆಲಸ ಮಾಡುತ್ತಿದ್ದೇನೆ. ನಾವು ಇಲ್ಲಿ ಲಂಬಾಣಿ ಮಹಿಳೆಯರಿಗೆ ಕಸೂತಿ ಕೆಲಸಗಳ ತರಬೇತಿ ನೀಡುತ್ತೇವೆ. ಈ ರೀತಿಯ ಕಸೂತಿ ಇರುವ ಬಟ್ಟೆಗಳಿಗೆ ಉತ್ತಮ ಬೇಡಿಕೆ ಇದೆ.
ವಿನ್ಯಾಸಗಳಿಗಾಗಿ ಮಹಿಳೆಯರು ಶ್ರಮಿಸುತ್ತಾರೆ. ರಾಜ್ಯದ ಇತರ ಭಾಗದ ಕಲಾಕೃತಿಗಳೊಂದಿಗೆ ನಮ್ಮ ಕಲಾಕೃತಿಗಳನ್ನು ಹಂಚಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತದೆ ಎನ್ನುತ್ತಾರೆ ಮತ್ತೋರ್ವ ಕಲಾವಿದರು.