ಓಮಿಕ್ರಾನ್ ಕೊರೋನಾದ ಕೊನೆಯ ರೂಪಾಂತರಿಯಲ್ಲ; ಇನ್ನೂ ರೂಪಾಂತರಿಗಳು ಬರಬಹುದು: ಡಬ್ಲ್ಯೂಎಚ್ಒ ಎಚ್ಚರಿಕೆ
ಕೊರೋನಾ ವೈರಸ್ನ ಮತ್ತೊಂದು ರೂಪಾಂತರಿ ಓಮಿಕ್ರಾನ್ ಕೊನೆಯ ರೂಪಾಂತರಿಯಲ್ಲ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ರೂಪಾಂತರಿ ವೈರಸ್ಗಳು ಬರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ)ಯ ತಾಂತ್ರಿಕ ಪ್ರಮುಖ...
Published: 24th January 2022 04:20 PM | Last Updated: 24th January 2022 04:35 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಕೊರೋನಾ ವೈರಸ್ನ ಮತ್ತೊಂದು ರೂಪಾಂತರಿ ಓಮಿಕ್ರಾನ್ ಕೊನೆಯ ರೂಪಾಂತರಿಯಲ್ಲ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ರೂಪಾಂತರಿ ವೈರಸ್ಗಳು ಬರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ)ಯ ತಾಂತ್ರಿಕ ಪ್ರಮುಖ ಮಾರಿಯಾ ವ್ಯಾನ್ ಕೆರ್ಖೋವ್ ಅವರು ಎಚ್ಚರಿಸಿದ್ದಾರೆ.
ಪ್ರಪಂಚದಾದ್ಯಂತ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ವಿಶ್ವ ಆರೋಗ್ಯ ಸಂಸ್ಥೆಯು ಜನರು ಲಸಿಕೆಯನ್ನು ಪಡೆದುಕೊಳ್ಳಲು ಮತ್ತು ಮಾಸ್ಕ್ ಬಳಕೆ ಮುಂದುವರೆಸಲು ಹೇಳಿದೆ.
ಈ ವೈರಸ್ ಇನ್ನೂ ವಿಕಸನಗೊಳ್ಳುತ್ತಿದೆ, ಬದಲಾಗುತ್ತಿದೆ ಮತ್ತು ಅದಕ್ಕೆ ತಕ್ಕಂತೆ ನಾವು ಬದಲಾಗಬೇಕು ಮತ್ತು ನಮ್ಮನ್ನು ನಾವು ಸರಿದೂಗಿಸಿಕೊಳ್ಳಬೇಕಾಗಿದೆ. ನಾವು ಪ್ರಪಂಚದಾದ್ಯಂತ ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಪರಿವರ್ತನೆ ತರಲು ಪ್ರಯತ್ನಿಸಬೇಕು. ಇದು ಓಮಿಕ್ರಾನ್ ಅಲೆಯಿಂದ ಕೊನೆಗೊಳ್ಳುವುದಿಲ್ಲ ಎಂದು ಹೇಳಿದರು.
ಇದನ್ನು ಓದಿ: ಈಗ 171 ರಾಷ್ಟ್ರಗಳಲ್ಲಿ ಓಮಿಕ್ರಾನ್ ಅಬ್ಬರ: ಶೀಘ್ರದಲ್ಲೇ ಜಾಗತಿಕವಾಗಿ ಡೆಲ್ಟಾ ಸ್ಥಳವನ್ನು ಆವರಿಸುತ್ತದೆ: ಡಬ್ಲೂಎಚ್ ಒ
ಲಸಿಕೆ ಪ್ರಾರಂಭವಾದಾಗಿನಿಂದ ಪ್ರಪಂಚದಾದ್ಯಂತ ನಿರ್ವಹಿಸಲಾದ 10 ಶತಕೋಟಿ ಡೋಸ್ ಲಸಿಕೆಗಳಲ್ಲಿ ಇನ್ನೂ ಮೂರು ಬಿಲಿಯನ್ ಜನರು ಇನ್ನೂ ಮೊದಲ ಡೋಸ್ ಅನ್ನು ಪಡೆಯಬೇಕಾಗಿದೆ. ಅಂದರೆ ನಮ್ಮಲ್ಲಿ ಕೊರೋನಾ ಸೋಂಕಿಗೆ ಒಳಗಾಗುವ ಜನಸಂಖ್ಯೆ ಯಥೇಚ್ಛವಾಗಿದೆ ಮತ್ತು ಕೆಲವು ದೇಶಗಳು ಮುಂದೆ ಇದ್ದರೂ ಸಹ ನಾವು ಈ ಜಾಗತಿಕ ಸಮಸ್ಯೆಯನ್ನು ಜಾಗತಿಕ ಪರಿಹಾರಗಳೊಂದಿಗೆ ಪರಿಗಣಿಸಬೇಕಾಗಿದೆ ಎಂದಿದ್ದಾರೆ.
ಓಮಿಕ್ರಾನ್ ಕೊನೆಯ ರೂಪಾಂತರಿಯಾಗಿದ್ದು, ಅದರ ರೋಗಲಕ್ಷಣಗಳು ಸೌಮ್ಯವಾಗಿರುತ್ತವೆ ಎಂಬ ಊಹಾಪೋಗಳು ಎದ್ದಿವೆ. ಆದರೆ ಓಮಿಕ್ರಾನ್ ಸೌಮ್ಯ ಲಕ್ಷಣ ಹೊಂದಿಲ್ಲ. ಇದು ಡೆಲ್ಟಾಕ್ಕಿಂತ ಕಡಿಮೆ ತೀವ್ರವಾಗಿದೆ ಎಂದರು.
ಇದನ್ನು ಓದಿ: ಕೋವಿಡ್ 3ನೇ ಅಲೆ: ದೇಶದಲ್ಲಿ 3,06,064 ಹೊಸ ಪ್ರಕರಣ ದಾಖಲು, 439 ಸಾವು
ಭವಿಷ್ಯದ ರೂಪಾಂತರಿಗಳ ತೀವ್ರತೆ ಕಡಿಮೆಯಾಗಿರುತ್ತವೆ ಎಂದು ತಿಳಿದು ಬಂದಿದೆ. ಆದರೆ ಇನ್ನೂ ಖಚಿತವಾಗಿಲ್ಲ. ಓಮಿಕ್ರಾನ್ ಗಿಂತಲೂ ಹೆಚ್ಚು ವಿಕಸನಗೊಂಡಿರುವ ಹೆಚ್ಚಿನ ರೂಪಾಂತರಿಗಳು ಹೊರಹೊಮ್ಮುತ್ತವೆ ಎಂಬ ನಿರೀಕ್ಷೆಯಿದೆ. ಅವುಗಳ ತೀವ್ರತೆಯೂ ಕಡಿಮೆಯಾಗಿರುತ್ತದೆ ಎಂಬುದಕ್ಕೂ ಯಾವುದೇ ನಿಖರತೆ ಇಲ್ಲ. ವಿಕಸನಗೊಂಡ ಗುಣಲಕ್ಷಣಗಳು ನಮ್ಮ ಲಸಿಕೆಗಳನ್ನು ನಿಷ್ಪರಿಣಾಮಕಾರಿಯಾಗಿಸಬಹುದು ಎಂದು ಹೇಳಿದರು.
ಈ ವೈರಸ್ ನಿಜವಾಗಿಯೂ ತೀವ್ರವಾಗಿ ಹರಡುತ್ತಿದೆ, ಹರಡುವಿಕೆಯನ್ನು ಕಡಿಮೆ ಮಾಡಲು ಅಗತ್ಯವಿರುವ ಕ್ರಮಗಳೊಂದಿಗೆ ಸಮರ್ಪಕವಾಗಿ ಮುನ್ನಡೆಯುವುದು ನಮ್ಮ ಮುಂದಿರುವ ಸವಾಲು. ನಾವು ಬಹಳ ಜಾಗರೂಕರಾಗಿರಲು ಜನರ ಬಳಿ ಮನವಿ ಮಾಡುತ್ತೇವೆ ಎಂದು ಹೇಳಿದರು.