ರಣಹೇಡಿ! ಆರ್ ಪಿಎನ್ ಸಿಂಗ್ ರಾಜೀನಾಮೆ ಕುರಿತು ಕಾಂಗ್ರೆಸ್ ಪ್ರತಿಕ್ರಿಯೆ
ಹಿರಿಯ ಮುಖಂಡ ಆರ್ ಪಿಎನ್ ಸಿಂಗ್ ರಾಜೀನಾಮೆ ಕುರಿತಂತೆ ಮಂಗಳವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಶೌರ್ಯದಿಂದ ಹೋರಾಡುವವರೊಂದಿಗೆ ಮಾತ್ರ ಕಾಂಗ್ರೆಸ್ ಯುದ್ಧದಲ್ಲಿ ಹೋರಾಡುತ್ತದೆ. ರಣಹೇಡಿಗಳು ಹೋರಾಡಲು ಸಾಧ್ಯವಿಲ್ಲ ಎಂದಿದೆ.
Published: 25th January 2022 03:31 PM | Last Updated: 25th January 2022 04:30 PM | A+A A-

ಆರ್ ಪಿಎನ್ ಸಿಂಗ್, ಕಾಂಗ್ರೆಸ್ ವಕ್ತಾರೆ ಸುಪ್ರಿಯಾ
ನವದೆಹಲಿ: ಹಿರಿಯ ಮುಖಂಡ ಆರ್ ಪಿಎನ್ ಸಿಂಗ್ ರಾಜೀನಾಮೆ ಕುರಿತಂತೆ ಮಂಗಳವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಶೌರ್ಯದಿಂದ ಹೋರಾಡುವವರೊಂದಿಗೆ ಮಾತ್ರ ಕಾಂಗ್ರೆಸ್ ಯುದ್ಧದಲ್ಲಿ ಹೋರಾಡುತ್ತದೆ. ರಣಹೇಡಿಗಳು ಹೋರಾಡಲು ಸಾಧ್ಯವಿಲ್ಲ ಎಂದಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ವಕ್ತಾರೆ ಸುಪ್ರಿಯಾ ಶ್ರಿನೇಟ್, ಇದು ಸೈದ್ಧಾಂತಿಕ, ಸತ್ಯದ ಕದನವಾಗಿದೆ ಮತ್ತು ಇದರಂತೆ ಪ್ರಬಲವಾದ ಪಿಚ್ನೊಂದಿಗೆ ಹೋರಾಡಲು ನೀವು ಅದನ್ನು ಧೈರ್ಯದಿಂದ ಮತ್ತು ಸಾಕಷ್ಟು ಸಮರ್ಪಣೆಯೊಂದಿಗೆ ಹೋರಾಡಬೇಕು. ಇದರರ್ಥ ಈ ಹೋರಾಟ ಹೇಡಿಗಳಿಗೆ ಅಲ್ಲ ಎಂದು ಭಾವಿಸುವುದಾಗಿ ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ತೊರೆದ ಆರ್ ಪಿಎನ್ ಸಿಂಗ್ ಬಿಜೆಪಿಗೆ ಸೇರ್ಪಡೆ
ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದಂತೆ, ಈ ಯುದ್ಧವನ್ನು ಹೋರಾಡಲು ನೀವು ನಿಮ್ಮ ಕಾಲ್ಬೆರಳುಗಳ ಮೇಲೆ ಇರಬೇಕು, ನಿಮಗೆ ಧೈರ್ಯ ಬೇಕು, ನೀವು ಹೇಡಿಯಾಗಿರಬಾರದು, ಈ ಯುದ್ದದಲ್ಲಿ ಹೋರಾಡಿ ಗೆಲ್ಲಬೇಕು ಎಂದು ಅವರು ಹೇಳಿದರು.
#WATCH | The battle which Congress party is fighting can be fought only with bravery... It requires courage, strength and Priyanka Gandhi Ji has said that coward people can't fight it: Congress Spokesperson Supriya Shrinate on RPN Singh's resignation from the party pic.twitter.com/gGqONbdIYG
— ANI (@ANI) January 25, 2022
ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಆರ್ಪಿಎನ್ ಸಿಂಗ್ ಅವರು ಮಂಗಳವಾರ ತಮ್ಮ ಪಕ್ಷವನ್ನು ತೊರೆದು, ಬಿಜೆಪಿ ಪಕ್ಷ ಸೇರುತ್ತಿರುವುದರಿಂದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸ್ಪಲ್ಪ ಹಿನ್ನಡೆಯಾಗುವ ಸಾಧ್ಯತೆಯಿದೆ.