ರಿಲಯನ್ಸ್ ಕುಟುಂಬದಲ್ಲಿ ಶೀಘ್ರದಲ್ಲೇ ರಾಯಲ್ ವೆಡ್ಡಿಂಗ್: ಅಂಬಾನಿ ಮನೆಯ ಸಮಾರಂಭಕ್ಕೆ ಬಾಲಿವುಡ್ ಸೆಲೆಬ್ರಿಟಿಗಳು!
ರಿಲಯನ್ಸ್ ಕುಟುಂಬದಲ್ಲಿ ಶೀಘ್ರದಲ್ಲೇ ಮತ್ತೊಂದು ರಾಯಲ್ ವೆಡ್ಡಿಂಗ್ ಕಾರ್ಯಕ್ರಮ ನಡೆಯಲಿದ್ದು, ಅನಿಲ್ ಅಂಬಾನಿಯವರ ಮಗ ಜೈ ಅನ್ಮೋಲ್ ಅಂಬಾನಿ ಮತ್ತು ಕ್ರಿಶಾ ಶಾ ಅವರ ವಿವಾಹಕ್ಕೆ ಸಿದ್ಧತೆಗಳು ಭರದಿಂದ ಸಾಗಿದೆ.
Published: 25th January 2022 09:55 PM | Last Updated: 27th January 2022 04:17 PM | A+A A-

ಜೈ ಅನ್ಮೋಲ್ ಅಂಬಾನಿ ಮತ್ತು ಕ್ರಿಶಾ ಶಾ
ಮುಂಬೈ: ರಿಲಯನ್ಸ್ ಕುಟುಂಬದಲ್ಲಿ ಶೀಘ್ರದಲ್ಲೇ ಮತ್ತೊಂದು ರಾಯಲ್ ವೆಡ್ಡಿಂಗ್ ಕಾರ್ಯಕ್ರಮ ನಡೆಯಲಿದ್ದು, ಅನಿಲ್ ಅಂಬಾನಿಯವರ ಮಗ ಜೈ ಅನ್ಮೋಲ್ ಅಂಬಾನಿ ಮತ್ತು ಕ್ರಿಶಾ ಶಾ ಅವರ ವಿವಾಹಕ್ಕೆ ಸಿದ್ಧತೆಗಳು ಭರದಿಂದ ಸಾಗಿದೆ.
ಹೌದು.. ಈ ಹಿಂದೆ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಅವರ ವಿವಾಹವು ವಿಶ್ವದ ಅತ್ಯಂತ ಸಂಭ್ರಮಾಚರಣೆಯಿಂದ ನಡೆದಿತ್ತು. 2018 ರಲ್ಲಿ ಆನಂದ್ ಪಿರಮಾಲ್ ಜೊತೆ ನಡೆದ ಅದ್ದೂರಿ ಮದುವೆಗೆ ಕುಟುಂಬ ನೂರಾರು ಕೋಟಿ ಖರ್ಚು ಮಾಡಿದೆ ಎಂದು ವರದಿಯಾಗಿದೆ. ಇತ್ತೀಚಿಗೆ ಅಂಬಾನಿ ಕುಟುಂಬ ಮತ್ತೊಂದು ಅದ್ದೂರಿ ವಿವಾಹಕ್ಕೆ ತಯಾರಿ ನಡೆಸುತ್ತಿದೆ. ಇದೇ ಅನಿಲ್ ಅಂಬಾನಿಯವರ ಮಗ ಜೈ ಅನ್ಮೋಲ್ ಅಂಬಾನಿ.
ಕ್ರಿಶಾ ಶಾ ಎಂಬ ಉದ್ಯಮಿ ಅನ್ಮೋಲ್ ಮದುವೆಯಾಗಲಿದ್ದಾರೆ ಎಂಬ ವದಂತಿ ತಿಂಗಳ ಹಿಂದೆ ಹಬ್ಬಿತ್ತು. ಇತ್ತೀಚೆಗಷ್ಟೇ ಅವರ ಮದುವೆಗೆ ಮುಂಚಿನ ಫೋಟೋಗಳನ್ನು ರಾಜಕಾರಣಿ ಸುಪ್ರಿಯಾ ಸುಳೆ ಅವರು ಪೋಸ್ಟ್ ಮಾಡಿದ್ದಾರೆ. ಅಂಬಾನಿ ಅವರ ಕುಟುಂಬ ಸದಸ್ಯರು ಸಾಮಾಜಿಕ ಮಾಧ್ಯಮದಲ್ಲಿ ಅದರ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ಇದರೊಂದಿಗೆ ಈ ವಿಚಾರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಇಶಾ ಅಂಬಾನಿ ಅವರ ಮದುವೆಯಂತೆ, ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳು ಅವರ ಮದುವೆಗೆ ಹಾಜರಾಗುವ ನಿರೀಕ್ಷೆಯಿದೆ. ಅನಿಲ್ ಅಂಬಾನಿ ಕುಟುಂಬವು ಪ್ರಸ್ತುತ ಮದುವೆಗೆ ಹಾಜರಾಗಬೇಕಾದವರ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ ಎಂದು ತಿಳಿದು ಬಂದಿದೆ.