
ಕಿಶೋರ್ ಉಪಾಧ್ಯಾಯ
ಡೆಹ್ರಾಡೂನ್: ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಮುನ್ನವೇ ಪಕ್ಷದಿಂದ ಉಚ್ಛಾಟಿತಗೊಂಡಿದ್ದ ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಿಶೋರ್ ಉಪಾಧ್ಯಾಯ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ: ತಪ್ಪಿದ ಪರಿಷತ್ ವಿಪಕ್ಷ ಸ್ಥಾನ: ಕಾಂಗ್ರೆಸ್ ಗೆ ಸಿಎಂ ಇಬ್ರಾಹಿಂ ಗುಡ್ ಬೈ
ಬಿಜೆಪಿ ಕಚೇರಿಗೆ ಆಗಮಿಸಿದ ಕಿಶೋರ್ ಅವರು ತಾವು ಈಗ ಹೊಸತೇನಾದರೂ ಮಾಡುವ ಸಮಯ ಬಂದಿದೆ ಎಂದು ಹೇಳಿದರು. ಅಲ್ಲದೆ 'ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮಾತ್ರ ಉತ್ತರಾಖಂಡದ ಅಭಿವೃದ್ಧಿ ಸಾಧ್ಯ ಎಂದು ನಾನು ಭಾವಿಸುತ್ತೇನೆ ಮತ್ತು ಉತ್ತರಾಖಂಡವನ್ನು ಉತ್ತಮ ರಾಜ್ಯವಾಗಿಸಲು ನಾನು ಕೆಲಸ ಮಾಡಲು ಬಯಸುತ್ತೇನೆ' ಎಂದು ಹೇಳಿದರು.
ಇದನ್ನೂ ಓದಿ: ಪಂಚ ರಾಜ್ಯಗಳ ಚುನಾವಣೆ: ಇತರ ಕೆಲ ಹಿರಿಯ ಮುಖಂಡರು ಪಕ್ಷದಿಂದ ನಿರ್ಗಮನ, ಕಾಂಗ್ರೆಸ್ ಗೆ ಮತ್ತಷ್ಟು ಸಂಕಷ್ಟ?
ಕಾಂಗ್ರೆಸ್ ನಿಂದ ಉಚ್ಛಾಟನೆಗೊಂಡಿದ್ದರ ಹಿನ್ನೆಲೆ ಕೇಳಿದಾಗ ಕಿಶೋರ್ ಉಪಾಧ್ಯಾಯ ಅವರು ತಾವು ಬಿಜೆಪಿ ನಾಯಕರೊಡನೆ ಇರುವ ಚಿತ್ರವು ವೈರಲ್ ಆಗಿದ್ದೇ ತಮ್ಮ ಉಚ್ಛಾಟನೆಗೆ ಕಾರಣ ಎಂದಿದ್ದಾರೆ.
ಇದನ್ನೂ ಓದಿ: ಜಾರಕಿಹೊಳಿಗೆ ಇತರ ಪಕ್ಷಗಳ ಎಷ್ಟು ಮಂದಿ ಶಾಸಕರನ್ನು ಬೇಕಾದರೂ ಬಿಜೆಪಿಗೆ ಕರೆತರುವಷ್ಟು ಶಕ್ತಿ ಇದೆ: ಗೋವಿಂದ ಕಾರಜೋಳ
ಇದಕ್ಕೂ ಮುನ್ನ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರಿಂದಾಗಿ ಕಿಶೋರ್ ಉಪಾಧ್ಯಾಯ ಅವರನ್ನು ಉಚ್ಛಾಟನೆ ಮಾಡಿರುವುದಾಗಿ ಕಾಂಗ್ರೆಸ್ ಹೇಳಿತ್ತು.
ಇದನ್ನೂ ಓದಿ: ‘ಹುಚ್ಚು ಹಿಡಿದವರು ಮಾತ್ರ ಕಾಂಗ್ರೆಸ್ಗೆ ಹೋಗುತ್ತಾರೆ, ಬುದ್ಧಿ ನೆಟ್ಟಗೆ ಇರುವವರು ಯಾರೂ ಹೋಗುವುದಿಲ್ಲ’