ಮುಂಬೈ: ಹಕ್ಕುಸ್ವಾಮ್ಯ 'ಉಲ್ಲಂಘನೆ' ಪ್ರಕರಣ, ಗೂಗಲ್ ಸಿಇಒ ಸುಂದರ್ ಪಿಚೈ ವಿರುದ್ಧ ಎಫ್ ಐಆರ್
ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದ ಪ್ರಕರಣದಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಕಂಪನಿಯ ಇತರ ಐವರು ಉದ್ಯೋಗಿಗಳ ವಿರುದ್ಧ ಕೋರ್ಟ್ ಆದೇಶದಂತೆ ಎಫ್ ಐಆರ್ ದಾಖಲಿಸಲಾಗಿದೆ.
Published: 27th January 2022 09:32 AM | Last Updated: 27th January 2022 01:39 PM | A+A A-

ಗೂಗಲ್ ಸಿಇಒ ಸುಂದರ್ ಪಿಚ್ಚೈ
ಮುಂಬೈ: ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದ ಪ್ರಕರಣದಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಕಂಪನಿಯ ಇತರ ಐವರು ಉದ್ಯೋಗಿಗಳ ವಿರುದ್ಧ ಕೋರ್ಟ್ ಆದೇಶದಂತೆ ಎಫ್ ಐಆರ್ ದಾಖಲಿಸಲಾಗಿದೆ.
ಯೂಟ್ಯೂಬ್ನಂತಹ ಪ್ಲಾಟ್ಫಾರ್ಮ್ಗಳಲ್ಲಿ ತಮ್ಮ ಕಂಟೆಂಟ್ ರಕ್ಷಿಸಲು ಹಕ್ಕುಸ್ವಾಮ್ಯ ಮಾಲೀಕರು ಬಳಸಬಹುದಾದ ಕಾರ್ಯವಿಧಾನವನ್ನು ಹೊಂದಿರುವುದಾಗಿ ಸರ್ಚ್ ಇಂಜಿನ್ ದೈತ್ಯ ತನ್ನ ಪ್ರತಿಕ್ರಿಯೆಯಲ್ಲಿ ಹೇಳಿದೆ.
ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ಮೇರೆಗೆ ಉಪನಗರ ಅಂಧೇರಿಯಲ್ಲಿರುವ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಸಂಜೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪದ ಮೇಲೆ ಗೂಗಲ್ ಮತ್ತು ಅದರ ಉನ್ನತ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಸುನೀಲ್ ದರ್ಶನ್ ನ್ಯಾಯಾಲಯದ ಮೊರೆ ಹೋಗಿದ್ದರು. 'ಇಂಟಕಂ ಮತ್ತು ಅಂದಾಜ್ ನಂತಹ ಚಲಚಿತ್ರಗಳ ನಿರ್ಮಾಪಕರಾಗಿರುವ ದರ್ಶನ್, ಗೂಗಲ್ ಮತ್ತು ಅದರ ತಂಡ 2017ರ ನಿರ್ದೇಶನದ 'ಏಕ್ ಹಸೀನಾ ಥಿ ಏಕ್ ದೀವಾನಾ ಥಾ' ಸಿನಿಮಾದ ಕಾಫಿ ರೈಟ್ಸ್ ಉಲ್ಲಂಘಿಸಿದ್ದಾರೆ ಎಂದು ಅವರು ದೂರು ದಾಖಲಿಸಿದ್ದರು.
ಇದನ್ನೂ ಓದಿ: ಜಾಗತಿಕ ಕಾರ್ಯಪಡೆ ಸ್ಟೀರಿಂಗ್ ಕಮಿಟಿಗೆ ಸುಂದರ್ ಪಿಚೈ ಸೇರಿ ಮೂವರು ಭಾರತೀಯ ಅಮೆರಿಕನ್ ಸಿಇಓಗಳು
ಈ ಕುರಿತಂತೆ ಪ್ರತಿಕ್ರಿಯಿಸಿರುವ ಭಾರತದಲ್ಲಿನ ಗೂಗಲ್ ಕಂಪನಿ ವಕ್ತಾರರು, ಅನಧಿಕೃತ ಅಪ್ಲೋಡ್ಗಳ ಕುರಿತು ತಿಳಿಸಲು ಹಕ್ಕುಸ್ವಾಮ್ಯ ಮಾಲೀಕರ ಮೇಲೆ ಕಂಪನಿ ಅವಲಂಬಿತವಾಗಿದೆ ಮತ್ತು ಅವರಿಗೆ ಹಕ್ಕುಗಳ ನಿರ್ವಹಣಾ ಪರಿಕರಗಳನ್ನು ನೀಡುತ್ತದೆ, ಉದಾಹರಣೆಗೆ YouTube ನ ವಿಷಯ ID ವ್ಯವಸ್ಥೆಯಂತಹ ಹಕ್ಕುಗಳನ್ನು ಹೊಂದಿರುವವರು ತಮ್ಮ ವಿಷಯವನ್ನು ಗುರುತಿಸಲು, ನಿರ್ಬಂಧಿಸಲು, ಪ್ರಚಾರ ಮಾಡಲು ಮತ್ತು ಅವರ ಕಂಟೆಂಟ್ ಅಪ್ಲೋಡ್ಗಳಿಂದ ಹಣ ಸಂಪಾದಿಸಲು ಸ್ವಯಂಚಾಲಿತ ದಾರಿಯನ್ನು ನೀಡುತ್ತದೆ ಎಂದರು.
ಹಕ್ಕುಸ್ವಾಮ್ಯ ಹೊಂದಿರುವವರು ತಮ್ಮ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸುವ ವೀಡಿಯೊದ ಕುರಿತು ನಮಗೆ ಸೂಚಿಸಿದಾಗ, ನಾವು ಕಾನೂನಿಗೆ ಅನುಸಾರವಾಗಿ ಕಂಟೆಂಟ್ ನ್ನು ತ್ವರಿತವಾಗಿ ತೆಗೆದುಹಾಕುತ್ತೇವೆ ಮತ್ತು ಬಹು ಹಕ್ಕುಸ್ವಾಮ್ಯ ದಾಳಿಯೊಂದಿಗೆ ಬಳಕೆದಾರರ ಖಾತೆಗಳನ್ನು ರದ್ದುಗೊಳಿಸುವುದಾಗಿ ವಕ್ತಾರರು ತಿಳಿಸಿದರು.