
ಸಾಂದರ್ಭಿಕ ಚಿತ್ರ
ಬೆಂಗಳೂರು: ಜಾಗತಿಕ ಮಟ್ಟದ ಶ್ರೀಮಂತ (ಬೆಲೆಬಾಳುವ) ಐಟಿ ಕಂಪನಿಗಳ ಟಾಪ್ 25 ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಭಾರತದ 6 ಕಂಪನಿಗಳು ಸ್ಥಾನಪಡೆದಿವೆ.
ಇದನ್ನೂ ಓದಿ: ಮಾನವ ಕೂದಲು ರಫ್ತಿಗೆ ನಿರ್ಬಂಧ ವಿಧಿಸಿದ ಕೇಂದ್ರ ಸರ್ಕಾರ
ಎರಡನೇ ಸ್ಥಾನದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಇದ್ದರೆ, ಮೂರನೇ ಸ್ಥಾನದಲ್ಲಿ ಇನ್ಫೋಸಿಸ್ ಕಂಪನಿ ಸ್ಥಾನ ಪಡೆದಿದೆ. ಇನ್ನುಳಿದಂತೆ ವಿಪ್ರೊ(7), ಎಚ್ ಸಿ ಎಲ್(8), ಟೆಕ್ ಮಹೀಂದ್ರ(15) ಮತ್ತು ಎಲ್ ಟಿ ಐ(22) ಕಂಪನಿಗಳು ಟಾಪ್ 25 ಶ್ರೀಮಂತ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಇದನ್ನೂ ಓದಿ: ಭಾರತದ ಆರ್ಥಿಕತೆ ಬಗ್ಗೆ ಆರ್ ಬಿಐ ನ ಮಾಜಿ ಗೌರ್ನರ್ ರಘುರಾಮ್ ರಾಜನ್ ಹೇಳಿದ್ದಿಷ್ಟು...
ಟಾಪ್ 25ರ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಅಕ್ಸೆಂಚರ್ ಕಂಪನಿ ತನ್ನದಾಗಿಸಿಕೊಂಡಿದೆ. ಬ್ರ್ಯಾಂಡ್ ಫೈನಾನ್ಸ್ ಐಟಿ ಸರ್ವೀಸಸ್ ಅಂತಾರಾಷ್ಟ್ರೀಯ ಸಂಸ್ಥೆ ಈ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಇದನ್ನೂ ಓದಿ: 2021ರಲ್ಲಿ ಲ್ಯಾಂಬೊರ್ಗಿನಿ, ಪೋರ್ಶಾ ಸೂಪರ್ ಕಾರುಗಳ ದಾಖಲೆ ಮಾರಾಟ