ಪಂಜಾಬ್ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಸದ್ಯದಲ್ಲಿಯೇ ಘೋಷಣೆ: ರಾಹುಲ್ ಗಾಂಧಿ

ಪಂಜಾಬ್ ರಾಜ್ಯದಲ್ಲಿ ಈಗ ಚುನಾವಣೆ ಪರ್ವ. ವಿಧಾನಸಭೆಯಲ್ಲಿ ಸಾಮೂಹಿಕ ನಾಯಕತ್ವದಡಿ ಹೋಗುವುದಕ್ಕಿಂತ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಘೋಷಿಸಿ ಚುನಾವಣೆಯನ್ನು ಎದುರಿಸೋಣ ಎಂದು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಹೇಳಿರುವುದರಿಂದ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಸದ್ಯದಲ್ಲಿಯೇ ಘೋಷಿಸಲಾಗುವುದು ಎಂದು ಕಾಂಗ್ರೆಸ್
ನವಜೋತ್ ಸಿಂಗ್ ಸಿಧು ಮತ್ತು ಸಿಎಂ ಚರಂಜಿತ್ ಸಿಂಗ್ ಚನ್ನಿ
ನವಜೋತ್ ಸಿಂಗ್ ಸಿಧು ಮತ್ತು ಸಿಎಂ ಚರಂಜಿತ್ ಸಿಂಗ್ ಚನ್ನಿ

ಚಂಡೀಗಢ: ಪಂಜಾಬ್ ರಾಜ್ಯದಲ್ಲಿ ಈಗ ಚುನಾವಣೆ ಪರ್ವ. ವಿಧಾನಸಭೆಯಲ್ಲಿ ಸಾಮೂಹಿಕ ನಾಯಕತ್ವದಡಿ ಹೋಗುವುದಕ್ಕಿಂತ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಘೋಷಿಸಿ ಚುನಾವಣೆಯನ್ನು ಎದುರಿಸೋಣ ಎಂದು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಹೇಳಿರುವುದರಿಂದ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಸದ್ಯದಲ್ಲಿಯೇ ಘೋಷಿಸಲಾಗುವುದು ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಪಂಜಾಬ್ ನ ಜಲಂದರ್ ನಲ್ಲಿ ನಿನ್ನೆ ಪಂಜಾಬ್ ಫತೆಹ್ ವರ್ಚುವಲ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಇಬ್ಬರೂ ಇಲ್ಲಿಗೆ ಬರುವಾಗ ಸಿಎಂ ಅಭ್ಯರ್ಥಿ ಹೆಸರಿನ ಘೋಷಣೆ ವಿಷಯವನ್ನು ಚರ್ಚಿಸಿದರು. ಇದು ಪಂಜಾಬ್‌ನ ಮುಂದಿರುವ ಅತ್ಯಂತ ನಿರ್ಣಾಯಕ ಪ್ರಶ್ನೆ ಎಂದು ಇಬ್ಬರೂ ನನಗೆ ಹೇಳಿದರು. ಸಿಎಂ ಅಭ್ಯರ್ಥಿ ಹೆಸರನ್ನು ಘೋಷಿಸುವಂತೆ ಕೇಳಿಕೊಂಡರು ಎಂದರು.

ಕಾಂಗ್ರೆಸ್ ನಾಯಕತ್ವ, ಹೈಕಮಾಂಡ್ ಯಾರ ಹೆಸರನ್ನು ಸೂಚಿಸಿದರೂ ತಾವು ಅದನ್ನು ಗೌರವಿಸಿ ಅವರಿಗೆ ಬೆಂಬಲ ನೀಡುವುದಾಗಿ ಇಬ್ಬರೂ ಭರವಸೆ ನೀಡಿದ್ದಾರೆ. ಅವರ ಮಾತುಗಳನ್ನು ಕೇಳಿದಾಗ ನನಗೆ ಖುಷಿಯಾಯಿತು. ಇಬ್ಬರೂ ಪಕ್ಷಕ್ಕೆ ಬದ್ಧರಾಗಿದ್ದಾರೆ ಎಂದು ತಿಳಿಯಿತು. ಇದನ್ನು ಪಕ್ಷದಲ್ಲಿ, ಕಾರ್ಯಕರ್ತರೊಂದಿಗೆ ಚರ್ಚೆ ಮಾಡಿ ಸಿಎಂ ಅಭ್ಯರ್ಥಿ ಹೆಸರನ್ನು ಘೋಷಿಸುತ್ತೇವೆ ಎಂದರು.

ಇದಕ್ಕೂ ಮುನ್ನ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ನವಜೋತ್ ಸಿಂಗ್ ಸಿಧು, ಕಾಂಗ್ರೆಸ್ ನ್ನು ಯಾರು ಮುನ್ನಡೆಸುತ್ತಾರೆ ಎಂದು ಪಂಜಾಬ್ ಜನತೆಗೆ ಹೇಳಿ, ಅಜೆಂಡಾವನ್ನು ಯಾರು ಜಾರಿಗೊಳಿಸುತ್ತಾರೆ. ಒಂದು ಬಾರಿ ಆ ಬಗ್ಗೆ ಸ್ಪಷ್ಟತೆ ತಂದರೆ ಖಂಡಿತವಾಗಿಯೂ ಕಾಂಗ್ರೆಸ್ 70 ಸೀಟುಗಳನ್ನು ಗೆಲ್ಲುತ್ತದೆ ಎಂದು ನಾನು ಭರವಸೆ ನೀಡುತ್ತೇನೆ ಎಂದರು.

ಸಿಎಂ ಚನ್ನಿ ಮತ್ತು ಸಿಧು ನಡುವಿನ ಗೊಂದಲ ಮಧ್ಯೆ ತಾವು ಒಗ್ಗಟ್ಟಾಗಿದ್ದೇವೆ ಎಂದು ತೋರಿಸಲು ಪ್ರಯತ್ನಿಸುತ್ತಿದ್ದಾರೆ. ತಮ್ಮಿಬ್ಬರ ಮಧ್ಯೆ ಯಾವುದೇ ಜಗಳ, ಗೊಂದಲಗಳಿಲ್ಲ ಎಂದು ಒಬ್ಬರನೊಬ್ಬರು ರ್ಯಾಲಿಯಲ್ಲಿ ಆಲಂಗಿಸಿಕೊಡರು. ಜನರು ನಮ್ಮಿಬ್ಬರ ಮಧ್ಯೆ ಜಗಳಗಳಿವೆ ಎಂದು ಮಾತನಾಡಿಕೊಳ್ಳುತ್ತಾರೆ. ಪಂಜಾಬ್ ಚುನಾವಣೆಗೆ ಸಿಎಂ ಅಭ್ಯರ್ಥಿ ಮುಖವನ್ನು ಘೋಷಿಸುವುದರಿಂದ ನಾವು ಇನ್ನಷ್ಟು ಒಗ್ಗಟ್ಟಾಗಿದ್ದೇವೆ ಎಂದು ತೋರಿಸುತ್ತೇವೆ ಎಂದು ಹೇಳಿದರು.

ಸಿಎಂ ಚನ್ನಿ ಮತ್ತು ಅಧ್ಯಕ್ಷ ಸಿಧು ನಡುವಿನ ಜಗಳ ಹೊಸದೇನಲ್ಲ. ಕಾಂಗ್ರೆಸ್‌ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಇದ್ದಾಗಲೆಲ್ಲ ಈ ಹಿಂದೆ ಸೋತಿತ್ತು. ಹೀಗಾಗಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಲೇಬೇಕು ಎಂದು ಚನ್ನಿ ಹೇಳಿದ್ದರು. 

ಕೆಲವು ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಹಿರಿಯ ಸಚಿವರಾದ ಬ್ರಹ್ಮ್ ಮೊಹಿಂದ್ರಾ, ಟ್ರಿಪ್ಟ್ ರಾಜಿಂದರ್ ಸಿಂಗ್ ಬಾಜ್ವಾ ಮತ್ತು ರಾಣಾ ಗುರ್ಜಿತ್ ಸಿಂಗ್ ಕೂಡ ಸಿಎಂ ಚನ್ನಿಯನ್ನು ಬೆಂಬಲಿಸಿ ಅವರನ್ನೇ ಸಿಎಂ ಮುಖ ಎಂದು ಘೋಷಿಸಲು ಪಕ್ಷದ ಹೈಕಮಾಂಡ್ ಅನ್ನು ಕೇಳಿದ್ದಾರೆ. ಜನರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆಯೇ ಹೊರತು ಪಕ್ಷದ ಹೈಕಮಾಂಡ್ ಅಲ್ಲ ಎಂದು ಸಿಧು ಈ ಹಿಂದೆ ಹೇಳಿದ್ದರು. 2012 ಮತ್ತು 2017ರ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com