
ಅಜಂ ಖಾನ್
ಲಕ್ನೋ: 2014ರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ಅವರ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿದೆ.
ಅಜಂ ಖಾನ್ ಅವರು ಸಮಾಜದ ಶಾಂತಿ ಕದಡುವ ಪ್ರಯತ್ನ ಮಾಡಬಹುದು ಜೊತೆಗೆ ಶಾಂತಿ ಕದಡಲು ಸಮುದಾಯದ ಜನರನ್ನು ಪ್ರಚೋದಿಸುವ ಸಾಧ್ಯತೆಯಿರುವುದರಿಂದ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ವಿಶೇಷ ಕೋರ್ಟ್ ನ್ಯಾಯಾಧೀಶ ಅಂಬರೀಶ್ ಕುಮಾರ್ ಶ್ರೀವಾಸ್ತವ್ ಆದೇಶ ಹೊರಡಿಸಿದ್ದಾರೆ.
ಹಜರತ್‌ಗಂಜ್ ಪೊಲೀಸರಿಗೆ ಅಲ್ಲಾಮ ಜಮೀರ್ ಅಖ್ತರ್ ನಖ್ವಿ ನೀಡಿದ ದೂರಿನ ಮೇರೆಗೆ 2019 ರ ಫೆಬ್ರವರಿಯಲ್ಲಿ ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಘಟನೆ 2014ರಲ್ಲಿ ನಡೆದಿದ್ದರೂ ಅಂದಿನ ಸರ್ಕಾರದ ಒತ್ತಡದಿಂದ ಪ್ರಕರಣ ದಾಖಲಿಸಲು ಸಾಧ್ಯವಾಗಿರಲಿಲ್ಲ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಅಜಂ ಖಾನ್ ಅವರ ಜಾಮೀನು ಅರ್ಜಿಯಲ್ಲಿ ಆರೋಪಗಳು ಆಧಾರರಹಿತವಾಗಿವೆ ಎಂದು ಮನವಿ ಮಾಡಿದರು.