ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ವಿ ಅನಂತ ನಾಗೇಶ್ವರನ್ ನೇಮಕ
ಡಿಸೆಂಬರ್ 7, 2021 ರಂದು ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಕೇಂದ್ರ ಸರ್ಕಾರ ಶುಕ್ರವಾರ ಡಾ. ವಿ ಅನಂತ ನಾಗೇಶ್ವರನ್....
Published: 28th January 2022 08:04 PM | Last Updated: 28th January 2022 08:11 PM | A+A A-

ವಿ ಅನಂತ ನಾಗೇಶ್ವರನ್
ನವದೆಹಲಿ: ಡಿಸೆಂಬರ್ 7, 2021 ರಂದು ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಕೇಂದ್ರ ಸರ್ಕಾರ ಶುಕ್ರವಾರ ಡಾ. ವಿ ಅನಂತ ನಾಗೇಶ್ವರನ್ ಅವರನ್ನು ನೇಮಕ ಮಾಡಿದೆ.
ಸಂಸತ್ತಿನಲ್ಲಿ 2022-23ನೇ ಸಾಲಿನ ಆರ್ಥಿಕ ಸಮೀಕ್ಷೆ ಮಂಡಿಸುವ ಎರಡು ದಿನಗಳ ಮುನ್ನ ಡಾ. ವಿ ಅನಂತ ನಾಗೇಶ್ವರನ್ ಅವರನ್ನು ಕೇಂದ್ರ ಸರ್ಕಾರ ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಿದೆ.
ಮುಖ್ಯ ಆರ್ಥಿಕ ಸಲಹೆಗಾರರ ಅನುಪಸ್ಥಿತಿಯಲ್ಲಿ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಅವರು ಆರ್ಥಿಕ ಸಮೀಕ್ಷೆಯನ್ನು ಮಂಡಿಸುತ್ತಾರೆ ಎಂಬ ಊಹಾಪೋಹಗಳಿದ್ದವು. ಆದರೆ ಈಗ ಮುಖ್ಯ ಆರ್ಥಿಕ ಸಲಹೆಗಾರರ ನೇಮಕದೊಂದಿಗೆ ಊಹಾಪೋಹಗಳಿಗೆ ತೆರೆ ಎಳೆಯಲಾಗಿದೆ.
ನಾಗೇಶ್ವರನ್ ಅವರು ಕ್ರೆಡಿಟ್ ಸ್ಯೂಸ್ ಗ್ರೂಪ್ ಎಜಿ ಮತ್ತು ಜೂಲಿಯಸ್ ಬೇರ್ ಗ್ರೂಪ್ನ ಶೈಕ್ಷಣಿಕ ಮತ್ತು ಮಾಜಿ ಕಾರ್ಯನಿರ್ವಾಹಕ ಮೂರು ವರ್ಷಗಳ ಅವಧಿ ಮುಗಿದ ನಂತರ ಡಿಸೆಂಬರ್ 2021 ರಲ್ಲಿ ಸಿಇಎ ಕಚೇರಿಯನ್ನು ತೊರೆದ ಕೆ ವಿ ಸುಬ್ರಮಣಿಯನ್ ಅವರ ಉತ್ತರಾಧಿಕಾರಿಯಾಗಿದ್ದಾರೆ.
ನಾಗೇಶ್ವರನ್ ಅವರು ಭಾರತ ಮತ್ತು ಸಿಂಗಾಪುರದಲ್ಲಿ ಹಲವಾರು ಶಾಲೆಗಳು ಮತ್ತು ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ಗಳಲ್ಲಿ ಬೋಧನೆ ಮಾಡಿದ್ದಾರೆ. ಅಲ್ಲದೇ ಹಣಕಾಸು ಮತ್ತು ಆರ್ಥಿಕ ಪತ್ರಿಕೆಗಳಲ್ಲಿ ಲೇಖನ, ವಿಶ್ಲೇಷಣಾ ವರದಿಗಳನ್ನು ಬರೆದಿದ್ದಾರೆ.
ಅನಂತ ನಾಗೇಶ್ವರನ್ ಅವರು 'ಐಎಫ್ಎಂಆರ್ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್'ನ ಡೀನ್ ಆಗಿ ಕಾರ್ಯನಿರ್ವಹಿಸಿದ್ದಾರೆ.