
ಪ್ರಧಾನಿ ಮೋದಿ
ನವದೆಹಲಿ: ಅಫ್ಘಾನಿಸ್ತಾನದ ಜನರಿಗೆ ಮಾನವೀಯ ನೆರವು ನೀಡಲು ಕೇಂದ್ರ ಸರ್ಕಾರ ಸದಾ ಬದ್ಧವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಅಫಘಾನಿಸ್ತಾನಕ್ಕೆ ಗೋಧಿ ಪೂರೈಕೆ ಮತ್ತು ಅದರ ಸಾಗಣೆ ವ್ಯವಸ್ಥೆಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, 50 ಸಾವಿರ ಮೆಟ್ರಿಕ್ ಟನ್ ಗೋದಿಯನ್ನು ಭಾರತ ಪಾಕಿಸ್ತಾನದ ಮೂಲಕ ಕಳಿಹಿಸಿಕೊಟ್ಟಿದೆ. ಮುಂದೆಯೂ ನೆರವಿನ ಹಸ್ತ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ‘ಸಂಕಷ್ಟದಲ್ಲಿದ್ದೇವೆ ಸಹಾಯ ಮಾಡಿ...’: ಕೊನೆಗೂ ವಿಶ್ವದ ಮುಂದೆ ಅಂಗಲಾಚಿದ ತಾಲಿಬಾನಿ ನಾಯಕರು
ಇನ್ನು ಭಾರತವು ಅಫ್ಘಾನಿಸ್ತಾನದಲ್ಲಿ ಅಸ್ತಿತ್ವಕ್ಕೆ ಬಂದಿರುವ ಹೊಸ ತಾಲಿಬಾನ್ ಆಡಳಿತವನ್ನು ಗುರುತಿಸಿಲ್ಲ ಮತ್ತು ಯಾವುದೇ ದೇಶದ ವಿರುದ್ಧ ಯಾವುದೇ ಭಯೋತ್ಪಾದಕ ಚಟುವಟಿಕೆಗಳಿಗೆ ಅಫ್ಘಾನಿಸ್ತಾನದ ಮಣ್ಣನ್ನು ಬಳಸಬಾರದು ಎಂದು ಒತ್ತಾಯಿಸುವುದರ ಜೊತೆಗೆ ಕಾಬೂಲ್ನಲ್ಲಿ ನಿಜವಾದ ಅಂತರ್ಗತ ಸರ್ಕಾರ ರಚನೆಗೆ ಭಾರತ ಒತ್ತಾಯಿಸಿದೆ.
ಅಂತೆಯೇ ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.