ಯುವಕರು ರಾಷ್ಟ್ರ ಮೊದಲು ಎಂಬ ಮನೋಭಾವದಿಂದ ಕೆಲಸ ಮಾಡುವ ದೇಶವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಪ್ರಧಾನಿ ಮೋದಿ
ಸ್ಟಾರ್ಟ್ಅಪ್ಗಳಿಂದ ಹಿಡಿದು ಕ್ರೀಡೆಗಳವರೆಗಿನ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಭಾರತದ ಯುವ ಶಕ್ತಿಯನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಯುವಕರು "ದೇಶವೇ ಮೊದಲು" ಎಂಬ ಮನೋಭಾವದಿಂದ...
Published: 28th January 2022 04:02 PM | Last Updated: 28th January 2022 04:47 PM | A+A A-

ಪ್ರಧಾನಿ ಮೋದಿ
ನವದೆಹಲಿ: ಸ್ಟಾರ್ಟ್ಅಪ್ಗಳಿಂದ ಹಿಡಿದು ಕ್ರೀಡೆಗಳವರೆಗಿನ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಭಾರತದ ಯುವ ಶಕ್ತಿಯನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಯುವಕರು "ದೇಶವೇ ಮೊದಲು" ಎಂಬ ಮನೋಭಾವದಿಂದ ಕೆಲಸ ಮಾಡುವ ದೇಶವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
ದೆಹಲಿಯ ಕರಿಯಪ್ಪ ಮೈದಾನದಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್(ಎನ್ ಸಿಸಿ) ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ಎನ್ ಸಿಸಿಯನ್ನು ಬಲಿಪಡಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಈ ಸಂಬಂಧ ಉನ್ನತ ಮಟ್ಟದ ಪರಿಶೀಲನಾ ಸಮಿತಿ ರಚಿಸಿದ್ದು, ಎನ್ ಸಿಸಿ ಬಲಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಇದನ್ನು ಓದಿ: ಚೀನಾಗೆ ಸೆಡ್ಡು: ಭಾರತ-ಮಧ್ಯ ಏಷ್ಯಾ ರಾಷ್ಟ್ರಗಳ ಮೊದಲ ಶೃಂಗಸಭೆ; ಮೂರು ಸಹಕಾರ ಸೂತ್ರ ಜಪಿಸಿದ ಪ್ರಧಾನಿ ಮೋದಿ
ಎನ್ ಸಿಸಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಲಕಿಯರು ಭಾಗವಹಿಸುತ್ತಿದ್ದಾರೆ ಎಂದ ಪ್ರಧಾನಿ, ಕಳೆದ ಎರಡು ವರ್ಷಗಳಲ್ಲಿ ಗಡಿ ಪ್ರದೇಶಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹೊಸ ಎನ್ಸಿಸಿ ಕೆಡೆಟ್ಗಳನ್ನು ಸೇರಿಸಲಾಗಿದೆ. ಸಶಸ್ತ್ರ ಪಡೆಗಳಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತಿದ್ದಾರೆ ಎಂದರು.
ಡಿಜಿಟಲ್ ತಂತ್ರಜ್ಞಾನ ಮತ್ತು ಮಾಹಿತಿ ಕ್ಷೇತ್ರಕ್ಕೆ ಸಂಬಂಧಿಸಿದ ಸಾಧ್ಯತೆಗಳ ಯುಗದಲ್ಲಿ ತಪ್ಪು ಮಾಹಿತಿಯ ಅಪಾಯಗಳೂ ಇವೆ. ಎನ್ಸಿಸಿ ಸದಸ್ಯರು ಇದಕ್ಕಾಗಿ ಜಾಗೃತಿ ಅಭಿಯಾನವನ್ನು ನಡೆಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.