3 ತಿಂಗಳು ಮೇಲ್ಪಟ್ಟ ಗರ್ಭಿಣಿಯರು 'ಕೆಲಸಕ್ಕೆ ಅನರ್ಹ' ಎಸ್ಬಿಐ ನಿಯಮ: ನೋಟಿಸ್ ನೀಡಿದ ಮಹಿಳಾ ಆಯೋಗ!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಜಾರಿಗೆ ತಂದಿರುವ ಮಹಿಳಾ ವಿರೋಧಿ ಹೊಸ ನಿಯಮವನ್ನು ಹಿಂಪಡೆಯುವಂತೆ ದೆಹಲಿ ಮಹಿಳಾ ಆಯೋಗ ನೋಟಿಸ್ ನೀಡಿದೆ.
Published: 29th January 2022 03:32 PM | Last Updated: 29th January 2022 04:55 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಜಾರಿಗೆ ತಂದಿರುವ ಮಹಿಳಾ ವಿರೋಧಿ ಹೊಸ ನಿಯಮವನ್ನು ಹಿಂಪಡೆಯುವಂತೆ ದೆಹಲಿ ಮಹಿಳಾ ಆಯೋಗ ನೋಟಿಸ್ ನೀಡಿದೆ.
ಮೂರು ತಿಂಗಳ ಮೇಲ್ಪಟ್ಟ ಗರ್ಭಿಣಿಯರಿಗೆ ‘ತಾತ್ಕಾಲಿಕ ಅನರ್ಹ’ ಎಂದು ಹೇಳಿರುವ ಎಸ್ಬಿಐ ಹೆರಿಗೆಯ ನಂತರದ ನಾಲ್ಕು ತಿಂಗಳೊಳಗೆ ಪುನಃ ಕೆಲಸಕ್ಕೆ ಹಾಜರಾಗಬೇಕು ಎಂಬ ನಿಯಮವನ್ನು ಜಾರಿಗೆ ತಂದಿದೆ.
ಎಸ್ಬಿಐ ಬ್ಯಾಂಕಿನ ಈ ಮಹಿಳಾ ವಿರೋಧಿ ನಡೆಯನ್ನು ಖಂಡಿಸಿರುವ ದೆಹಲಿ ಮಹಿಳಾ ಆಯೋಗ ಮುಖ್ಯಸ್ಥೆ ಸ್ವಾತಿ, ಎಸ್ಬಿಐ ಬ್ಯಾಂಕಿನ ಈ ನಿಯಮ ತಾರತಮ್ಯ ಮತ್ತು ಕಾನೂನು ಬಾಹಿರ ನಿಲುವಾಗಿದೆ. ಈ ನಿಯಮವನ್ನು ತಕ್ಷಣವೇ ಹಿಂಪಡೆಯಬೇಕೆಂದು ನೋಟಿಸ್ ನೀಡಿದ್ದೇವೆ. ಜೊತೆಗೆ ಹಿಂದಿನ ನಿಯಮದ ಮತ್ತು ಬದಲಾವಣೆಯಾದ ನಿಯಮಗಳ ಒಮದು ಪ್ರತಿಯನ್ನು ಸಹ ಕೇಳಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಹಳೇ SBI ಎಟಿಎಂ ಕಾರ್ಡ್ ಅವಧಿ ಮುಗಿದಿದೆ; ಹೊಸ ಕಾರ್ಡ್ ಮನೆಗೆ ಬಂದಿಲ್ಲ; ಹಾಗಾದಾಗ ಏನು ಮಾಡಬೇಕು?
ಬ್ಯಾಂಕಿನ ಹೊಸ ನಿಯಮವು ಅಖಿಲ ಭಾರತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೌಕರರ ಸಂಘ ಸೇರಿದಂತೆ ಕೆಲವು ವಲಯಗಳ ಟೀಕೆಗೆ ಗುರಿಯಾಗಿದೆ.