ಕಳುವಾದ ಮೊಬೈಲ್ ಹ್ಯಾಂಡ್ ಸೆಟ್ ಗಳ ಬಳಕೆ ತಡೆಗೆ ಡಿಜಿಟಲ್ ಕ್ರಿಯಾ ಯೋಜನೆಗೆ ಭಾರತ, ಆಸಿಯಾನ್ ಅನುಮೋದನೆ
ಕಳುವಾದ ಮೊಬೈಲ್ ಹಾಗೂ ನಕಲಿ ಮೊಬೈಲ್ ಹ್ಯಾಂಡ್ಸೆಟ್ಗಳ ಬಳಕೆಯನ್ನು ನಿರ್ಬಂಧಿಸುವುದಕ್ಕಾಗಿ ಕ್ರಿಯಾ ಯೋಜನೆಯೆಡೆಗೆ ಕಾರ್ಯನಿರ್ವಹಿಸಲು ಭಾರತ ಹಾಗೂ ಆಸಿಯಾನ್ ರಾಷ್ಟ್ರಗಳು ಅನುಮೋದನೆ ನೀಡಿವೆ.
Published: 29th January 2022 04:52 PM | Last Updated: 29th January 2022 04:52 PM | A+A A-

ಮೊಬೈಲ್ ಬಳಕೆ
ನವದೆಹಲಿ: ಕಳುವಾದ ಮೊಬೈಲ್ ಹಾಗೂ ನಕಲಿ ಮೊಬೈಲ್ ಹ್ಯಾಂಡ್ಸೆಟ್ಗಳ ಬಳಕೆಯನ್ನು ನಿರ್ಬಂಧಿಸುವುದಕ್ಕಾಗಿ ಕ್ರಿಯಾ ಯೋಜನೆಯೆಡೆಗೆ ಕಾರ್ಯನಿರ್ವಹಿಸಲು ಭಾರತ ಹಾಗೂ ಆಸಿಯಾನ್ ರಾಷ್ಟ್ರಗಳು ಅನುಮೋದನೆ ನೀಡಿವೆ.
ವರ್ಚ್ಯುಯಲ್ ಆಗಿ ನಡೆದ ಭಾರತದಿದೊಂದಿಗೆ ನಡೆದ ಆಸಿಯಾನ್ ಡಿಜಿಟಲ್ ಮಿನಿಸ್ಟ್ರೀಸ್ (ಎಡಿಜಿಎಂಐಎನ್) ಸಭೆಯಲ್ಲಿ ಭಾರತ-ಆಸಿಯಾನ್ ಡಿಜಿಟಲ್ ವರ್ಕ್ ಪ್ಲಾನ್-2022 ಯೋಜನೆಗೆ ಅನುಮೋದನೆ ನೀಡಲಾಗಿದ್ದು,
ನಕಲಿ, ಕಳುವಾಗಿರುವ ಮೊಬೈಲ್ ಬಳಕೆಯನ್ನು ನಿರ್ಬಂಧಿಸುವುದು, ವೈಫೈ ಆಕ್ಸಿಸ್ ನೆಟ್ವರ್ಕ್ ಇಂಟರ್ಫ್ರೇಸ್ ಆಫ್ ನ್ಯಾಷನಲ್ ಪಬ್ಲಿಕ್ ಇಂಟರ್ ನೆಟ್, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ಕ್ಷೇತ್ರಗಳ ಪೈಕಿ ಇಂಟರ್ ನೆಟ್ ಆಫ್ ಥಿಂಗ್ಸ್ (ಐಒಟಿ) 5 ಜಿ, ಅತ್ಯಾಧುನಿಕ ಉಪಗ್ರಹ ಸಂವಹನ, ಸೈಬರ್ ಫೋರೆನ್ಸಿಕ್ ಹಾಗೂ ಇನ್ನಿತರ ವಿಷಯಗಳನ್ನು ಉತ್ತೇಜಿಸುವುದು ಹಾಗೂ ಜ್ಞಾನ ಹಂಚಿಕೆ ಭಾರತ- ಆಸಿಯಾನ್ ಒಪ್ಪಂದದ ಪ್ರಮುಖಾಂಶಗಳಾಗಿವೆ.
ಎಡಿಜಿಎಂಐಎನ್ 10 ಆಸಿಯಾನ್ (ಅಸೋಸಿಯೇಷನ್ ಆಫ್ ಸೌತ್-ಈಸ್ಟ್ ಏಷ್ಯನ್ ರಾಷ್ಟ್ರಗಳ) ಟೆಲಿಕಾಂ ಸಚಿವರ ಸಭೆಯಾಗಿದೆ.