ಸಮಾಜವಾದಿ ಪಕ್ಷಕ್ಕೆ ಮತ್ತೊಂದು ಆಘಾತ: ಮಾಜಿ ಸಚಿವ ಶಿವಚರಣ್ ಪ್ರಜಾಪತಿ ಬಿಜೆಪಿಗೆ ಸೇರ್ಪಡೆ
ಐದು ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ನಾನಾ ಪಕ್ಷಗಳ ಮುಖಂಡರು ಸ್ವಂತ ಪಕ್ಷಗಳಿಗೆ ತಿರುಗೇಟು ನೀಡುತ್ತಿದ್ದಾರೆ.
Published: 30th January 2022 08:32 PM | Last Updated: 30th January 2022 08:32 PM | A+A A-

ಬಿಜೆಪಿ ಸೇರಿದ ಶಿವಚರಣ್ ಪ್ರಜಾಪತಿ
ಲಖನೌ: ಐದು ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ನಾನಾ ಪಕ್ಷಗಳ ಮುಖಂಡರು ಸ್ವಂತ ಪಕ್ಷಗಳಿಗೆ ತಿರುಗೇಟು ನೀಡುತ್ತಿದ್ದಾರೆ.
ಬಿಜೆಪಿಯ ಮೂವರು ಸಂಪುಟ ಸಚಿವರು ಸೇರಿದಂತೆ ಹಲವು ಶಾಸಕರು ಇತ್ತೀಚೆಗೆ ಬಿಜೆಪಿಯಿಂದ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ತಿಳಿದ ವಿಚಾರವೇ. ಇದರ ನಡುವೆಯೂ ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಸೊಸೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಎಸ್ಪಿ ಪಕ್ಷಕ್ಕೆ ಭಾರೀ ಶಾಕ್ ನೀಡಿದ್ದಾರೆ.
ಇದೀಗ ಎಸ್ಪಿ ಪಕ್ಷಕ್ಕೆ ಮತ್ತೊಂದು ಶಾಕ್ ತಟ್ಟಿದೆ. ಮಾಜಿ ಸಚಿವ ಮತ್ತು ಎಸ್ಪಿ ನಾಯಕ ಶಿವಚರಣ್ ಪ್ರಜಾಪತಿ ಲಖನೌದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇವರೊಂದಿಗೆ ಬಿಎಸ್ಪಿ ಮತ್ತು ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಬರೇಲಿಯ ತ್ರಿವಳಿ ತಲಾಖ್ ಸಂತ್ರಸ್ತೆ ನಿದಾ ಖಾನ್ ಕೂಡ ಬಿಜೆಪಿ ಸೇರಿದ್ದಾರೆ. ಮತ್ತು ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುವುದಕ್ಕಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ ಎಂದು ನಿದಾಖಾನ್ ಬಹಿರಂಗಪಡಿಸಿದರು.