ಪಂಜಾಬ್ ನಲ್ಲಿ ಆಪ್ ಅಧಿಕಾರಕ್ಕೆ ಬಂದರೆ ಜನತೆ ಮೇಲೆ ಹೊಸ ತೆರಿಗೆ ಹೇರುವುದಿಲ್ಲ: ಕೇಜ್ರಿವಾಲ್
ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಯಾವುದೇ ಹೊಸ ತೆರಿಗೆಯ ಹೊರೆಯನ್ನು ಜನತೆಯ ಮೇಲೆ ಹೇರುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು...
Published: 30th January 2022 12:35 AM | Last Updated: 30th January 2022 12:35 AM | A+A A-

ಅರವಿಂದ್ ಕೇಜ್ರಿವಾಲ್
ಜಲಂಧರ್: ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಯಾವುದೇ ಹೊಸ ತೆರಿಗೆಯ ಹೊರೆಯನ್ನು ಜನತೆಯ ಮೇಲೆ ಹೇರುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಆಶ್ವಾಸನೆ ನೀಡಿದ್ದಾರೆ.
ಜಲಂಧರ್ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಬಲವಂತದ ಧಾರ್ಮಿಕ ಮತಾಂತರದ ವಿರುದ್ಧ ಕಾನೂನು ರಚಿಸಬೇಕು. ಧರ್ಮವು ಖಾಸಗಿ ವಿಷಯವಾಗಿದೆ. ದೇವರನ್ನು ಪೂಜಿಸುವ ಹಕ್ಕು ಎಲ್ಲರಿಗೂ ಇದೆ. ಧಾರ್ಮಿಕ ಮತಾಂತರದ ವಿರುದ್ಧ ಖಂಡಿತ ಕಾನೂನನ್ನು ರಚಿಸಬೇಕು. ಆದರೆ ಈ ಮೂಲಕ ಯಾವ ವ್ಯಕ್ತಿಗೂ ಕಿರುಕುಳ ನೀಡಬಾರದು. ಬೆದರಿಕೆಯೊಡ್ಡಿ ಮತಾಂತರ ಮಾಡುವುದು ತಪ್ಪು ಎಂದು ಹೇಳಿದ್ದಾರೆ.
ಇದನ್ನು ಓದಿ: ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಮದನ್ ಮೋಹನ್ ಮಿತ್ತಲ್ ಎಸ್ ಎಡಿ ಸೇರ್ಪಡೆ
ಮನೆ ಬಾಗಿಲಿಗೆ ಸೇವೆ ಒದಗಿಸುವ ಮೊಹಲ್ಲಾ ಚಿಕಿತ್ಸಾಲಯಗಳನ್ನು ಪ್ರಾರಂಭಿಸಲಾಗುವುದು. ಪಂಜಾಬ್‌ನಲ್ಲಿ 16000 ಕ್ಲಿನಿಕ್‌ಗಳನ್ನು ನಿರ್ಮಿಸುತ್ತೇವೆ ಮತ್ತು ಆಸ್ಪತ್ರೆಗಳನ್ನು ನವೀಕರಿಸುತ್ತೇವೆ. ದೆಹಲಿಯಂತೆ ಪಂಜಾಬ್ ಕೂಡ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಲಿದೆ ಎಂದು ಹೇಳಿದರು.
ಕೈಗಾರಿಕೋದ್ಯಮಿಗಳನ್ನು ದೆಹಲಿಯಲ್ಲಿ ಬಿಜೆಪಿಯ ಮತಬ್ಯಾಂಕ್ ಎಂದು ಪರಿಗಣಿಸಲಾಗಿದೆ. ಆದರೆ ದೆಹಲಿಯ ಉದ್ಯಮಿಗಳು ಮೊದಲು ನನಗೆ ಮತ ಹಾಕಲಿಲ್ಲ. ನಾನು ಅವರ ಹೃದಯ ಗೆದ್ದ ನಂತರ ಮತ ಹಾಕಲು ಪ್ರಾರಂಭಿಸಿದರು. ನಮಗೆ 5 ವರ್ಷ ಕಾಲಾವಕಾಶ ನೀಡಿ, ನಾವು ನಿಮ್ಮ ಹೃದಯವನ್ನೂ ಗೆಲ್ಲುತ್ತೇವೆ ಎಂದು ಅವರು ಹೇಳಿದರು.
117 ಸದಸ್ಯ ಬಲವಿರುವ ಪಂಜಾಬ್ ವಿಧಾನಸಭೆಗೆ ಫೆಬ್ರವರಿ 20 ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.