
ಮದನ್ ಮೋಹನ್ ಮಿತ್ತಲ್ ಎಸ್ ಎಡಿ ಸೇರ್ಪಡೆ
ಚಂಡೀಗಢ: ಬಿಜೆಪಿ ಹಿರಿಯ ನಾಯಕ ಮತ್ತು ಪಂಜಾಬ್ ಮಾಜಿ ಸಚಿವ ಮದನ್ ಮೋಹನ್ ಮಿತ್ತಲ್ ಅವರು ಶನಿವಾರ ಕೇಸರಿ ಪಕ್ಷ ತೊರೆದಿದ್ದು, ಎಸ್‌ಎಡಿ ಸೇರಿದ್ದಾರೆ.
ತಮ್ಮ ಪುತ್ರ ಅರವಿಂದ್ ಮಿತ್ತಲ್ ಅವರಿಗೆ ಆನಂದಪುರ ಸಾಹಿಬ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರಾಕರಿಸಿದ ನಂತರ ಅಸಮಾಧಾನಗೊಂಡಿದ್ದ ಮದನ್ ಮೋಹನ್ ಮಿತ್ತಲ್ ಅವರು ಇಂದು ಎಸ್ ಎಡಿ ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಅವರ ಸಮ್ಮುಖದಲ್ಲಿ ಶಿರೋಮಣಿ ಅಕಾಲಿದಳ ಸೇರ್ಪಡೆಯಾದರು.
ಇದನ್ನು ಓದಿ: ಬಿಜೆಪಿ ದೇಶದ ಶ್ರೀಮಂತ ರಾಜಕೀಯ ಪಕ್ಷ: ಬರೋಬ್ಬರಿ 4 ಸಾವಿರ ಕೋಟಿ ರೂ. ಆಸ್ತಿ!
ಆನಂದಪುರ ಸಾಹಿಬ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪರ್ಮಿಂದರ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ.
ಬಿಜೆಪಿ ನಾಯಕನನ್ನು ಪಕ್ಷದ ಮಡಿಲಿಗೆ ಸ್ವಾಗತಿಸಿದ ಸುಖ್‌ಬೀರ್ ಸಿಂಗ್ ಬಾದಲ್ ಅವರು, ಮಿತ್ತಲ್ ಮತ್ತು ಅವರ ಬೆಂಬಲಿಗರ ಸೇರ್ಪಡೆಯಿಂದ ಎಸ್‌ಎಡಿಗೆ ಮತ್ತಷ್ಟು ಬಲ ಬಂದಿದೆ ಎಂದು ಹೇಳಿದ್ದಾರೆ.
ಬಾದಲ್ ಅವರು ಮದನ್ ಮೋಹನ್ ಮಿತ್ತಲ್ ಅವರನ್ನು ಪಕ್ಷದ ಹಿರಿಯ ಉಪಾಧ್ಯಕ್ಷರನ್ನಾಗಿಯೂ ನೇಮಕ ಮಾಡಿದ್ದಾರೆ.