ಕೇಂದ್ರ ಬಜೆಟ್ 2022: ಆರ್ಥಿಕ ಸಮೀಕ್ಷೆ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್; ಲೋಕಸಭೆ ಕಲಾಪ ನಾಳೆಗೆ ಮುಂದೂಡಿಕೆ
ಸಂಸತ್‌ನ ಬಜೆಟ್ ಅಧಿವೇಶನಕ್ಕೆ ಸೋಮವಾರ ಚಾಲನೆ ದೊರೆತಿದ್ದು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣವನ್ನೂ ಮಾಡಿದ್ದಾರೆ. ಇದೀಗ 2021-22 ರ ಆರ್ಥಿಕ ಸಮೀಕ್ಷೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನ ಮುಂದಿಟ್ಟಿದ್ದಾರೆ.
Published: 31st January 2022 01:17 PM | Last Updated: 31st January 2022 01:43 PM | A+A A-

ನಿರ್ಮಲಾ ಸೀತಾರಾಮನ್
ನವದೆಹಲಿ: ಸಂಸತ್‌ನ ಬಜೆಟ್ ಅಧಿವೇಶನಕ್ಕೆ ಸೋಮವಾರ ಚಾಲನೆ ದೊರೆತಿದ್ದು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣವನ್ನೂ ಮಾಡಿದ್ದಾರೆ. ಇದೀಗ 2021-22 ರ ಆರ್ಥಿಕ ಸಮೀಕ್ಷೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನ ಮುಂದಿಟ್ಟಿದ್ದಾರೆ,
ಆರ್ಥಿಕ ಸಮೀಕ್ಷೆಯನ್ನು ನಿರ್ಮಲಾ ಸೀತಾರಾಮನ್ ಅವರು ಮಂಡನೆ ಮಾಡಿದ ಬಳಿಕ ಲೋಕಸಭಾ ಕಲಾಪವನ್ನು ಫೆಬ್ರವರಿ 1ಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ: ಸಂಸತ್ ಅಧಿವೇಶನದಲ್ಲಿ ರಾಷ್ಟ್ಪಪತಿ ಕೋವಿಂದ್ ಭಾಷಣ; ಚುನಾವಣೆಗಿಂತ ಕಲಾಪ ಮುಖ್ಯ ಎಂದ ಪ್ರಧಾನಿ ಮೋದಿ
ಒಂದು ರೀತಿಯಲ್ಲಿ ಆರ್ಥಿಕ ಸಮೀಕ್ಷೆಯನ್ನು ದೇಶದ ಆರ್ಥಿಕ ಆರೋಗ್ಯದ ಇಣುಕುನೋಟ ಎನ್ನಬಹುದಾಗಿದೆ. ಇದರ ಮೂಲಕ ದೇಶದ ಆರ್ಥಿಕತೆ ಹೇಗಿದೆ, ಸರ್ಕಾರದ ಯೋಜನೆಗಳು ಎಷ್ಟು ವೇಗವಾಗಿ ಸಾಗುತ್ತಿವೆ, ಬೆಳವಣಿಗೆ ಎಷ್ಟಿರಬಹುದು ಎಂಬುದನ್ನು ಸರ್ಕಾರ ಹೇಳಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ನಾಲ್ಕನೇ ಬಾರಿಗೆ ಸದನದಲ್ಲಿ ಬಜೆಟ್ ಮಂಡಿಸಲಿದ್ದು, ಕೆಳ ಮತ್ತು ಮಧ್ಯಮ ವರ್ಗದವರು ಈ ಬಜೆಟ್ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.