
ಮಾಜಿ ಪೊಲೀಸ್ ಅಧಿಕಾರಿ ಬೃಂದಾ
ಗುವಾಹಟಿ: ಮಾಜಿ ಪೊಲೀಸ್ ಅಧಿಕಾರಿ ತೌನೊಜಂ ಬೃಂದಾ ಅವರು ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಜನತಾ ದಳ(ಯುನೈಟೆಡ್) ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ತೌನೊಜಂ ಬೃಂದಾ ಅವರು ಭಾನುವಾರ ಜೆಡಿಯು ಸೇರ್ಪಡೆಯಾಗಿದ್ದು, ನಂತರ ಅವರನ್ನು ಇಂಫಾಲ್ ಕಣಿವೆಯ ಯೈಸ್ಕುಲ್ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಲಾಯಿತು.
ಇದನ್ನು ಓದಿ: ಚುನಾವಣೆಯತ್ತ ಚಿತ್ತ; ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಉತ್ತರಾಖಂಡ್ ಟೋಪಿ, ಮಣಿಪುರದ ಶಾಲು ಧರಿಸಿದ ಪ್ರಧಾನಿ ಮೋದಿ
ಜೆಡಿಯು ಉತ್ತಮ ಆಯ್ಕೆ ಎಂದು ನಾನು ನಂಬಿದ್ದೇನೆ. ನಾನು ಸ್ಥಳೀಯ ಪರಿಸ್ಥಿತಿಗಳನ್ನು ಪರಿಗಣಿಸಿ, ಆಡಳಿತ ಪಕ್ಷದ(ಬಿಜೆಪಿ) ಮಿತ್ರ ಪಕ್ಷ ಜೆಡಿಯುನಿಂದ ಸ್ಪರ್ಧಿಸಬೇಕೆಂದು ಜನರು ಬಯಸಿದ್ದರು ಎಂದು ಬೃಂದಾ ಅವರು ಹೇಳಿದ್ದಾರೆ.
ಪೊಲೀಸ್ ಅಧಿಕಾರಿ ಬೃಂದಾ ಅವರು ಹಾಲಿ ಶಾಸಕ ಬಿಜೆಪಿಯ ತೊಕ್ಚೋಮ್ ಸತ್ಯಬ್ರತ ಸಿಂಗ್ ಅವರ ವಿರುದ್ಧ ಸ್ಪರ್ಧಿಸಲಿದ್ದಾರೆ.
ಬಿಜೆಪಿ ಮುಖಂಡ ತಂಗಜಂ ಅರುಣ್ಕುಮಾರ್ ಕೂಡ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಕೇಸರಿ ಪಕ್ಷಕ್ಕೆ ರಾಜೀನಾಮೆ ನೀಡಿ ಜೆಡಿಯು ಸೇರಿದ್ದಾರೆ.