
ಶಶಿ ತರೂರ್
ನವದೆಹಲಿ: ದೇಶದಲ್ಲಿ ಹರಡುತ್ತಿರುವ ಒಮಿಕ್ರಾನ್ ವೈರಾಣುವಿಗಿಂತ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮೆಲ್ಲಾ ಭಾಷಣಗಳಲ್ಲಿ ಹೇಳುವ 'ಓ ಮಿತ್ರೋಂ' (ಓ ಮಿತ್ರರೇ) ಎಂಬ ಪದ ತುಂಬಾ ಅಪಾಯಕಾರಿಯಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಧಾರ್ಮಿಕ ಮತಾಂತರಕ್ಕೆ ಹೆದರಿ ವಿದ್ಯಾರ್ಥಿನಿ ಆತ್ಮಹತ್ಯೆ: ಪ್ರಕರಣ ಸಿಬಿಐಗೆ ಹಸ್ತಾಂತರಿಸಿದ ಮದ್ರಾಸ್ ಹೈಕೋರ್ಟ್
ಶಶಿ ತರೂರ್ ಅವರು ಪ್ರಧಾನಿಯವರ ಓ ಮಿತ್ರೋಂ ಪದವನ್ನು ಒಮಿಕ್ರಾನ್ ಕೊರೊನಾ ವೈರಾಣುವಿಗೆ ಹೋಲಿಸಿದ್ದಾರೆ. ಕೊರೊನಾ ವೈರಾಣುಗಳ ಪೈಕಿ ಸುರ್ಬಲ ವೈರಾಣು, ಶಕ್ತಿಶಾಲಿ ವೈರಾಣು ತಳಿ ಎಂಬುದಿರುತ್ತದೆ. ಆದರೆ ಓ ಮಿತ್ರೋಂ ಪೈಕಿ ದುರ್ಬಲ ಯಾವುದೂ ಇಲ್ಲ. ಕೋಮು ಸೌಹಾರ್ದತೆಗೆ ಧಕ್ಕೆ, ಧರ್ಮಾಂಧತೆಗೆ 'ಓ ಮಿತ್ರೋಂ' ಕಾರಣವಾಗಿದೆ. ಅದರಿಂದಾಗಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೆಟ್ಟು ಬೀಳುತ್ತಿದೆ ಎಂದು ಶಶಿ ತರೂರ್ ಟ್ವೀಟ್ ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಪೆಗಾಸಸ್ ವಿಚಾರವಾಗಿ ಪ್ರಧಾನಿ ಮೋದಿ ದೇಶ ಉದ್ದೇಶಿಸಿ ಮಾತನಾಡಬೇಕು: ರಾಜಸ್ಥಾನ ಸಿಎಂ ಗೆಹ್ಲೋಟ್
Far more dangerous than #Omicron is “O Mitron”! We are measuring the consequences of the latter every day in increased polarisation, promotion of hatred & bigotry, insidious assaults on the Constitution & the weakening of our democracy. There is no “milder variant” of this virus.
— Shashi Tharoor (@ShashiTharoor) January 31, 2022