ಉದ್ಯೋಗಾಕಾಂಕ್ಷಿಗಳೇ ಎಚ್ಚರ: ಸರ್ವ ಶಿಕ್ಷಾ ಅಭಿಯಾನದ ನಕಲಿ ವೆಬ್ ಸೈಟ್ ಪತ್ತೆ, ಉದ್ಯೋಗದ ನೆಪದಲ್ಲಿ ಹಣ ವಸೂಲಿ!

ಇತ್ತೀಚಿನ ದಿನಗಳಲ್ಲಿ ವೆಬ್ ಸೈಟ್, ಯುಟ್ಯೂಬ್ ಗಳು ಸೇರಿದಂತೆ ಹತ್ತಾರು ನಕಲಿ ತಾಣಗಳು ತಪ್ಪು ಮಾಹಿತಿ ನೀಡುವ ಮೂಲಕ ಜನರನ್ನು ಹಾದಿ ತಪ್ಪಿಸುತ್ತಿವೆ. ಮತ್ತೆ ಕೆಲವರು ಇದನ್ನೇ ಅಸ್ತ್ರ ಮಾಡಿಕೊಂಡು ಜನರ ಸುಲಿಗೆಗೂ ಇಳಿದಿವೆ.
ನಕಲಿ ವೆಬ್ ಸೈಟ್
ನಕಲಿ ವೆಬ್ ಸೈಟ್

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವೆಬ್ ಸೈಟ್, ಯುಟ್ಯೂಬ್ ಗಳು ಸೇರಿದಂತೆ ಹತ್ತಾರು ನಕಲಿ ತಾಣಗಳು ತಪ್ಪು ಮಾಹಿತಿ ನೀಡುವ ಮೂಲಕ ಜನರನ್ನು ಹಾದಿ ತಪ್ಪಿಸುತ್ತಿವೆ. ಮತ್ತೆ ಕೆಲವರು ಇದನ್ನೇ ಅಸ್ತ್ರ ಮಾಡಿಕೊಂಡು ಜನರ ಸುಲಿಗೆಗೂ ಇಳಿದಿವೆ.

ಇದೇ ರೀತಿಯಲ್ಲಿ ನಕಲಿ ವೆಬ್ ಸೈಟ್ 'http://samagra.shikshaabhiyan.co.in' ಸರ್ವ ಶಿಕ್ಷಾ ಅಭಿಯಾನದ ಅಧಿಕೃತ ವೆಬ್ ಸೈಟ್ ಎಂದು ಹೇಳಿಕೊಳ್ಳುತ್ತಿದೆ. ಅಲ್ಲದೇ ಉದ್ಯೋಗಾವಕಾಶಗಳನ್ನು ನೀಡುತ್ತಿದೆ. ಇದು ಜಾಡು ಹಿಡಿದು ಹೊರಟ ಪಿಐಬಿ ಫ್ಯಾಕ್ಟ್ ಚೆಕ್ ನಡೆಸಿದ್ದು, ಸರ್ವ ಶಿಕ್ಷಾ ಅಭಿಯಾನದ ಅಧಿಕೃತ ವೆಬ್ ಸೈಟ್ ಯಾವುದು ಎಂಬುದನ್ನು ಕಂಡು ಹಿಡಿದಿದೆ.

ವೆಬ್ ಸೈಟ್ 'http://samagra.shikshaabhiyan.co.in' ಇದು ನಕಲಿಯಾಗಿದ್ದು, ಇದು ಭಾರತ ಸರ್ಕಾರದೊಂದಿಗೆ ಸಂಯೋಜಿತವಾಗಿಲ್ಲ.  https://samagra.education.gov.in ಸರ್ವ ಶಿಕ್ಷಾ ಅಭಿಯಾನದ ಅಧಿಕೃತ ವೆಬ್ ಸೈಟ್ ಆಗಿದೆ ಎಂದು ಪಿಐಬಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com