ವೈದ್ಯರ ದಿನ, ಲೆಕ್ಕ ಪರಿಶೋಧಕರ ದಿನ: ಪ್ರಧಾನಿ ಮೋದಿ ಶುಭಾಶಯ

ಜುಲೈ 1 ವಿಶ್ವ ವೈದ್ಯರ ದಿನ, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವೈದ್ಯಕೀಯ ವೃಂದಕ್ಕೆ, ಭೂಮಿ ಮೇಲಿರುವ ಮಾನವ ಕುಲವನ್ನು ಕಾಪಾಡುವಲ್ಲಿ ಶ್ರಮಿಸುವ ವೈದ್ಯರಿಗೆ ಧನ್ಯವಾದ ಮತ್ತು ಶುಭಾಶಯಗಳನ್ನು ತಿಳಿಸಿದ್ದಾರೆ.
ಪಿಎಂ ಮೋದಿ
ಪಿಎಂ ಮೋದಿ

ನವದೆಹಲಿ: ಜುಲೈ 1 ವಿಶ್ವ ವೈದ್ಯರ ದಿನ, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವೈದ್ಯಕೀಯ ವೃಂದಕ್ಕೆ, ಭೂಮಿ ಮೇಲಿರುವ ಮಾನವ ಕುಲವನ್ನು ಕಾಪಾಡುವಲ್ಲಿ ಶ್ರಮಿಸುವ ವೈದ್ಯರಿಗೆ ಧನ್ಯವಾದ ಮತ್ತು ಶುಭಾಶಯಗಳನ್ನು ತಿಳಿಸಿದ್ದಾರೆ.

ವೈದ್ಯರ ವೃತ್ತಿ, ಅವರ ಪ್ರಾಮುಖ್ಯತೆ, ಕೋವಿಡ್ ನಂತಹ ಕಷ್ಟದ ಸಂದರ್ಭದಲ್ಲಿ ಯಾವ ರೀತಿ ದೇಶದ ವೈದ್ಯಕೀಯ ವೃಂದ ಮುಂಚೂಣಿ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ ಎಂದು ಹೇಳುವ ವಿಡಿಯೊವನ್ನು ಕೂಡ ಶೇರ್ ಮಾಡಿದ್ದಾರೆ.

ಖ್ಯಾತ ವೈದ್ಯ ಮತ್ತು ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಬಿದನ್ ಚಂದ್ರ ರಾಯ್ ಅವರ ಜನ್ಮದಿನ ಮತ್ತು ಮರಣ ದಿನ ಒಂದೇ ದಿನ ಜುಲೈ 1ರಂದಾಗಿದ್ದು ಈ ಅವರ ಜಯಂತಿ ಮತ್ತು ಪುಣ್ಯತಿಥಿ ಅಂಗವಾಗಿ ವೈದ್ಯರ ದಿನ ಆಚರಿಸಲಾಗುತ್ತಿದೆ. 

ಚಾರ್ಟರ್ಡ್ ಅಕೌಂಟೆಂಟ್ ನಮ್ಮ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ. CA ದಿನದಂದು, ಎಲ್ಲಾ ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಶುಭಾಶಯಗಳು. ಆರ್ಥಿಕತೆಯ ಬೆಳವಣಿಗೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಅವರು ಶ್ರಮಿಸುತ್ತಿರಲಿ ಎಂದು ಆಶಿಸಿದ್ದಾರೆ. 

ಲೆಕ್ಕ ಪರಿಶೋಧಕರ ದಿನ: ಇಂದು ಜುಲೈ 1 ಲೆಕ್ಕ ಪರಿಶೋಧಕರು(ಚಾರ್ಟೆರ್ಡ್ ಅಕೌಂಟೆಂಟ್) ನಮ್ಮ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ. ಎಲ್ಲಾ ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಶುಭಾಶಯಗಳು. ಆರ್ಥಿಕತೆಯ ಬೆಳವಣಿಗೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಅವರು ಶ್ರಮಿಸುತ್ತಿರಲಿ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com